ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ಭಾರತ ಹಾಗೂ ಮಾಲ್ಡೀವ್ಸ್‌ ಸಂಬಂಧ ಸಾಗರದಷ್ಟೇ ಆಳವಾಗಿದೆ; ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಈ ವೇಳೆ ಮಾತನಾಡಿದ ಮೋದಿ ಭಾರತ ಮತ್ತು ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ 60 ನೇ ವರ್ಷವನ್ನು ಆಚರಿಸುತ್ತಿವೆ ಎಂದು ಹೇಳಿದ್ದಾರೆ. ಈ ಸಂಬಂಧವು "ಇತಿಹಾಸದಷ್ಟು ಹಳೆಯದು ಮತ್ತು ಸಾಗರದಷ್ಟು ಆಳವಾಗಿದೆ" ಎಂದು ಅವರು ಹೇಳಿದ್ದಾರೆ.

ಭಾರತ- ಮಾಲ್ಡೀವ್ಸ್‌ ಸಂಬಂಧದ ಕುರಿತು ಮೋದಿ ಮಾತು

Vishakha Bhat Vishakha Bhat Jul 25, 2025 8:55 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಈ ವೇಳೆ ಮಾತನಾಡಿದ ಮೋದಿ ಭಾರತ ಮತ್ತು ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ 60 ನೇ ವರ್ಷವನ್ನು ಆಚರಿಸುತ್ತಿವೆ ಎಂದು ಹೇಳಿದ್ದಾರೆ. ಈ ಸಂಬಂಧವು "ಇತಿಹಾಸದಷ್ಟು ಹಳೆಯದು ಮತ್ತು ಸಾಗರದಷ್ಟು ಆಳವಾಗಿದೆ" ಎಂದು ಅವರು ಹೇಳಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಮಾಲ್ಡೀವ್ಸ್‌ ಹಾಗೂ ಭಾರತದ ಸಂಪೂರ್ಣ ಮೊಹಮ್ಮದ್ ಮುಯಿಝು ಅಧಿಕಾರ ವಹಿಸಿಕೊಂಡಿದ್ದ ಮೇಲೆ ಸಂಪೂರ್ಣವಾಗಿ ಹದಗೆಟ್ಟಿತ್ತು.

ಮೋದಿ ಮಾಲ್ಡೀವ್ಸ್‌ಗೆ ಬಂದಿಳಿಯುತ್ತಲೇ ಡಾ. ಮೊಹಮ್ಮದ್ ಮುಯಿಝು ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತ ಕೋರಿದ್ದಾರೆ. ನಂತರ ಉಭಯ ನಾಯಕರು ಭಾರತ ಮತ್ತು ಮಾಲ್ಡೀವ್ಸ್‌ನ ಸಾಂಪ್ರದಾಯಿಕ ದೋಣಿಗಳನ್ನು ಪ್ರತಿನಿಧಿಸುವ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು. ಇದೇ ವೇಳೆ, ಈ ನಡೆ ನಮ್ಮ ಎರಡು ರಾಷ್ಟ್ರಗಳು ಶಾಶ್ವತ ನೆರೆಹೊರೆಯವರಾಗಿ ಮಾತ್ರವಲ್ಲ, ಸಹಪ್ರಯಾಣಿಕರಾಗಿ ಕೂಡ ಬೆಸೆದುಕೊಂಡಿದ್ದೇವೆ ಎಂಬುದನ್ನು ಸೂಚಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಮಾಲ್ಡೀವ್ಸ್‌ನ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಭಾರತದ ನಿರಂತರ ಬೆಂಬಲವನ್ನು ಪ್ರಧಾನಿ ಮೋದಿ ಭರವಸೆ ನೀಡಿದರು .

ಇದೇ ವೇಳೆ, ನಮ್ಮ ಅಭಿವೃದ್ಧಿ ಪಾಲುದಾರಿಕೆಗೆ ಹೊಸ ತಿರುವಾಗಿ, ಮಾಲ್ಡೀವ್ಸ್‌ಗೆ 565 ಮಿಲಿಯನ್ ಡಾಲರ್ (ಸುಮಾರು 5000 ಕೋಟಿ ರೂ.) ಸಾಲ ಸಹಾಯವನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಮೋದಿ ಘೋಷಿಸಿದ್ದಾರೆ. ವ್ಯಾಪಾರದ ಕುರಿತು ಮಾತನಾಡಿದ ಅವರು, ಎರಡೂ ದೇಶಗಳು ವಿಶಾಲ ಆರ್ಥಿಕ ಪಾಲುದಾರಿಕೆಯ ಕುರಿತು ಚರ್ಚೆಗಳನ್ನು ಪ್ರಾರಂಭಿಸಿವೆ ಎಂದು ಹೇಳಿದರು. "ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ಪ್ರಾರಂಭವಾಗಿವೆ" ಎಂದು ಮೋದಿ ಹೇಳಿದ್ದಾರೆ. ಹೂಡಿಕೆ ಸಂಬಂಧಗಳನ್ನು ಬಲಪಡಿಸಲು, "ಭಾರತ ಮತ್ತು ಮಾಲ್ಡೀವ್ಸ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಕೆಲಸ ಮಾಡುತ್ತವೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi: ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಅವರು ಕೇವಲ ಪ್ರದರ್ಶನಕ್ಕಷ್ಟೇ; ರಾಹುಲ್‌ ಗಾಂಧಿ ವಾಗ್ದಾಳಿ

ಮೋದಿ ಹಾಗೂ ಡಾ. ಮೊಹಮ್ಮದ್ ಮುಯಿಝು ಮಹತ್ವದ 8 ಒಪ್ಪಂದಗಳಿಗೆ ಇಂದು ಸಹಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತಕ್ಕೆ ಕೃತಜ್ಞತೆ ಸಲ್ಲಿಸಿ, ಮುಕ್ತ ವ್ಯಾಪಾರ ಒಪ್ಪಂದದಿಂದ ಎರಡೂ ದೇಶಗಳ ವಾಣಿಜ್ಯಕ್ಕೆ ಧನಾತ್ಮಕ ಉತ್ಸಾಹ ದೊರೆಯಲಿದೆ ಮತ್ತು ಸಾಗಣೆಗೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.