ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಕ್ಯಾ ಶಾಲೆಯಲ್ಲಿ ಮನಸೆಳೆದ ವೈಶಿಷ್ಟ್ಯಪೂರ್ಣ "ಜಪಾನ್ ಉತ್ಸವ" ಕಾರ್ಯಕ್ರಮ

ಜಪಾನ್ ದೇಶದ ಸಂಸ್ಕೃತಿ, ಕಲೆ ಮತ್ತು ಮನರಂಜನೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಲರವದ ಜೊತೆಗೆ ಜಪಾನಿನ ಆಹಾರ, ಸಂಗೀತ, ನೃತ್ಯ, ಕರಕುಶಲ ವಸ್ತುಗಳು, ಕರಾಟೆ, ಕೆಂಡೋ, ಮತ್ತು ಇತರ ಸಮರ ಕಲೆಗಳ ಪ್ರದರ್ಶನಗಳು, ಜೊತೆಗೆ ಸಾಂಪ್ರದಾಯಿಕ ಜಪಾನೀಸ್ ಸಂಗೀತ ಮತ್ತು ನೃತ್ಯಗಳು ಸೇರಿದಂತೆ ಇತರ ಸಾಂಸ್ಕೃತಿಕ ಪ್ರದರ್ಶನಗಳು ಜಪಾನ್ ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡಿದವು. ಜಪಾನ್ ಉತ್ಸವವು ಜಪಾನಿನ ಸಂಸ್ಕೃತಿಯನ್ನು ಪ್ರೀತಿಸುವ ಎಲ್ಲರಿಗೂ ಸಾಕಷ್ಟು ಖುಷಿ ನೀಡಿತು.

ಮನಸೆಳೆದ ವೈಶಿಷ್ಟ್ಯಪೂರ್ಣ "ಜಪಾನ್ ಉತ್ಸವ" ಕಾರ್ಯಕ್ರಮ

Ashok Nayak Ashok Nayak Aug 12, 2025 8:05 AM

ಬೆಂಗಳೂರು: ನಗರದ ಬೈರತಿಯಲ್ಲಿರುವ ಪ್ರತಿಷ್ಠಿತ ಏಕ್ಯಾ ಶಾಲೆಯು ನಿನ್ನೆ "ಜಪಾನ್ ಉತ್ಸವ" ಎಂಬ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಭಾರತ-ಜಪಾನ್ ನಡುವಿನ ವೈವಿಧ್ಯತೆಯ ಸಾಂಸ್ಕೃತಿಕ ಸಮ್ಮಿಲನಕ್ಕೆ ಸಾಕ್ಷಿಯಾಯಿತು.

ಏಕ್ಯಾ ಶಾಲಾ ಸಭಾಂಗಣದಲ್ಲಿ ನಡೆದ " ಜಪಾನ್ ಉತ್ಸವ" ಕಾರ್ಯಕ್ರಮದಲ್ಲಿ ಏಕ್ಯಾ ಸಮೂಹ ಶಾಲೆಗಳು, ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸಿಎಂಆರ್ ನ್ಯಾಷನಲ್ ಪಿಯು ಕಾಲೇಜ್‌ನ ಜಪಾನೀಸ್ ಮತ್ತು ಭಾರತೀಯ ವಿದ್ಯಾರ್ಥಿಗಳು "ಜಪಾನ್ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿ ದರು.

ಮುಖ್ಯವಾಗಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಮತ್ರು ಸೃಜನಶೀಲತೆಯ ಪ್ರತೀಕ ವಾಗಿದ್ದ "ಜಪಾನ್ ಉತ್ಸವ"ದಲ್ಲಿ ಜಪಾನೀಸ್ ಮತ್ತು ಭಾರತೀಯ ವಿದ್ಯಾರ್ಥಿಗಳ ಜೊತೆಗೆ ಜಪಾನ್‌ನಿಂದ ಆಗಮಿಸಿದ್ದ ಶಿಕ್ಷಕರು ಮತ್ತು ಕಲಾವಿದರು ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿ ತಮ್ಮೊಳಗಿನ ಕಲಾವಂತಿಕೆಯನ್ನು ಮೆರೆದರು.

ಇದನ್ನೂ ಓದಿ: Ramanand Sharma Column: ಪತ್ರಿಕೆಯನ್ನೂ ಪಾಳಿಯಲ್ಲಿ ಓದುವ ಪರಿಪಾಠ...!

ಜೊತೆಗೆ ಜಪಾನ್ ದೇಶದ ಸಂಸ್ಕೃತಿ, ಕಲೆ ಮತ್ತು ಮನರಂಜನೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಲರವದ ಜೊತೆಗೆ ಜಪಾನಿನ ಆಹಾರ, ಸಂಗೀತ, ನೃತ್ಯ, ಕರಕುಶಲ ವಸ್ತುಗಳು, ಕರಾಟೆ, ಕೆಂಡೋ, ಮತ್ತು ಇತರ ಸಮರ ಕಲೆಗಳ ಪ್ರದರ್ಶನಗಳು, ಜೊತೆಗೆ ಸಾಂಪ್ರದಾಯಿಕ ಜಪಾನೀಸ್ ಸಂಗೀತ ಮತ್ತು ನೃತ್ಯಗಳು ಸೇರಿದಂತೆ ಇತರ ಸಾಂಸ್ಕೃತಿಕ ಪ್ರದರ್ಶನಗಳು ಜಪಾನ್ ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡಿದವು. ಜಪಾನ್ ಉತ್ಸವವು ಜಪಾನಿನ ಸಂಸ್ಕೃತಿಯನ್ನು ಪ್ರೀತಿಸುವ ಎಲ್ಲರಿಗೂ ಸಾಕಷ್ಟು ಖುಷಿ ನೀಡಿತು.

'ಜಪಾನ್ ಉತ್ಸವ' ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿ ನಲ್ಲಿರುವ ಜಪಾನ್ ಕಾನ್ಸುಲೇಟ್ ಜನರಲ್ ಹೊಕುಟೊ ಕಯಾ ಅವರು ಭಿತ್ತಿಚಿತ್ರವನ್ನು ಅನಾವರಣಗೊಳಿಸಿದರು.

ಡಾ.ಕೆ.ಸಿ. ರಾಮಮೂರ್ತಿ, ಐಪಿಎಸ್ (ನಿವೃತ್ತಿ), ಮಾಜಿ ರಾಜ್ಯಸಭಾ ಸದಸ್ಯರು, ಅಧ್ಯಕ್ಷರು, ಸಿಎಂಆರ್ ವಿಶ್ವವಿದ್ಯಾಲಯ ಮತ್ತು ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳು. ಡಾ. ಸಬಿತಾ ರಾಮಮೂರ್ತಿ, ಅಧ್ಯಕ್ಷರು ಸಿಎಂಆರ್ ಜ್ಞಾನಧಾರ ಟ್ರಸ್ಟ್, ಕುಲಾಧಿಪತಿ, ಸಿಎಂಆರ್ ವಿಶ್ವವಿದ್ಯಾ ಲಯ. ಶ್ರೀ. ಜಯದೀಪ್ ಕೆ.ಆರ್.ರೆಡ್ಡಿ, ಸಿಇಒ, ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಡಾ.ತ್ರಿಸ್ಥ ರಾಮಮೂರ್ತಿ, ಸಂಸ್ಥಾಪಕರು, ಏಕ್ಯಾ ಸಮೂಹ ಶಾಲೆಗಳು ಇವರುಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.