ರೀಲ್ಸ್ ಹುಚ್ಚಿಗೆ ಪ್ರಾಣ ಬಿಟ್ಟ ಮೂವರು ಸಹೋದರರು: ಟ್ರಕ್‌ಗೆ ಡಿಕ್ಕಿ ಹೊಡೆದ ವೇಗವಾಗಿ ಬಂದ ಬೈಕ್, ವಿಡಿಯೋ ನೋಡಿ
Accident: ರೀಲ್ಸ್ ಮಾಡಲು ಹೋಗಿ ಮೂವರು ಸಹೋದರರು ದುರ್ಮರಣಕ್ಕೀಡಾಗಿದ್ದಾರೆ. ಹೆದ್ದಾರಿಯಲ್ಲಿ ವೇಗವಾಗಿ ಬಂದ ಬೈಕ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸೋದರರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಹೆದ್ದಾರಿಯಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ದುಸ್ಸಾಹಸ ಮಾಡಲು ಹಾಕಿ ಜೀವವನ್ನೇ ಕಳೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ -
ಭೋಪಾಲ್, ಏ.20: ಸಾಮಾಜಿಕ ಮಾಧ್ಯಮಕ್ಕಾಗಿ ರೀಲ್ಸ್ ಮಾಡಲು ಹೋಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ದುರಂತ ಘಟನೆಗಳು ನರೆಯುತ್ತಲೇ ಇರುತ್ತವೆ. ಆದರೂ ಯುವಜನತೆ ಮಾತ್ರ ಇದರಿಂದ ಎಚ್ಚೆತ್ತಂತೆ ಕಾಣುತ್ತಿಲ್ಲ. ಇದೀಗ ಮಧ್ಯಪ್ರದೇಶದಲ್ಲೊಂದು (Madhya Pradesh) ಇಂಥದ್ದೆ ದುರ್ಘಟನೆ ನಡೆದಿದೆ. ರೀಲ್ಸ್ ಮಾಡಲು ಹೋಗಿ ಮೂವರು ಸಹೋದರರು ದುರ್ಮರಣಕ್ಕೀಡಾಗಿದ್ದಾರೆ. ಹೆದ್ದಾರಿಯಲ್ಲಿ ವೇಗವಾಗಿ ಬಂದ ಬೈಕ್ ಟ್ರಕ್ ಗೆ ಡಿಕ್ಕಿ ಹೊಡೆದ (accident) ಪರಿಣಾಮ ಸೋದರರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಹೆದ್ದಾರಿಯಲ್ಲಿ ನಡೆದಿದೆ.
ಏಪ್ರಿಲ್ 14 ರಂದು ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ದುಸ್ಸಾಹಸ ಮಾಡಲು ಹಾಕಿ ಜೀವವನ್ನೇ ಕಳೆದುಕೊಂಡಿದ್ದಾರೆ. ಮೂವರು ಸಹೋದರರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡರು. ಮೌಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಪನ್ನಿ ಪಥಾರಿಯಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಎರಡು ಬೈಕ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಐವರು ವೇಗವಾಗಿ ಚಲಿಸಿದ ಪರಿಣಾಮ ಈ ಅನಾಹುತ ಸಂಭವಿಸಿದೆ.
ಇಲ್ಲಿದೆ ವಿಡಿಯೊ:
📍Mauganj, Madhya Pradesh: Three youths riding a motorcycle without helmets, one holding a country-made pistol while their friends filmed from another bike, rammed into a stationary truck on NH-135. All three lost their life on the spot. pic.twitter.com/ddNjMlgcG4
— Deadly Kalesh (@Deadlykalesh) April 19, 2026
ಮೂವರು ಸಹೋದರರು ಅತಿ ವೇಗದ ಪಲ್ಸರ್ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದಾಗ, ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಇಟ್ಟಿಗೆ ತುಂಬಿದ ಟ್ರೇಲರ್‌ಗೆ ಅದು ಡಿಕ್ಕಿ ಹೊಡೆದಿದೆ. ರೀಲ್ ಶೂಟ್ ಮಾಡಲು ಪ್ರಯತ್ನಿಸುವಾಗ, ಹಿಂಬದಿ ಸವಾರರಲ್ಲಿ ಒಬ್ಬ ದೇಸಿ ನಿರ್ಮಿತ ಪಿಸ್ತೂಲ್ ಹಿಡಿದು ಫೋಸ್ ನೀಡಿದ್ದ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಘಟನೆಯ ವಿಡಿಯೊದಲ್ಲಿ ಮೂವರು ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರುವುದನ್ನು ತೋರಿಸಲಾಗಿದೆ. ನಿಂತಿದ್ದ ಟ್ರಾಲಿ ಇದ್ದಕ್ಕಿದ್ದಂತೆ ಮುಂದೆ ಕಾಣಿಸಿಕೊಂಡಿತು. ವೇಗವಾಗಿ ಬರುತ್ತಿದ್ದ ಬೈಕ್ ಅನ್ನು ನಿಯಂತ್ರಿಸಲು ಸಾಧ್ಯವಾಗದೆ, ಅದರ ಹಿಂಭಾಗಕ್ಕೆ ಡಿಕ್ಕಿ ಹೊಡೆದರು. ಮೂವರು ಸವಾರರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ದುರ್ಮರಣಕ್ಕೀಡಾದರು.
Bear Attack: ಕೊರಟಗೆರೆಯಲ್ಲಿ ಹುಚ್ಚು ಕರಡಿ ಆರ್ಭಟ; ಅರಣ್ಯ ಇಲಾಖೆ ವಾಹನದ ಟೈರ್ ಕಿತ್ತೆಸೆದು ದಾಳಿ
ಹಿಂದಿನಿಂದ ಸಾಹಸವನ್ನು ಚಿತ್ರೀಕರಿಸುತ್ತಿದ್ದ ಮತ್ತೊಂದು ಬೈಕ್‌ನಲ್ಲಿದ್ದ ಇಬ್ಬರು ಯುವಕರು ಕೂಡ ವೇಗವಾಗಿದ್ದರಿಂದ ಅದೇ ಟ್ರೇಲರ್‌ಗೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ಘಟನೆಯಲ್ಲಿ ಇಬ್ಬರೂ ಸವಾರರು ಗಂಭೀರವಾಗಿ ಗಾಯಗೊಂಡರು. ಅಪಘಾತದಲ್ಲಿ ಮೃತಪದವರನ್ನು 17 ವರ್ಷದ ಉಪಲಕ್ಷ ಕೋಲ್, 22 ವರ್ಷದ ಅಮರೀಶ್ ಕೋಲ್ ಮತ್ತು 17 ವರ್ಷದ ಹೇಮರಾಜ್ ಕೋಲ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಬೇಲಾ ಗ್ರಾಮದ ಒಂದೇ ಕುಟುಂಬದ ಸದಸ್ಯರು.
ಗಾಯಗೊಂಡ ಚಿತ್ಪುರ್ವಾ ಗ್ರಾಮದ ಪ್ರಶಾಂತ್ ದ್ವಿವೇದಿ ಮತ್ತು ಅವರ ಸಹೋದರ ಪ್ರದೀಪ್ ದ್ವಿವೇದಿ ಅವರನ್ನು ಮೊದಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರೇವಾದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಮಾಡಲು ಪ್ರಯತ್ನಿಸುವಾಗ ಅಪಾಯಕಾರಿ ಸವಾರಿ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಸಚಿ ಪಾಠಕ್ ಹೇಳಿದ್ದಾರೆ. ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.