ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Free Bus: ಕರ್ನಾಟಕ ಮಾದರಿಯಲ್ಲಿ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಮಹಿಳೆಯರ ಸಬಲೀಕರಣ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸುವ ಮಹತ್ವದ ಕ್ರಮದಲ್ಲಿ, ಕರ್ನಾಟಕದ ಶಕ್ತಿ ಯೋಜನೆಯ ರೀತಿಯಲ್ಲೇ ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮ (APSRTC) ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೆ ತರಲಿದೆ.

ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

Vishakha Bhat Vishakha Bhat Aug 12, 2025 10:23 AM

ಹೈದರಾಬಾದ್‌: ಮಹಿಳೆಯರ ಸಬಲೀಕರಣ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸುವ ಮಹತ್ವದ ಕ್ರಮದಲ್ಲಿ, ಕರ್ನಾಟಕದ ಶಕ್ತಿ (Free Bus) ಯೋಜನೆಯ ರೀತಿಯಲ್ಲೇ ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮ (APSRTC) ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೆ ತರಲಿದೆ. ಆಗಸ್ಟ್ 15, 2025 ರಿಂದ ಜಾರಿಗೆ ತರುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಉಪಕ್ರಮದಲ್ಲಿ ಮಹಿಳಾ ಪ್ರಯಾಣಿಕರಿಗೆ 'ಶೂನ್ಯ ದರ ಟಿಕೆಟ್'ಗಳನ್ನು ನೀಡುವುದೂ ಸೇರಿದೆ.

ಆಂಧ್ರ ಪ್ರದೇಶದಲ್ಲಿ ನಿವಾಸ ಸ್ಥಾನಮಾನ ಹೊಂದಿರುವ ಎಲ್ಲಾ ಹುಡುಗಿಯರು, ಮಹಿಳೆಯರು ಮತ್ತು ಮಂಗಳಮುಖಿಯಾಗಿ ಈ ಪ್ರಯೋಜನವನ್ನು ಪಡೆಯಬಹುದು. ಸೋಮವಾರ ರಾಜ್ಯ ಸಚಿವಾಲಯದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ, ಮುಖ್ಯಮಂತ್ರಿಗಳು ಯೋಜನೆಯಲ್ಲಿ ಪಾರದರ್ಶಕತೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಈ ಯೋಜನೆ APSRTCಯ ಸಾಮಾನ್ಯ ಬಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ಸ್ವಾತಂತ್ರ್ಯ ದಿನಾಚರಣೆಯಿಂದ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು, ಅನುಷ್ಠಾನದಲ್ಲಿ ಯಾವುದೇ ವಿಳಂಬ ಅಥವಾ ಲೋಪಗಳು ಇರಬಾರದು ಎಂದು ನಾಯ್ಡು ಹೇಳಿದ್ದಾರೆ. ಆಂಧ್ರದಲ್ಲಿ ವಾಸಿಸುವ ಪ್ರಮಾಣೀಕೃತ ದಾಖಲೆ ತೋರಿಸಿ ಆಂಧ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (APSRTC) ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದು. ಇನ್ನೂ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಜೊತೆಗೆ ಬಸ್ ಸಿಬ್ಬಂದಿಯು ತಮ್ಮ ಬಟ್ಟೆಯ ಮೇಲೆ ಹಾಕಿಕೊಳ್ಳಬಹುದಾದಂತಹ ಕ್ಯಾಮೆರಾವನ್ನು ಅಳವಡಿಸಲು ಯೋಚಿಸಿದೆ. ಅದಲ್ಲದೇ ಬಸ್ ನಿಲ್ದಾಣಗಳಲ್ಲಿ ಫ್ಯಾನ್, ಕುರ್ಚಿ, ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯ ದೊರೆಯಲಿದೆ.

ಈ ಸುದ್ದಿಯನ್ನೂ ಓದಿ: ಗ್ಯಾರಂಟಿ ಯೋಜನೆಗಳ ಮೀರಿ; ಗ್ಯಾರಂಟಿ ಸುಧಾರಣೆಗಳು ಮತ್ತು ಪ್ರಗತಿಪರ ನೀತಿಗಳ ಅಗತ್ಯ: ಕಾಗಜ್ ಫೌಂಡೇಶನ್ ಟ್ರಸ್ಟಿ ಕವಿತಾ ರೆಡ್ಡಿ

ಈ ಯೋಜನೆಗೆ ವಾರ್ಷಿಕವಾಗಿ 1,942 ಕೋಟಿ ರೂ. ಹಾಗೂ ತಿಂಗಳಿಗೆ ಸುಮಾರು 162 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವ ಭವಿಷ್ಯದ ದೃಷ್ಟಿಕೋನದಿಂದ, ನಾಯ್ಡು ಅವರು ಭವಿಷ್ಯದಲ್ಲಿ APSRTC ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ಖರೀದಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ. ಎಲ್ಲಾ APSRTC ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.