ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cyber Crime: ಡಿಜಿಟಲ್‌ ಅರೆಸ್ಟ್‌ ಪ್ರಕರಣದಲ್ಲಿ ಮೊದಲ ಬಾರಿಗೆ ಶಿಕ್ಷೆ ಪ್ರಕಟ; 9 ಕಿಡಿಗೇಡಿಗಳಿಗೆ ಸಜೆ

ನಿವೃತ್ತ ಕೃಷಿ ವಿಜ್ಞಾನಿಯೊಬ್ಬರಿಗೆ ( agricultural scientist) ಸುಮಾರು 1 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಇದೇ ಮೊದಲ ಬಾರಿಗೆ 9 ಮಂದಿಗೆ ಪಶ್ಚಿಮ ಬಂಗಾಳ (west bengal) ನ್ಯಾಯಾಲಯವು (court) ಶಿಕ್ಷೆ ವಿಧಿಸಿದೆ. ಮಹಾರಾಷ್ಟ್ರದ (maharastra) ನಾಲ್ವರು, ಹರಿಯಾಣದ (haryana) ಮೂವರು ಮತ್ತು ಗುಜರಾತ್‌ನ (gujarat) ಇಬ್ಬರ ವಿರುದ್ಧ ಸೈಬರ್ ವಂಚನೆ ಅಪರಾಧದಡಿಯಲ್ಲಿ ಪ್ರಕರಣ ದಾಖಲಾಗಿದೆ.

ಡಿಜಿಟಲ್‌ ಅರೆಸ್ಟ್‌ ಪ್ರಕರಣದಲ್ಲಿ ಮೊದಲ ಬಾರಿಗೆ ಶಿಕ್ಷೆ ಪ್ರಕಟ

ನವದೆಹಲಿ: ನಿವೃತ್ತ ಕೃಷಿ ವಿಜ್ಞಾನಿಯೊಬ್ಬರಿಗೆ ( agricultural scientist) ಸುಮಾರು 1 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಇದೇ ಮೊದಲ ಬಾರಿಗೆ 9 ಮಂದಿಗೆ ಪಶ್ಚಿಮ ಬಂಗಾಳ (West Bengal) ನ್ಯಾಯಾಲಯವು (court) ಶಿಕ್ಷೆ ವಿಧಿಸಿದೆ. ಮಹಾರಾಷ್ಟ್ರದ (Maharastra) ನಾಲ್ವರು, ಹರಿಯಾಣದ (Haryana) ಮೂವರು ಮತ್ತು ಗುಜರಾತ್‌ನ (Gujarat) ಇಬ್ಬರ ವಿರುದ್ಧ ಸೈಬರ್ ವಂಚನೆ ಅಪರಾಧದಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಂತರ್ ರಾಜ್ಯ ಗ್ಯಾಂಗ್‌ನ ಒಂಬತ್ತು ಮಂದಿಗೆ ಪಶ್ಚಿಮ ಬಂಗಾಳದ ಕಲ್ಯಾಣಿಯ ಉಪ-ವಿಭಾಗೀಯ ನ್ಯಾಯಾಲಯವು ಗುರುವಾರ ಸೈಬರ್ ವಂಚನೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ.

ನಿವೃತ್ತ ಕೃಷಿ ವಿಜ್ಞಾನಿಯೊಬ್ಬರಿಗೆ ಸುಮಾರು 1 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಮಹಾರಾಷ್ಟ್ರದ ನಾಲ್ವರು, ಹರಿಯಾಣದ ಮೂವರು ಮತ್ತು ಗುಜರಾತ್‌ನ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ ಕಲ್ಯಾಣಿ ನ್ಯಾಯಾಲಯದ ನ್ಯಾಯಾಧೀಶರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಶಿಕ್ಷೆ ವಿಧಿಸಿದೆ.

ಈ ಕುರಿತು ಮಾಹಿತಿ ನೀಡಿದ ರಣಘಾಟ್ ಪೊಲೀಸ್ ಜಿಲ್ಲೆಯ ಹೆಚ್ಚುವರಿ ಎಸ್‌ಪಿ (ಪ್ರಧಾನ ಕಚೇರಿ) ಸಿದ್ಧಾರ್ಥ್ ಧಾಪೋಲಾ, ನಿವೃತ್ತ ಕೃಷಿ ವಿಜ್ಞಾನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸೈಬರ್ ವಂಚನೆ ಪ್ರಕರಣದಡಿಯಲ್ಲಿ 2024ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ಪೊಲೀಸರು ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ವಿವಿಧ ರಾಜ್ಯಗಳಿಂದ ಅಪರಾಧಿಗಳನ್ನು ಬಂಧಿಸಿದ್ದಾರೆ. 2024 ರಲ್ಲಿ ಮಹಾರಾಷ್ಟ್ರ, ಹರಿಯಾಣ, ಗುಜರಾತ್ ಮತ್ತು ರಾಜಸ್ಥಾನದ ಸೈಬರ್ ಅಪರಾಧ ದಳಗಳು ಒಬ್ಬ ಮಹಿಳೆ ಸೇರಿದಂತೆ 13 ಜನರನ್ನು ಬಂಧಿಸಿವೆ ಎಂದರು.

ತನಿಖೆಯ ವೇಳೆ ಆರೋಪಿಗಳಿಂದ ಮೊಬೈಲ್ ಫೋನ್‌ಗಳು, ಬ್ಯಾಂಕ್ ಪಾಸ್‌ಬುಕ್‌ಗಳು, ಚೆಕ್ ಪುಸ್ತಕಗಳು ಮತ್ತು ಪ್ಯಾನ್ ಕಾರ್ಡ್‌ಗಳಂತಹ ಹಲವಾರು ದಾಖಲೆ ಮತ್ತು ಸಾಧನಗಳನ್ನು ಹಾಗೂ 100 ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗ್ಯಾಂಗ್ ನ ನಾಯಕ ಆಗ್ನೇಯ ಏಷ್ಯಾದ ದೇಶದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ ಎಂದು ಧಾಪೋಲಾ ತಿಳಿಸಿದ್ದಾರೆ.