IND vs ENG 5th Test: ಇಂಗ್ಲೆಂಡ್ ಮಾರಕ ದಾಳಿಯಿಂದ 6 ವಿಕೆಟ್ ಕಳೆದುಕೊಂಡ ಭಾರತಕ್ಕೆ ಕರುಣ್ ನಾಯರ್ ಆಸರೆ!
IND vs ENG 5th Test Day 1 Highlights: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ನಡುವಣ ಐದನೇ ಟೆಸಟ್ ಪಂದ್ಯದ ಕೆನಿಂಗ್ಟನ್ ಓವಲ್‌ನಲ್ಲಿ ಗುರುವಾರ ಆರಂಭವಾಗಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿರುವ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ 64 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿದೆ.

ಅರ್ಧಶತಕ ಗಳಿಸಿ ಭಾರತ ತಂಡಕ್ಕೆ ಕರುಣ್ ನಾಯರ್ ಆಸರೆಯಾಗಿದ್ದಾರೆ.

ಲಂಡನ್: ಗಸ್ ಅಟ್ಕಿನ್ಸನ್ (Gus Atkinson) ಹಾಗೂ ಜಾಶ್ ಟಾಂಗ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಭಾರತ ತಂಡ, ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದ (IND vs ENG) ಮೊದಲನೇ ದಿನ 6 ವಿಕೆಟ್‌ಗಳನ್ನು ಕಳೆದುಕೊಂಡು ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಇದರ ಹೊರತಾಗಿಯೂ ಕೊನೆಯ ಪಂದ್ಯದಲ್ಲಿ ಪ್ಲೇಯಿಂಗ್ XIಗೆ ಮರು ಪ್ರವೇಶ ಮಾಡಿದ ಕನ್ನಡಿಗ ಕರುಣ್ ನಾಯರ್ (Karun Nair) ನಿರ್ಣಾಯಕ ಅರ್ಧಶತಕ ಬಾರಿಸಿ ಟೀಮ್ ಇಂಡಿಯಾಗೆ ಭರವಸೆ ಮೂಡಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಕಳೆದ ಪಂದ್ಯದಲ್ಲಿ ನಿರ್ಣಾಯಕ ಶತಕವನ್ನು ಸಿಡಿಸಿದ್ದ ವಾಷಿಂಗ್ಟನ್ ಸುಂದರ್ ಎರಡನೇ ದಿನಕ್ಕೆ ಅಜೇಯರಾಗಿ ಉಳಿದಿದ್ದಾರೆ. ಮೊದಲನೇ ದಿನದಾಟದ ಅಂತ್ಯಕ್ಕೆ ಭಾರತ 64 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿದೆ.
ಇಲ್ಲಿನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಐದನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಒಲ್ಲಿ ಪೋಪ್, ಎದುರಾಳಿ ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಅದರಂತೆ ನಾಯಕನ ನಿರ್ಧಾರವನ್ನು ಇಂಗ್ಲೆಂಡ್ ಬೌಲರ್‌ಗಳು ಸಮರ್ಥಿಸಿಕೊಂಡರು. ಅದರಲ್ಲಿಯೂ ವಿಶೇಷವಾಗಿ ಗಸ್ ಅಟ್ಕಿನ್ಸನ್ ಹಾಗೂ ಜಾಶ್ ಟಾಂಗ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದಾರೆ.
IND vs ENG: ʻಒಂದು ಪಂದ್ಯದಿಂದ ಅನ್ಶುಲ್ ಕಾಂಬೋಜ್ ಸಾಮರ್ಥ್ಯವನ್ನು ಅಳೆಯಬೇಡಿʼ-ಸೌರವ್ ಗಂಗೂಲಿ!
ಪಂದ್ಯದ ಮೊದಲನೇ ದಿನದ ಆಟಕ್ಕೆ ಮಳೆರಾಯ ಕಾಟ ನೀಡಿತ್ತು. ಈ ಕಾರಣದಿಂದಲೇ ನಿಗದಿತ ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.ಇದರ ಜೊತೆಗೆ ದಿನ ಪೂರ್ತಿ ಮೋಡ ಕವಿದ ವಾತಾವರಣವಿತ್ತು. ಈ ಹಿನ್ನೆಲೆಯಲ್ಲಿ ಹಸಿರು ಹೊದಿಕೆಯ ಪಿಚ್ ಫಾಸ್ಟ್ ಬೌಲರ್‌ಗಳಿಗೆ ನೆರವು ನೀಡುವ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲನ್ನು ನೀಡಿತ್ತು. ಭಾರತ ತಂಡದ ಪರ ಸಾಯಿ ಸುದರ್ಶನ್ ಹಾಗೂ ಕರುಣ್ ನಾಯರ್ ಅವರನ್ನು ಹೊರತುಪಡಿಸಿ ಇನ್ನುಳಿದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕನಿಷ್ಠ 30ರ ಗಡಿ ದಾಟಲಿಲ್ಲ.
Karun Nair steadied India's ship as England pacers made merry on the opening day at The Oval 🏏#ENGvIND 📝: https://t.co/SNl4Ym0dTV pic.twitter.com/0nZYolVCgE
— ICC (@ICC) July 31, 2025
ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಕೇವಲ ಎರಡು ರನ್ ಗಳಿಸಿ ಗಸ್ ಅಟ್ಕಿನ್ಸನ್‌ಗೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. 14 ರನ್ ಗಳಿಸಿ ಭರವಸೆ ಮೂಡಿಸಿದ್ದ ಕನ್ನಡಿಗ ಕೆಎಲ್ ರಾಹುಲ್ ಕೂಡ ನಿರಾಶೆ ಮೂಡಿಸಿದರು. ಆ ಮೂಲಕ ಭಾರತ ತಂಡ ಕೇವಲ 38 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ನಂತರ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ 45 ರನ್‌ಗಳ ಜೊತೆಯಾಟವಾಡಿ ಭರವಸೆಯನ್ನು ಮೂಡಿಸಿದ್ದರು. ಆದರೆ, 21 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ನಾಯಕ ಶುಭಮನ್ ಗಿಲ್ ಅನಗತ್ಯವಾಗಿ ರನ್ ಔಟ್ ಆದರು.
IND vs ENG: ಯಶಸ್ವಿ ಜೈಸ್ವಾಲ್ ಮಾಡುತ್ತಿರುವ ತಾಂತ್ರಿಕ ತಪ್ಪನ್ನು ತಿಳಿಸಿದ ಸುನೀಲ್ ಗವಾಸ್ಕರ್!
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡುತ್ತಿದ್ದ ಸಾಯಿ ಸುದರ್ಶನ್ 108 ಎಸೆತಗಳಲ್ಲಿ 38 ರನ್ ಗಳಿಸಿ ಉತ್ತಮ ಆರಂಭವನ್ನು ಕಂಡಿದ್ದರು ಹಾಗೂ ದೊಡ್ಡ ಇನಿಂಗ್ಸ್ ಆಡುವ ಭರವಸೆಯನ್ನು ಮೂಡಿಸಿದ್ದರು. ಆದರೆ, ಜಾಶ್ ಟಾಂಗ್ ಎಸೆತದಲ್ಲಿ ಜೇಮಿ ಸ್ಮಿತ್‌ಗೆ ಕ್ಯಾಚ್ ಕೊಟ್ಟರು. ಆ ಮೂಲಕ ಭಾರತ ತಂಡ 101 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದ ರವೀಂದ್ರ ಜಡೇಜಾ ಕೇವಲ 9 ರನ್ ಗಳಿಸಿ ಔಟ್ ಆದರು. ಈ ಸರಣಿಯಲ್ಲಿ ಇದೇ ಮೊದಲ ಬಾರಿ ಬ್ಯಾಟ್ ಮಾಡಿದ ಧ್ರುವ್ ಜುರೆಲ್ 19 ರನ್‌ಗೆ ಔಟ್ ಆದರು.
5⃣0⃣ for Karun Nair! 👏 👏
— BCCI (@BCCI) July 31, 2025
A solid knock from the #TeamIndia right-handed batter! 👌 👌
Updates ▶️ https://t.co/Tc2xpWNayE#ENGvIND | @karun126 pic.twitter.com/3CFUSy6xfy
ಭಾರತ ತಂಡಕ್ಕೆ ಕರುಣ್ ನಾಯರ್ ಆಸರೆ
ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ಬಹಳ ಜವಾಬ್ದಾರಿಯಿಂದ ಬ್ಯಾಟ್ ಮಾಡಿದ ಕನ್ನಡಿಗ ಕರುಣ್ ನಾಯರ್, ಆಂಗ್ಲರ ಮಾರಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅವರು ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕಿದ ಸನ್ನಿವೇಶಕ್ಕೆ ತಕ್ಕಂತೆ ರಕ್ಷಣಾತ್ಮಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಮೊದಲನೇ ದಿನದಾಟದ ಅಂತ್ಯಕ್ಕೆ 98 ಎಸೆತಗಳಲ್ಲಿ 7 ಬೌಂಡರಿಗಳೊಂದೊಗೆ ಅಜೇಯ 52* ರನ್ ಗಳಿಸಿ ಭಾರತ ತಂಡಕ್ಕೆ ಆಸರೆಯಾಗಿದ್ದಾರೆ ಹಾಗೂ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರ ಜೊತೆ ಏಳನೇ ವಿಕೆಟ್‌ಗೆ 51 ರನ್‌ಗಳ ಜೊತೆಯಾಟವನ್ನು ಆಡಿರುವ ವಾಷಿಂಗ್ಟನ್ ಸುಂದರ್ (19*) ಅಜೇಯರಾಗಿ ಉಳಿದಿದ್ದಾರೆ.