ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Yogesh Gowda murder: ಯೋಗೇಶ್‌ ಗೌಡ ಕೊಲೆ ಕೇಸ್‌ ತೀರ್ಪು ಏಪ್ರಿಲ್‌ 15ರಂದು

2016ರಲ್ಲಿ ಕೊಲೆ ನಡೆದಾಗ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೇ ಯೋಗಿಶ್‌ ಗೌಡ ಜಿಲ್ಲಾ ಪಂಚಾಯತ್‌ ಚುನಾವಣೆ ಗೆದ್ದಿದ್ದರಿಂದ ಹೈಪ್ರೊಫೈಲ್ ಕೇಸ್ ಆಗಿತ್ತು. ಈ ಕೊಲೆಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ವಿನಯ್‌ ಕುಲಕರ್ಣಿ ಹೆಸರು ಬಂದಿದ್ದರಿಂದ ಮತ್ತಷ್ಟು ಸಂಚಲನ ಮೂಡಿಸಿತ್ತು.

ಯೋಗೇಶ್‌ ಗೌಡ ಕೊಲೆ ಕೇಸ್‌ ತೀರ್ಪು ಏಪ್ರಿಲ್‌ 15ರಂದು

ಯೋಗೇಶ್‌ ಗೌಡ, ವಿನಯ ಕುಲಕರ್ಣಿ -

ಹರೀಶ್‌ ಕೇರ
ಹರೀಶ್‌ ಕೇರ Apr 9, 2026 1:08 PM

ಬೆಂಗಳೂರು, ಏ.09 : ಧಾರವಾಡದ (Dharawada) ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ (yogesh gowda murder case) ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ಏಪ್ರಿಲ್ 15ರಂದು ಪ್ರಕಟವಾಗಲಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ವಿಚಾರಣೆ ನಡೆಸಿ, ವಾದ ಪ್ರತಿ ವಾದಗಳನ್ನು ಆಲಿಸಿ, ಏಪ್ರಿಲ್ 15ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು. ಈ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulakarni) ಎ-15 ಆಗಿದ್ದಾರೆ.

2016ರಲ್ಲಿ ಕೊಲೆ ನಡೆದಾಗ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೇ ಯೋಗಿಶ್‌ ಗೌಡ ಜಿಲ್ಲಾ ಪಂಚಾಯತ್‌ ಚುನಾವಣೆ ಗೆದ್ದಿದ್ದರಿಂದ ಹೈಪ್ರೊಫೈಲ್ ಕೇಸ್ ಆಗಿತ್ತು. ಈ ಕೊಲೆಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ವಿನಯ್‌ ಕುಲಕರ್ಣಿ ಹೆಸರು ಬಂದಿದ್ದರಿಂದ ಮತ್ತಷ್ಟು ಸಂಚಲನ ಮೂಡಿಸಿತ್ತು. ಅಲ್ಲದೇ ಪೊಲೀಸ್ ಅಧಿಕಾರಿಗಳು ಕೂಡಾ ಇದರಲ್ಲಿ ತಳಕು ಹಾಕಿಕೊಂಡಿದ್ದಾರೆ. ಈ ಕೊಲೆ ನಡೆದಿದ್ದಾದರೂ ಏಕೆ ಎನ್ನುವುದಕ್ಕೆ ಸಿಬಿಐ ಹಲವು ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಇಟ್ಟಿದೆ.

ಪ್ರಕರಣದ ಹಿನ್ನೆಲೆ

2016ರ ಜೂನ್ 15ರಂದು ಧಾರವಾಡ ಸಪ್ತಾಪೂರ ಜಿಮ್‌ನಲ್ಲಿ ಯೋಗೇಶ ಗೌಡ ಕೊಲೆ ನಡೆದಿತ್ತು. ಆಗಷ್ಟೇ ಅವರು ಜಿಲ್ಲಾ ಪಂಚಾಯತ್‌ ಸದಸ್ಯ ಆಗಿದ್ದರು. ಯೋಗೇಶ್‌ ಗೌಡ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಪಟ್ಟ ಏರಲು ವಿನಯ್ ಕುಲಕರ್ಣಿ ಕಾರಣವಾಗಿದ್ದರು. ಒಪ್ಪಂದದಂತೆ ಒಂದು ವರ್ಷದ ಬಳಿಕ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಿತ್ತು. ಅದರೆ ಅಧಿಕಾರ ಹಸ್ತಾಂತರ ಮಾಡದ್ದು ವಿನಯಕ್‌ ಕುಲಕರ್ಣಿ ಸಿಟ್ಟಿಗೆ ಕಾರಣವಾಗಿತ್ತು.

ಹೆಬ್ಬಳ್ಳಿ ಜಿಲ್ಲಾ ಪಂಚಾಯತ್‌ ಸ್ಥಾನಕ್ಕೆ ಯೋಗೇಶ್ ಗೌಡ ನಿಂತಾಗ ಎಲೆಕ್ಷನ್ ನಡೆಯಬೇಕಿದ್ದ ದಿನವೇ ಅವರನ್ನು ಬಂಧಿಸಲಾಗಿತ್ತು. ಪಿಎಸ್‌ಐ ಮೇಲೆ ಹಲ್ಲೆ ಎಸಗಿದ ಆರೋಪದ ಅಡಿ ಅವರನ್ನು ಬಂಧಿಸಲಾಗಿತ್ತು. ಹೀಗಿದ್ದರೂ ಜೈಲಿನಲ್ಲಿದ್ದಾಗಲೇ ಜಿಲ್ಲಾ ಪಂಚಾಯತ್‌ ಚುನಾವಣೆ ಗೆದ್ದಿದ್ದರು. ಇದು ರಾಜಕೀಯ ದ್ವೇಷಕ್ಕೆ ಕಾರಣವಾಗಿತ್ತು.

Vinay Kulakarni: ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು

ಚುನಾವಣೆಯಲ್ಲಿ ಗೆದ್ದು ಬಂದ ನಂತರ 2016ರ ಏಪ್ರಿಲ್‌ನಲ್ಲಿ ಜಿಲ್ಲಾ ಪಂಚಾಯತ್‌ ಸಭಾ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ವಿನಯ ಕುಲಕರ್ಣಿ ಅವರ ಜೊತೆ ಮಾತಿನ ಚಕಮಕಿ ಕೂಡಾ ನಡೆದಿತ್ತು. ಇದು ವಿನಯ್ ಕುಲಕರ್ಣಿ ಅವರನ್ನು ಕೆರಳಿಸಿದ್ದರಿಂದ ಇವರ ನಡುವೆ ಮತ್ತಷ್ಟು ವೈಮನಸ್ಸಿಗೆ ಕಾರಣ ಆಗಿತ್ತು. ಏಪ್ರಿಲ್ ಕಳೆದ ಬಳಿಕ ಜೂನ್‌ 15 ರಂದು ಯೋಗೇಶ್‌ ಗೌಡ ಧಾರವಾಡದ ಸಪ್ತಾಪೂರದ ಉದಯ್ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ರಾಜಕೀಯ ದ್ವೇಷದಿಂದಲೇ ಕೊಲೆ ನಡೆದಿದೆ ಎಂದು ಬಿಜೆಪಿ ಆರೋಪಗಳ ಸುರಿಮಳೆಗೈದಿತ್ತು. ಪೊಲೀಸರು ಕೂಡ ಎಫ್‌ಐಆರ್‌ನಲ್ಲಿ ಜಮೀನು ವಿವಾದದಿಂದಲೇ ಕೊಲೆ ನಡೆದಿದೆ ಎಂದು ದಾಖಲಿಸಿದ್ದರು. ಹೆಚ್ಚಿನ ತನಿಖೆ ನಡೆಸಲು ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಬಿಜೆಪಿ ಘಟಾನುಘಟಿ ನಾಯಕರು ಅಂದಿನ ಗೃಹ ಸಚಿವ ಪರಮೇಶ್ವರ್ ಮೇಲೆ ಒತ್ತಡ ಹೇರಿದ್ದರು. ಸರ್ಕಾರ ಮಾತ್ರ ಹೆಚ್ಚಿನ ತನಿಖೆಗೆ ಮುಂದಾಗಿರಲಿಲ್ಲ. ಬಳಿಕ 2019ರಲ್ಲಿ ಬಿಎಸ್‌ವೈ ಸರ್ಕಾರ ರಚನೆಯಾದ ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ತನಿಖೆ ಆರಂಭಿಸಿದ ಸಿಬಿಐ ಸಿಬಿಐ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಮಾಡಿತ್ತು.