Groom Dies: ಜಮಖಂಡಿಯಲ್ಲಿ ಘೋರ ಘಟನೆ; ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲೇ ವರ ಸಾವು!
Groom Dies: ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ಅಕ್ಷತೆ ಬಿದ್ದ ಕೆಲವೇ ಹೊತ್ತಿನಲ್ಲಿ ಹೃದಯಾಘಾತವಾಗಿ ವರ ಕುಸಿದುಬಿದ್ದಿದ್ದಾನೆ. ಇದರಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.


ಬಾಗಲಕೋಟೆ: ತಾಳಿ ಕಟ್ಟಿದ ಹದಿನೈದೇ ನಿಮಿಷದಲ್ಲಿ ವರ ಮೃತಪಟ್ಟಿರುವ ಘಟನೆ (Groom Dies) ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ. ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ಅಕ್ಷತೆ ಬಿದ್ದ ಕೆಲವೇ ಹೊತ್ತಿನಲ್ಲಿ ಹೃದಯಾಘಾತವಾಗಿ ವರ ಕುಸಿದುಬಿದ್ದಿದ್ದಾನೆ. ಇದರಿಂದ ಹೊಸ ಜೀವನ ಆರಂಭವಾಗುವ ಮೊದಲೇ, ಬದುಕಿಗೆ ಯುವಕ ಅಂತಿಮ ವಿದಾಯ ಹೇಳಿದ್ದಾನೆ.
ಜಮಖಂಡಿ ತಾಲೂಕಿನ ಕುಂಬಾರ ಹಳ್ಳ ಗ್ರಾಮದ ನಿವಾಸಿ ಪ್ರವೀಣ ಕುರ್ನೆ (25) ಮೃತ ದುರ್ದೈವಿ. ಇಂದು ಪೂಜಾ ಎಂಬ ವಧುವಿನ ಜತೆ ಪ್ರವೀಣ್ ಕುರ್ನೆ ವಿವಾಹ ನಿಗದಿಯಾಗಿತ್ತು. ಆದರೆ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ವರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಇದರಿಂದ ವಿವಾಹ ಜೀವನದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಬಂದ ವಧುವಿಗೆ ಬರ ಸಿಡಿಲು ಬಡಿದಂತಾಗಿದೆ. ಮದುವೆಗೆ ಬಂದ ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಈ ಸುದ್ದಿಯನ್ನೂ ಓದಿ | Police Alert: ಎಚ್ಚರಿಕೆ, ಮಕ್ಕಳ ಕೈಗೆ ವಾಹನ ಕೊಟ್ಟರೆ ಪೋಷಕರು ಜೈಲಿಗೆ!
ಚಿತ್ರದುರ್ಗದಲ್ಲಿ ಕಾರು- ಟ್ರ್ಯಾಕ್ಟರ್ ಡಿಕ್ಕಿ: 2 ವರ್ಷದ ಮಗು ಸೇರಿ ನಾಲ್ವರು ಮೃತ್ಯು
ಚಿತ್ರದುರ್ಗ: ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಚಿತ್ರದುರ್ಗ (Chitradurga news) ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಟ್ರ್ಯಾಕ್ಟರ್ ಮಧ್ಯೆ ಡಿಕ್ಕಿಯಾಗಿ (car tractor hit) ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಹೊಳಲ್ಕರೆ ಮೂಲದವರು ಎಂದು ಗುರುತಿಸಲಾಗಿದ್ದು, ಈ ಪೈಕಿ ಪುಟಾಣಿ ಕಂದಮ್ಮ ಸೇರಿ ಇಬ್ಬರು ಮಕ್ಕಳು ಕೂಡ ಮೃತಪಟ್ಟಿವೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಹೊಳಲ್ಕೆರೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.
ಅರೇಹಳ್ಳಿಯ ಉದ್ಯಮಿ ಯಶವಂತ್ ಅವರ ಪತ್ನಿ ಕಾವ್ಯಾ (30), ಅತ್ತೆ ಗಂಗಮ್ಮ (50) ಹಾಗೂ ಪುತ್ರಿಯರಾದ ಹನ್ಸಿಕಾ (4), ಮನಸ್ವಿ (2) ಮೃತ ದುರ್ದೈವಿಗಳು. ಯಶವಂತ್ ಹಾಗೂ ಕುಟುಂಬ ಸದಸ್ಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರು-ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.