Iranian Oil: ಇರಾನ್ ಜೊತೆ ತೈಲ ವ್ಯಾಪಾರ: ಭಾರತೀಯ ಕಂಪನಿಗಳ ಮೇಲೆ ನಿರ್ಬಂಧ ಹೇರಿದ ಅಮೆರಿಕ
ಇರಾನಿನ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿರುವ ಆರೋಪದ ಮೇಲೆ ಕನಿಷ್ಠ ಆರು ಭಾರತೀಯ ಕಂಪನಿಗಳ ಮೇಲೆ ಅಮೆರಿಕ (America) ನಿರ್ಬಂಧ ಹೇರಿದೆ, 20 ಜಾಗತಿಕ ಘಟಕಗಳ ವಿರುದ್ಧ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ.


ವಾಷಿಂಗ್ಟನ್: ಇರಾನಿನ ಪೆಟ್ರೋಲಿಯಂ (Iranian Oil) ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿರುವ ಆರೋಪದ ಮೇಲೆ ಕನಿಷ್ಠ ಆರು ಭಾರತೀಯ ಕಂಪನಿಗಳ ಮೇಲೆ ಅಮೆರಿಕ (America) ನಿರ್ಬಂಧ ಹೇರಿದೆ, 20 ಜಾಗತಿಕ ಘಟಕಗಳ ವಿರುದ್ಧ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ. ಇರಾನ್ ಮೇಲೆ ಆರ್ಥಿಕ ಒತ್ತಡವನ್ನು ಹೇರುವ ಸಲುವಾಗಿ ಅಮೆರಿಕ ಈ ಕ್ರಮವನ್ನು ಕೈಗೊಂಡಿದೆ. ಇರಾನ್ ಪೆಟ್ರೋಲಿಯಂ ಉತ್ಪನ್ನಗಳ ಖರೀದಿ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ ಭಾರತೀಯ ಕಂಪನಿಗಳು ತಿಳಿದೂ ಸಹ "ಮಹತ್ವದ ವಹಿವಾಟುಗಳನ್ನು" ನಡೆಸಿವೆ ಎಂದು ಆರೋಪಿಸಿ ಅಮೆರಿಕದ ವಿದೇಶಾಂಗ ಇಲಾಖೆ ಬುಧವಾರ ನಿರ್ಬಂಧಗಳನ್ನು ಘೋಷಿಸಿತು.
ಇರಾನ್ ಆಡಳಿತವು "ತನ್ನ ಭಯೋತ್ಪಾದಕತೆಯನ್ನು ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಉತ್ತೇಜಿಸುವುದನ್ನು ಮುಂದುವರೆಸಿದೆ" ಎಂದು ಅಮೆರಿಕ ಹೇಳಿದೆ. ವಿದೇಶಗಳಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸಲು ಮತ್ತು ಹರಡಲು ಹಣ ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಅಮೆರಿಕ ಅವಕಾಶ ನೀಡುವುದಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. 20 ಘಟಕಗಳು ಮತ್ತು ನಿರ್ಬಂಧಿತ ಆಸ್ತಿ ಎಂದು ಗುರುತಿಸಲಾದ 10 ಹಡಗುಗಳ ಮೇಲೆ ಕಾರ್ಯನಿರ್ವಾಹಕ ಆದೇಶ 13846 ರ ಅಡಿಯಲ್ಲಿ ನಿರ್ಬಂಧ ಹೇರಲಾಗುತ್ತಿದೆ.
ನಿರ್ಬಂಧಗಳಲ್ಲಿ ಹೆಸರಿಸಲಾದ ಭಾರತೀಯ ಕಂಪನಿಗಳಲ್ಲಿ ಕಾಂಚನ್ ಪಾಲಿಮರ್ಸ್, ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ರಾಮ್ನಿಕ್ಲಾಲ್ ಎಸ್. ಗೋಸಾಲಿಯಾ ಮತ್ತು ಕಂಪನಿ, ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್, ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್ ಮತ್ತು ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್ ಸೇರಿವೆ. ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ 2024 ರ ಜನವರಿ ಮತ್ತು ಡಿಸೆಂಬರ್ ನಡುವೆ 84 ಮಿಲಿಯನ್ ಡಾಲರ್ ಮೌಲ್ಯದ ಇರಾನಿನ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Israel-Iran Conflict: ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಉಡೀಸ್; ಇರಾನ್-ಇಸ್ರೇಲ್ ಡೆಡ್ಲಿ ಅಟ್ಯಾಕ್ ವಿಡಿಯೊ ವೈರಲ್
ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್ ಜುಲೈ 2024 ಮತ್ತು ಜನವರಿ 2025 ರ ನಡುವೆ 51 ಮಿಲಿಯನ್ ಡಾಲರ್ ಮೌಲ್ಯದ ಮೆಥನಾಲ್ ಸೇರಿದಂತೆ ಇರಾನಿನ ಪೆಟ್ರೋಕೆಮಿಕಲ್ಗಳನ್ನು ಖರೀದಿಸಿದೆ ಎಂದು ಆರೋಪಿಸಲಾಗಿದೆ. ಜೂಪಿಟರ್ ಡೈ ಚೆಮ್ ಪ್ರೈವೇಟ್ ಲಿಮಿಟೆಡ್ ಇದೇ ಅವಧಿಯಲ್ಲಿ 49 ಮಿಲಿಯನ್ ಡಾಲರ್ ಮೌಲ್ಯದ ಟೊಲುಯೆನ್ ಸೇರಿದಂತೆ ಇರಾನಿನ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ. ರಾಮ್ನಿಕ್ಲಾಲ್ ಎಸ್ ಗೋಸಾಲಿಯಾ ಅಂಡ್ ಕಂಪನಿ ಮೆಥನಾಲ್ ಮತ್ತು ಟೊಲುಯೆನ್ ಸೇರಿದಂತೆ 22 ಮಿಲಿಯನ್ ಡಾಲರ್ ಮೌಲ್ಯದ ಇರಾನಿನ ಪೆಟ್ರೋಕೆಮಿಕಲ್ಸ್ ಖರೀದಿಸಿದೆ ಎಂದು ಆರೋಪಿಸಲಾಗಿದೆ.