ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಮ್ಯಾಂಚೆಸ್ಟರ್‌ನಲ್ಲಿ ಭಾರತದ ಟೆಸ್ಟ್‌ ಸಾಧನೆ ಹೇಗಿದೆ?

India's Test Record Manchester: ಕಳೆದ 89 ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡವು ಓಲ್ಡ್ ಟ್ರಾಫರ್ಡ್‌ನಲ್ಲಿ ಒಮ್ಮೆಯೂ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಮೊದಲ ಬಾರಿಗೆ 1936 ರಲ್ಲಿ ಈ ಸ್ಥಳದಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಆಡಿತ್ತು. ಆ ಪಂದ್ಯ ಡ್ರಾ ಗೊಂಡಿತ್ತು. ಅಂದಿನಿಂದ ಇಂದಿನ ವರೆಗೆ ಭಾರತ ಒಟ್ಟು 9 ಪಂದ್ಯಗಳನ್ನು ಆಡಿದೆ. ಈ ಪೈಕಿ ನಾಲ್ಕು ಸೋಲು ಮತ್ತು ಐದು ಡ್ರಾ ಸಾಧಿಸಿದೆ.

ಮ್ಯಾಂಚೆಸ್ಟರ್‌ನಲ್ಲಿ ಭಾರತದ ಟೆಸ್ಟ್‌ ಸಾಧನೆ ಹೇಗಿದೆ?

Profile Abhilash BC Jul 18, 2025 3:24 PM

ಮ್ಯಾಂಚೆಸ್ಟರ್‌: ಎಲ್ಲವೂ ಯೋಜನೆ ಯಂತೆ ಸಾಗಿದರೆ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌(Old Trafford in Manchester) ಅಂಗಳದಲ್ಲಿ ಟೀಮ್‌ ಇಂಡಿಯಾ(IND vs ENG) ಹೊಸ ಇತಿಹಾಸವೊಂದನ್ನು ಬರೆಯಲಿದೆ. ಇಲ್ಲಿ ನಡೆಯುವ ಆತಿಥೇಯ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಗೆದ್ದರೆ, ಓಲ್ಡ್‌ ಟ್ರಾಫರ್ಡ್‌ ಅಂಗಳದಲ್ಲಿ ಟೆಸ್ಟ್‌ ಗೆದ್ದ ಭಾರತದ ಮೊದಲ ನಾಯಕನೆಂಬ ಹೆಗ್ಗಳಿಕೆ ಶುಭಮನ್‌ ಗಿಲ್‌ ಅವರದಾಗಲಿದೆ.

ಓಲ್ಡ್ ಟ್ರಾಫರ್ಡ್ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ಗೆ ಹೆಸರುವಾಸಿ. ಆದರೆ ಇದೇ ಹೆಸರಿನ ಕ್ರಿಕೆಟ್ ಮೈದಾನವನ್ನು ಸಹ ಹೊಂದಿದೆ. ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನವು ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆಂಡರ್ಸನ್ ಅವರ ತವರು. 1857 ರಲ್ಲಿ ಸ್ಥಾಪನೆಯಾದ ಈ ಕ್ರೀಡಾಂಗಣವು ಮೊದಲ ಬಾರಿಗೆ 1884 ರಲ್ಲಿ, ಸುಮಾರು 141 ವರ್ಷಗಳ ಹಿಂದೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್‌ ಪಂದ್ಯ ನಡೆದಿತ್ತು. ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು. ಇದು ವಿಶ್ವದ ಅತ್ಯಂತ ಹಳೆಯ ಕ್ರಿಕೆಟ್ ಸ್ಥಳಗಳಲ್ಲಿ ಒಂದಾಗಿದೆ.

ಕಳೆದ 89 ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡವು ಓಲ್ಡ್ ಟ್ರಾಫರ್ಡ್‌ನಲ್ಲಿ ಒಮ್ಮೆಯೂ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಮೊದಲ ಬಾರಿಗೆ 1936 ರಲ್ಲಿ ಈ ಸ್ಥಳದಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಆಡಿತ್ತು. ಆ ಪಂದ್ಯ ಡ್ರಾ ಗೊಂಡಿತ್ತು. ಅಂದಿನಿಂದ ಇಂದಿನ ವರೆಗೆ ಭಾರತ ಒಟ್ಟು 9 ಪಂದ್ಯಗಳನ್ನು ಆಡಿದೆ. ಈ ಪೈಕಿ ನಾಲ್ಕು ಸೋಲು ಮತ್ತು ಐದು ಡ್ರಾ ಸಾಧಿಸಿದೆ.

ಈ ಮೈದಾನದಲ್ಲಿ ಭಾರತ ಪರ ಉತ್ತಮ ಬ್ಯಾಟಿಂಗ್‌ ದಾಖಲೆ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್‌ ಅಜರುದ್ದೀನ್‌ ಹೆಸರಿನಲ್ಲಿದೆ. ಅವರು 1990ರಲ್ಲಿ ನಡೆದಿದ್ದ ಪಂದ್ಯದಲ್ಲಿ 179 ರನ್‌ ಬಾರಿಸಿದ್ದರು. ಇದು ಈ ಮೈದಾನದಲ್ಲಿ ಭಾರತೀಯ ಬ್ಯಾಟರ್‌ ಒಬ್ಬರ ಅತ್ಯಧಿಕ ಗರಿಷ್ಠ ದಾಖಲೆಯಾಗಿ ಉಳಿದಿದೆ. 102 ರನ್‌ಗೆ 6 ವಿಕೆಟ್‌ ಕಿತ್ತ ಎಡಗೈ ಸ್ಪಿನ್ನರ್‌ ದಿಲೀಪ್‌ ದೋಶಿ ಅತ್ಯುತ್ತಮ ಬೌಲಿಂಗ್‌ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ ENG vs IND: ಹನುಮಾನ್‌ ಚಾಲೀಸಾ ಪಠಿಸಿ ಅಭ್ಯಾಸ ಆರಂಭಿಸಿದ ಭಾರತ ತಂಡ