ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚೆಪಾಕ್ ಕ್ರೀಡಾಂಗಣ ನವೀಕರಣದ ವಿಡಿಯೊ ಹಂಚಿಕೊಂಡ ಟಿಎನ್‌ಸಿಎ

Chepauk Stadium Renovation: ವಿಶ್ವ ದರ್ಜೆಯ ಒಳಚರಂಡಿ ವ್ಯವಸ್ಥೆ ಜತೆಗೆ ಮಳೆ ಬಂದು ನಿಂತ 45 ನಿಮಿಷದಲ್ಲಿಯೇ ಮತ್ತೆ ಪಂದ್ಯಕ್ಕೆ ಕ್ರೀಡಾಂಗಣವನ್ನು ಸಜ್ಜುಗೊಳಿಸುವ 'ಸಬ್‌ ಏರ್ ಸಿಸ್ಟಮ್' ತಂತ್ರಜ್ಞಾನವನ್ನು ಅಳವಡಿಸುವ ಯೋಜನೆ ಇದೆ ಎನ್ನಲಾಗಿದೆ. ಸದ್ಯ ಈ ವ್ಯವಸ್ಥೆ ಇರುವ ಏಕೈಕ ಮೈದಾನವೆಂದರೆ ಅದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನ.

ಚೆಪಾಕ್‌ ಸ್ಟೇಡಿಯಂನಲ್ಲೂ 'ಸಬ್‌ ಏರ್ ಸಿಸ್ಟಮ್' ತಂತ್ರಜ್ಞಾನ ಅಳವಡಿಕೆ!

Abhilash BC Abhilash BC Aug 20, 2025 2:37 PM

ಚೆನ್ನೈ: ಭಾರತ ಐತಿಹಾಸಿಕ ಕ್ರಿಕೆಟ್‌ ಮೈದಾನಗಳಲ್ಲಿ ಒಂದಾಗಿರುವ ಚೆನ್ನೈಯ ಚೆಪಾಕ್‌ ಸ್ಟೇಡಿಯಂನ ನವೀಕರಣ(Chepauk Stadium Renovation) ನಡೆಯುತ್ತಿದ್ದು ಇದರ ವಿಡಿಯೊವನ್ನು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್(TNCA) ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. 2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸಮಯದಲ್ಲಿ ಕೆಲವು ಪಂದ್ಯಗಳನ್ನು ಈ ಮೈದಾನದಲ್ಲಿ ಆಯೋಜಿಸಲಾಗುವುದು ಇದೇ ಕಾರಣಕ್ಕೆ ಮೈದಾನವನ್ನು ನವೀಕರಿಸಲಾಗುತ್ತಿದೆ.

ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಹಂಚಿಕೊಂಡಿರುವ ವೀಡಿಯೊದಲ್ಲಿ, ಮೈದಾನ ಮಧ್ಯ ಭಾಗದಲ್ಲಿರುವ ಪಿಚ್‌ ಹೊರತುಪಡಿಸಿ ಮೈದಾನದ ಸಂಪೂರ್ಣ ಸುತ್ತಳತೆಯನ್ನು ಅಗೆದು ಹಾಕಲಾಗಿದೆ. ಮೂಲಗಳ ಪ್ರಕಾರ ಕ್ರೀಡಾಂಗಣದ ಹೊರಾಂಗಣವನ್ನು ಕೂಡ ಹೊಸದಾಗಿ ನಿರ್ಮಾಣ ಮಾಡಲಾಗುತ್ತದೆ ಎನ್ನಲಾಗಿದೆ.

ವಿಶ್ವ ದರ್ಜೆಯ ಒಳಚರಂಡಿ ವ್ಯವಸ್ಥೆ ಜತೆಗೆ ಮಳೆ ಬಂದು ನಿಂತ 45 ನಿಮಿಷದಲ್ಲಿಯೇ ಮತ್ತೆ ಪಂದ್ಯಕ್ಕೆ ಕ್ರೀಡಾಂಗಣವನ್ನು ಸಜ್ಜುಗೊಳಿಸುವ 'ಸಬ್‌ ಏರ್ ಸಿಸ್ಟಮ್' ತಂತ್ರಜ್ಞಾನವನ್ನು ಅಳವಡಿಸುವ ಯೋಜನೆ ಇದೆ ಎನ್ನಲಾಗಿದೆ. ಸದ್ಯ ಈ ವ್ಯವಸ್ಥೆ ಇರುವ ಏಕೈಕ ಮೈದಾನವೆಂದರೆ ಅದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನ.



ಚೆಪಾಕ್ ಬಹಳ ಹಿಂದಿನಿಂದಲೂ ಸ್ಪಿನ್ನರ್‌ಗಳಿಗೆ ಸ್ಪಿನ್‌ಗೆ ಅನುಕೂಲಕರವಾದ ಪಿಚ್‌ ಆಗಿದೆ. ಇಈಗ ನವೀಕರಣಗೊಂಡ ಬಳಿಕ ಪಿಚ್‌ ಹೇಗೆ ವರ್ತಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಇದು ದೇಶದ ಎರಡನೇ ಅತ್ಯಂತ ಹಳೆಯ ಮೈದಾನವಾಗಿದೆ. 1916 ರಲ್ಲಿ ಇದನ್ನು ಸ್ಥಾಪಿಸಲಾಯಿತು. ಇಲ್ಲಿ ನಡೆದ ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಸರಣಿಯ ಎರಡನೇ T20I ಆಗಿತ್ತು.

ಇದನ್ನೂ ಓದಿ Duleep Trophy: ದುಲೀಪ್‌ ಟ್ರೋಫಿಯಿಂದ ಹೊರಬಿದ್ದ ಇಶಾನ್‌ ಕಿಶನ್‌