ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಹೃದಯವಂತನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ!

ನಗರದ ಬೆಳಿಗ್ಗೆ ನವೀನ್ ಕಿರಣ್ ಅಭಿಮಾನಿಗಳು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದ್ದಲ್ಲದೆ, ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸಿದರು. ಮತ್ತೂ ಕೆಲವರು ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಿದರೆ, ಗುಂಪುಮರದ ಆನಂದ್, ಆಟೋ ಸುಬಾನ್ ತರದವರು ಗಿಡ ನೆಡುವ ಮೂಲಕ ವಿಶಿಷ್ಟತೆ ಮೆರೆದರು.

ಹೃದಯವಂತನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ!

-

Ashok Nayak Ashok Nayak Oct 7, 2025 1:06 AM

ಚಿಕ್ಕಬಳ್ಳಾಪುರ : ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಅವರ ಹುಟ್ಟುಹಬ್ಬವನ್ನು ಚಿಕ್ಕಬಳ್ಳಾಪುರ ನಗರದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.

ಕೆ.ವಿ.ನವೀನ್ ಕಿರಣ್ ರಾಜಕಾರಣದಲ್ಲಿ ಯಾವುದೇ ಹುದ್ದೆ ಅಲಂಕರಿಸಿಲ್ಲ, ಆದರೂ ಜನತೆಯ ಅಭಿಮಾನಕ್ಕೆ ಕೊರತೆಯಿಲ್ಲ, ತಮ್ಮ ಹುಟ್ಟುಹಬ್ಬವನ್ನೂ ಆಚರಿಸದ ಅನೇಕ ಮಂದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಅಭಿಮಾನ ಪ್ರದರ್ಶನ ಮಾಡಿದರು.

ಸಮಾಜಸೇವಕರಾಗಿ, ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ, ಬೃಹತ್ ರಕ್ತದಾನ ಶಿಬಿರಗಳ ಆಯೋಜಕ ರಾಗಿ, ಜನಜನಿತರಾಗಿರುವ ನವೀನ್ ಕಿರಣ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಗಳು, ಸ್ನೇಹಿತರು ನಾನಾ ಕಾರ್ಯಕ್ರಮಗಳ ಮೂಲಕ ಅಭಿಮಾನ ತೋರಿದ್ದಾರೆ.

ಇದನ್ನೂ ಓದಿ: Chikkaballapur News: ಮಹಿಳಾ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ ನರಸಿಂಹಮೂರ್ತಿಗೆ ಪಿ.ಎಚ್.ಡಿ ಪ್ರದಾನ

ನಗರದ ಬೆಳಿಗ್ಗೆ ನವೀನ್ ಕಿರಣ್ ಅಭಿಮಾನಿಗಳು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದ್ದಲ್ಲದೆ, ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸಿದರು. ಮತ್ತೂ ಕೆಲವರು ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಿದರೆ, ಗುಂಪುಮರದ ಆನಂದ್, ಆಟೋ ಸುಬಾನ್ ತರದವರು ಗಿಡ ನೆಡುವ ಮೂಲಕ ವಿಶಿಷ್ಟತೆ ಮೆರೆದರು.

ಇದೇ ವೇಳೆ ಅನ್ನದಾಸೋಹದಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಅಲ್ಲದೆ, ಬೃಹತ್ ಸೇಬಿನ ಹಣ್ಣಿನ ಹಾರವನ್ನು ಕ್ರೇನ್ ಮೂಲಕ ಹಾಕಿ, ಅಭಿನಂದಿಸಿದವರು ಕೆಲವರಾದರೆ, ಇನ್ನೂ ಹಲವರು ಬೃಹತ್ ಗಾತ್ರದ ಕಟೌಟ್‌ಗಳನ್ನು ಹಾಕಿ ಸಂಭ್ರಮಿಸಿದರು.ಕೇಕ್ ಕತ್ತರಿಸುವ ಮೂಲಕ ಕೆಲವರು ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ಈ ಎಲ್ಲ ಸಂಭ್ರಮದ ನಡುವೆ ಮಾತನಾಡಿದ ಕೆ.ವಿ. ನವೀನ್ ಕಿರಣ್, ಜನರ ಪ್ರೀತಿಯ ಋಣ ತೀರಿಸಲು ಯೋಚಿಸಬೇಕಾಗಿದೆ. ಇಷ್ಟು ಜನರ ಪ್ರೀತಿ ಗಳಿಸೋದು ಸಾಮಾನ್ಯ ಮಾತಲ್ಲ. ಅವರ ಜನ್ಮದಿನಕ್ಕೂ ಮಿಗಿಲಾಗಿ ನನ್ನ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ, ಗಿಡ ನೆಡುವ ಕಾರ್ಯಕ್ರಮಗಳು, ೭ದಿನಗಳಿಂದ ಸಪ್ತಾಹದ ರೀತಿ ಮಾಡುತ್ತಿದ್ದಾರೆ, ಚಿಕ್ಕಬಳ್ಳಾಪುರದ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಅವರ ಋಣ ತೀರಿಸಬೇಕಿದೆ. ಜೀವನದಲ್ಲಿ ಹಣ ಸಂಪಾದನೆ, ಆಸ್ತಿ ಸಂಪಾದನೆ ಮಾಡಿಲ್ಲ. ಆದರೆ ಜನ ಮತ್ತು ಅವರ ಪ್ರೀತಿಯನ್ನು ಸಂಪಾದಿಸಿರೋದು ನೆಮ್ಮದಿ ತಂದಿದೆ ಎಂದರು.

ನವೀನ್ ಕಿರಣ್ ಅವರ ಅಭಿಮಾನಿ ಆನಂದ್ ಮಾತನಾಡಿ, ನವೀನ್ ಕಿರಣ್ ಅವರ ಜನ್ಮದಿನದ ಅಂಗವಾಗಿ ಅನ್ನದಾನ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವರು ಅಕ್ಷರ ದಾಸೋಹಿ, ರಕ್ತದಾನಿಗಳು, ಬೇಡಿ ಬಂದವರಿಗೆ ಇಲ್ಲ ಎಂದವರಲ್ಲ, ಅಂತಹ ನಾಯಕನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸೋದು ನಮಗೆ ಸಂತಸ ತಂದಿದೆ ಎಂದರು.

ಒಟ್ಟಿನಲ್ಲಿ ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನವೀನ್ ಕಿರಣ್ ಅವರ ಜನ್ಮದಿನವನನು ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮದಿAದ ಅವರ ಅಭಿಮಾನಿಗಳು ಆಚರಿಸಿದ್ದು, ಸಾಮಾಜಿಕ ಕಾರ್ಯಗಳ ಮೂಲಕವೇ ಜನ್ಮದಿನ ಆಚರಿಸಿರೋದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.