ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುತ್ತಿರುವ ಕಾರಿನ ಬ್ಯಾನೆಟ್ ಮೇಲೆ ಯುವತಿಯ ಡಾನ್ಸ್- ಈಕೆಯ ಹುಚ್ಚಾಟವನ್ನೊಮ್ಮೆ ನೋಡಿ

Woman dance on moving car: ಚಲಿಸುತ್ತಿರುವ ಕಾರಿನ ಬ್ಯಾನೆಟ್ ಮೇಲೆ ನಿಂತುಕೊಂಡು ಯುವತಿಯೊಬ್ಬಳು ನೃತ್ಯ ಪ್ರದರ್ಶನ ನೀಡುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮುಂಬೈನ ಖಾರ್ಘರ್ ಪ್ರದೇಶದಲ್ಲಿ ಮರ್ಸಿಡಿಸ್-ಬೆನ್ಜ್ ಕಾರಿನ ಬಾನೆಟ್ ಮೇಲೆ ಯುವತಿಯೊಬ್ಬಳು ವೈರಲ್ ಆಗಿರುವ ಔರಾ ಫಾರ್ಮಿಂಗ್ ನೃತ್ಯ ಮಾಡಿದ್ದಾಳೆ.

ಚಲಿಸುತ್ತಿರುವ ಕಾರಿನ ಬ್ಯಾನೆಟ್ ಮೇಲೆ ಯುವತಿಯ ಡಾನ್ಸ್!

Priyanka P Priyanka P Jul 26, 2025 1:42 PM

ಮುಂಬೈ: ಇತ್ತೋಚೆಗೆ ರೀಲ್ಸ್‌ ಹುಚ್ಚಿನಿಂದ ಜನ ಎಂಥಾ ರಿಸ್ಕ್‌ ತೆಗೆದುಕೊಳ್ಳೋಕು ರೆಡಿ ಇರ್ತಾರೆ. ಕೆಲವೊಮ್ಮೆ ಮಿತಿ ಮೀರಿದ ಹುಚ್ಚಾಟದಿಂದ ತಮ್ಮ ಪ್ರಾಣ ಮಾತ್ರವಲ್ಲದೇ ಇತರರನ್ನೂ ಅಪಾಯಕ್ಕೆ ತಳ್ಳುತ್ತಾರೆ. ಇದೀಗ ಅಂತಹದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದ್ದು, ಚಲಿಸುತ್ತಿರುವ ಕಾರಿನ ಬ್ಯಾನೆಟ್ ಮೇಲೆ ನಿಂತುಕೊಂಡು ಯುವತಿಯೊಬ್ಬಳು ನೃತ್ಯ ಪ್ರದರ್ಶನ ನೀಡುತ್ತಿರುವ ದೃಶ್ಯದ ವಿಡಿಯೊ ವೈರಲ್(Viral Video) ಆಗಿದೆ. ಮರ್ಸಿಡಿಸ್-ಬೆನ್ಜ್ ಕಾರಿನ ಬಾನೆಟ್ ಮೇಲೆ ಯುವತಿಯೊಬ್ಬಳು ಔರಾ ಫಾರ್ಮಿಂಗ್ ನೃತ್ಯವನ್ನು ಪ್ರದರ್ಶಿಸಿದ್ದಾಳೆ. ಮುಂಬೈನ ಖಾರ್ಘರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿಡಿಯೊ ನೋಡಿದ ನೆಟ್ಟಿಗರು ಯುವತಿಯ ಹುಚ್ಚಾಟಕ್ಕೆ ಹೀನಾಯಮಾನವಾಗಿ ಜಾಡಿಸಿದ್ದಾರೆ.

ರೀಲ್ಸ್ ಮಾಡುವ ಸಲುವಾಗಿ ಯುವತಿ ಚಲಿಸುತ್ತಿರುವ ಐಷಾರಾಮಿ ಕಾರಿನ ಬಾನೆಟ್ ಮೇಲೆ ಔರಾ ನೃತ್ಯ ಅಥವಾ ಬೋಟ್ ಡಾನ್ಸ್ ಎಂದೇ ಖ್ಯಾತಿ ಪಡೆದಿರುವ ನೃತ್ಯವನ್ನು ಪ್ರದರ್ಶಿಸಿದ್ದಾಳೆ. ಇದನ್ನು ಸ್ಥಳದಲ್ಲಿರುವವರು ರೆಕಾರ್ಡ್ ಮಾಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಯುವಕ, ಮಹಿಳೆಯ ಗೆಳಯ ಚಾಲನಾ ಪರವಾನಗಿಯನ್ನು ಹೊಂದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.

ವಿಡಿಯೊ ಇಲ್ಲಿದೆ:



ಅಧಿಕಾರಿಗಳ ಪ್ರಕಾರ, ಈ ವಿಡಿಯೊವನ್ನು ನವಿ ಮುಂಬೈನಲ್ಲಿ ಚಿತ್ರೀಕರಿಸಲಾಗಿದ್ದು, ಈ ಸಾಹಸದ ನೃತ್ಯ ಪ್ರದರ್ಶನ ವೈರಲ್ ಆದ ಸ್ವಲ್ಪ ಸಮಯದ ನಂತರ ಸಂಚಾರ ಪೊಲೀಸರ ಗಮನಕ್ಕೆ ಬಂದಿದೆ. ನವಿ ಮುಂಬೈ ಪೊಲೀಸರು ಕೂಡಲೇ ಚಾಲಕನನ್ನು ಬಂಧಿಸಿದ್ದಾರೆ. ಅಪಾಯಕಾರಿ ಚಾಲನೆ ಮತ್ತು ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡಿದ್ದಕ್ಕಾಗಿ ಅವನ ವಿರುದ್ಧ ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Jagan Reddy: ಜಗನ್‌ ಮೋಹನ್‌ ರೆಡ್ಡಿ ವಾಹನದ ಅಡಿಗೆ ಬಿದ್ದು ವೈಎಸ್‌ಆರ್‌ಸಿಪಿಯ ಕಾರ್ಯಕರ್ತ‌ ಸಾವು; ವಿಡಿಯೊ ವೈರಲ್‌

ಯುವತಿಯು ರಸ್ತೆಯಲ್ಲಿ ಚಲಿಸುವ ವಾಹನದ ಬ್ಯಾನೆಟ್ ಮೇಲೆ ನಿಂತು ರೀಲ್ ಅನ್ನು ಚಿತ್ರೀಕರಿಸುತ್ತಿದ್ದಳು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇಂತಹ ಕೃತ್ಯಗಳು ಕಾನೂನನ್ನು ಉಲ್ಲಂಘಿಸುವುದಲ್ಲದೆ, ಜೀವಗಳನ್ನು ಗಂಭೀರ ಅಪಾಯಕ್ಕೆ ಸಿಲುಕಿಸುತ್ತವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್, ಕಾಮೆಂಟ್ ಗಿಟ್ಟಿಸಿಕೊಳ್ಳಲು ಜೀವವನ್ನು ಅಪಾಯಕ್ಕೊಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.