ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಪೊಲೀಸ್‌ ಇಲಾಖೆಯಲ್ಲಿ 8157 ಹುದ್ದೆ ಭರ್ತಿಗೆ ಸೂಚನೆ

ಒಟ್ಟು 8,157 ಹುದ್ದೆಗಳನ್ನು ನೇರ ನೇಮಕಾತಿ (Job recruitment) ಮೂಲಕ ಭರ್ತಿ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಒಟ್ಟು ಹುದ್ದೆಗಳಲ್ಲಿ ಶೇ. 6 ರಷ್ಟು ಹುದ್ದೆಗಳನ್ನು (ಪರಿಶಿಷ್ಟ ಜಾತಿಗೆ ಶೇ. 2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 4) ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟು ಕಾಯ್ದಿರಿಸಲಾಗುವುದು ಎಂದು ತಿಳಿಸಲಾಗಿದೆ.

ಸಿಹಿ ಸುದ್ದಿ: ಪೊಲೀಸ್‌ ಇಲಾಖೆಯಲ್ಲಿ 8157 ಹುದ್ದೆ ಭರ್ತಿಗೆ ಸೂಚನೆ

ಸಾಂದರ್ಭಿಕ ಚಿತ್ರ -

ಹರೀಶ್‌ ಕೇರ
ಹರೀಶ್‌ ಕೇರ Mar 5, 2026 9:46 AM

ಬೆಂಗಳೂರು, ಮಾರ್ಚ್‌ 05: ರಾಜ್ಯ ಪೊಲೀಸ್ ಇಲಾಖೆಯಲ್ಲಿ (police department) ಖಾಲಿ ಇರುವ ವಿವಿಧ ವೃಂದದ ಒಟ್ಟು 8,157 ಹುದ್ದೆಗಳನ್ನು ನೇರ ನೇಮಕಾತಿ (Job recruitment) ಮೂಲಕ ಭರ್ತಿ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈ ಕುರಿತು ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (DG & IGP) ಕಚೇರಿಯಿಂದ ಅಧಿಕೃತ ಸೂಚನೆ ಹೊರಡಿಸಲಾಗಿದೆ.

ವಿಭಾಗಗಳಾಗಿ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:

ಹುದ್ದೆಗಳು ಮತ್ತು ಪ್ರಮಾಣ

ಹುದ್ದೆಯ ಹೆಸರು ಕಲ್ಯಾಣ ಕರ್ನಾಟಕ ಕಲ್ಯಾಣ ಕರ್ನಾಟಕೇತರ ಒಟ್ಟು ಹುದ್ದೆಗಳು
ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ (Civil) 610 3500 4110
ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (KSRP) 532 1500 2032
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ 275 1375 1650
ಪೊಲೀಸ್ ಕಾನ್ಸ್‌ಟೇಬಲ್ (KSISF) 364 - 364
ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ (DSI) 05 15 20

ಮೀಸಲಾತಿ ಮತ್ತು ಹೈಕೋರ್ಟ್ ಆದೇಶ:

ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ಸರ್ಕಾರದ ನಿರ್ಧಾರವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಡೆತಡೆಯಾಗದಂತೆ ತಡೆಯಲು ಸರ್ಕಾರವು ಹಳೆಯ ಮೀಸಲಾತಿ ನಿಯಮದಂತೆ (ಶೇ. 50ರ ಮಿತಿ) ಪ್ರಕ್ರಿಯೆ ಮುಂದುವರಿಸಲು ಸೂಚಿಸಿದೆ.

ಪ್ರಮುಖ ಅಂಶಗಳು:

6% ಹುದ್ದೆಗಳ ಮೀಸಲು: ಒಟ್ಟು ಹುದ್ದೆಗಳಲ್ಲಿ ಶೇ. 6 ರಷ್ಟು ಹುದ್ದೆಗಳನ್ನು (ಪರಿಶಿಷ್ಟ ಜಾತಿಗೆ ಶೇ. 2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 4) ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟು ಕಾಯ್ದಿರಿಸಲಾಗುವುದು.

ಗಡುವು: ವರ್ಗೀಕರಣದ ವಿವರಗಳನ್ನು ಸಿದ್ಧಪಡಿಸಿ ಮಾರ್ಚ್ 05, 2026ರೊಳಗೆ ನೇಮಕಾತಿ ವಿಭಾಗಕ್ಕೆ ಸಲ್ಲಿಸಲು ಎಲ್ಲಾ ಘಟಕದ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ರಾಜ್ಯಾದ್ಯಂತ ನೇಮಕಾತಿ: ಮುಂದಿನ 30 ದಿನಗಳಲ್ಲಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 56,432 ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಈ ನೇಮಕಾತಿಯು ಪೊಲೀಸ್ ಇಲಾಖೆಯ ಬಲವರ್ಧನೆಗೆ ಸಹಕಾರಿಯಾಗಲಿದ್ದು, ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರವಸೆ ನೀಡಿದೆ.