ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಡಿಯನ್ ಕರಾಟೆ ಕ್ಲಬ್, ಬೆಳಗಾವಿ ಜಿಲ್ಲಾ ಕ್ರೀಡಾ ಕರಾಟೆ ಸಂಘಟನೆಯ ಐದು ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪ್ರದಾನ

ಡಾ. ಜೆ.ಟಿ. ಸಿಮಂಡ್ಸ್ ಹಾಲ್‌ನಲ್ಲಿ ಕರಾಟೆಯ ಬೆಲ್ಟ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ಒಟ್ಟು 152 ಕಲರ್ ಬೆಲ್ಟ್ ಕರಾಟೆಪಟುಗಳು ಭಾಗವಹಿಸಿದ್ದರು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಟಾಪ್ ಐದು ಬ್ಲಾಕ್ ಬೆಲ್ಟ್ ವಿದ್ಯಾರ್ಥಿಗಳಾದ ಸಮರ್ಥ ನೆಸರೇಕರ, ಸಂಜನಾ ನೆಸರೇಕರ, ಕಾರ್ತಿಕ ವಡ್ಜೆ, ಅನುಶ್ರೀ ಮನವಾಡ್ಕರ ಮತ್ತು ಅಕುಲ ಖೋತ ಇವರಿಗೆ ಬ್ಲಾಕ್ ಬೆಲ್ಟ್ ನೀಡಲಾಯಿತು.

ಐದು ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪ್ರದಾನ

-

Ashok Nayak Ashok Nayak Oct 7, 2025 12:11 AM

ಡಾ. ಜೆ.ಟಿ. ಸಿಮಂಡ್ಸ್ ಹಾಲ್‌ನಲ್ಲಿ ಕರಾಟೆಯ ಬೆಲ್ಟ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ಒಟ್ಟು 152 ಕಲರ್ ಬೆಲ್ಟ್ ಕರಾಟೆಪಟುಗಳು ಭಾಗವಹಿಸಿದ್ದರು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಟಾಪ್ ಐದು ಬ್ಲಾಕ್ ಬೆಲ್ಟ್ ವಿದ್ಯಾರ್ಥಿಗಳಾದ ಸಮರ್ಥ ನೆಸರೇಕರ, ಸಂಜನಾ ನೆಸರೇಕರ, ಕಾರ್ತಿಕ ವಡ್ಜೆ, ಅನುಶ್ರೀ ಮನವಾಡ್ಕರ ಮತ್ತು ಅಕುಲ ಖೋತ ಇವರಿಗೆ ಬ್ಲಾಕ್ ಬೆಲ್ಟ್ ನೀಡಲಾಯಿತು.

ಈ ಕಾರ್ಯಕ್ರಮವು ಮುಖ್ಯ ಅತಿಥಿಗಳಾಗಿ ಮಹೇಶ ಚೌಗುಲೆ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಎ ಎ ಜೂನೇಡಿ ಪಟೇಲ ಇನ್ನಿತರರು ಭಾಗವಹಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳು ಮಾತನಾಡಿ ಪ್ರತಿಯೊಬ್ಬ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಬೇಕೆಂದು ಹೇಳಿದರು ಅದೇ ರೀತಿಯಾಗಿ ಇಂಥ ಬೆಳಗಾವಿ ನಗರದಲ್ಲಿ ನಡೆಯುವಂತ ಕರಾಟೆ, ಕಬ್ಬಡಿ ಮತ್ತು ಇನ್ನಿತರ ಕ್ರೀಡಾ ಚಟುವಟಿಕೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಪಾಲ್ಗೊಂಡು ಯಶಸ್ಸನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಇದನ್ನೂ ಓದಿ: Bangalore News: ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಈ ಒಂದು ಅಸೋಸಿಯನ್ ವತಿಯಿಂದ ನಿಮಗೆ ಒಂದು ಸರ್ಟಿಫಿಕೇಟ್ ದಿಂದ ಉದ್ಯೋಗದಲ್ಲಿ ಮೀಸಲಾತಿಯನ್ನು ಹೊಂದಿರುತ್ತೀರಿ ಎಂದು ಹೇಳಿದರು. ಅದೇ ರೀತಿಯಾಗಿ ಮುಂದೆ ನಮ್ಮದೇ ಇಲಾಖೆಯಿಂದ ರಾಜ್ಯಮಟ್ಟದ ಕರಾಟೆ ಕಾಂಪಿಟಿಷನ್ ವನ್ನು ಆಯೋಜನೆ ಮಾಡುತ್ತೇವೆ ಎಂದು ಹೇಳಿದರು.

ಈ ಎಲ್ಲಾ ವಿದ್ಯಾರ್ಥಿಗಳು ಕಳೆದ ಎಂಟು ವರ್ಷಗಳಿಂದ ಚವ್ಹಾಟ ಗಲ್ಲಿಯ ಕರಾಟೆ ಕ್ಲಾಸಿನಲ್ಲಿ ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಇವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಪಡೆದಿದ್ದಾರೆ.

ಈ ಶ್ರಮದ ಫಲವಾಗಿ ಇಂಡಿಯನ್ ಕರಾಟೆ ಕ್ಲಬ್ ಹಾಗೂ ಬೆಳಗಾವಿ ಜಿಲ್ಲಾ ಕ್ರೀಡಾ ಕರಾಟೆ ಸಂಘಟನೆಯ ಅಧ್ಯಕ್ಷ ಶ್ರೀ. ಗಜೆಂದ್ರ ಕಾಕತೀಕರ ಅವರಿಂದ ಬ್ಲಾಕ್ ಬೆಲ್ಟ್, ಪ್ರಮಾಣಪತ್ರ ಹಾಗೂ ಸ್ಮೃತಿಚಿಹ್ನೆ ನೀಡಿ ಗೌರವಿಸಲಾಯಿತು.

ಹಾಗೇ, ವಿದ್ಯಾರ್ಥಿಗಳ ಪೋಷಕರಿಗೂ ಶಾಲು, ಶ್ರೀಫಲ ಮತ್ತು ಪುಷ್ಪಗುಚ್ಛ ನೀಡಿ ಸನ್ಮಾನಿಸ ಲಾಯಿತು.

ಈ ಐದು ಬ್ಲಾಕ್ ಬೆಲ್ಟ್ ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರ ಪ್ರಭಾಕರ ಕಿಲ್ಲೆಕರ ಮತ್ತು ಪರಶುರಾಮ ಕಾಕತೀ ಅವರ ಮಾರ್ಗದರ್ಶನ ದೊರೆಯುತ್ತಿದೆ.