Bengaluru Power Cut: ಜೂನ್11ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Bengaluru Power Cut: 66 ಕೆ.ವಿ. ಬಾಣಸವಾಡಿ-ಎಚ್.ಬಿ.ಆರ್ ಲೈನ್ ಮತ್ತು 66 ಕೆ.ವಿ. ಬಾಣಸವಾಡಿಯ ಉಪಕೇಂದ್ರದ 66 ಕೆ.ವಿ. ಲೈನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜೂನ್ 11ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಜೂ.11: 66 ಕೆ.ವಿ. ಬಾಣಸವಾಡಿ-ಎಚ್.ಬಿ.ಆರ್ ಲೈನ್ ಮತ್ತು 66 ಕೆ.ವಿ. ಬಾಣಸವಾಡಿಯ ಉಪಕೇಂದ್ರದ 66 ಕೆ.ವಿ. ಲೈನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜೂನ್ 11ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಹೊರಮಾವು, ಲಿಂಗರಾಜಪುರ, ಹೆಣ್ಣೂರು, ಹೊಯ್ಸಳ ನಗರ, ಎನ್‌ಆರ್‌ಐ ಲೇಔಟ್, ಡಿ.ಜೆ. ಹಳ್ಳಿ, ಸುಬ್ಬಣ್ಣಪಾಳ್ಯ, ಎಚ್‌ಬಿಆರ್ ಲೇಔಟ್, ಖನ್ನಾ ರಸ್ತೆ, ಬಾಲ್ಡ್ವಿನ್ ಶಾಲೆ, ಕಮ್ಮನಹಳ್ಳಿ ಮುಖ್ಯ ರಸ್ತೆ, ಓಎಂಬಿಆರ್ ಲೇಔಟ್, ಬಾಬುಸಾಪಾಳ್ಯ, ದೊಡ್ಡ ಗುಬ್ಬಿ, ಕ್ಯಾನಪಿ ಅಪಾರ್ಟ್ಮೆಂಟ್ಸ್, ಎಡಿಎಂಸಿ ಪ್ರದೇಶ, ಪಿಲ್ಲಾರೆಡ್ಡಿ ನಗರ, ಡಾಕ್ಟರ್ಸ್ ಲೇಔಟ್, ಬಿಳಿಶಿವಲೆ, ಬಂಜಾರಾ ಲೇಔಟ್ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಾಫ್ಟ್‌ವೇರ್ ಅಳವಡಿಕೆ: 20 ಪಟ್ಟಣಗಳಲ್ಲಿ ಬೆಸ್ಕಾಂ ಆನ್‌ಲೈನ್ ಸೇವೆ ಅಲಭ್ಯ
ಬೆಂಗಳೂರು, ಜೂ.8: ಸಮಗ್ರ ವಿದ್ಯುತ್ ಅಭಿವೃದ್ದಿ ಯೋಜನೆಯ (ಐಪಿಡಿಎಸ್) ಹಂತ-2 ರ ಅಡಿಯಲ್ಲಿ ಬೆಸ್ಕಾಂ ವ್ಯಾಪ್ತಿಯ (BESCOM) ನಗರ ಪ್ರದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಐಪಿಡಿಎಸ್ ಐಟಿ ಅಪ್ಲಿಕೇಶನ್ ಅನ್ನು ಬೆಸ್ಕಾಂ ವ್ಯಾಪ್ತಿಯ 20 ಐಪಿಡಿಎಸ್ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ವಿವಿಧ ಪಟ್ಟಣ ಪ್ರದೇಶಗಳಲ್ಲಿ ಜೂನ್ 10ರಿಂದ 30ರವರೆಗೆ ಬೆಸ್ಕಾಂನ ಆನ್‌ಲೈನ್ ಸೇವೆಗಳು ಲಭ್ಯ ವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಈ ಬಗ್ಗೆ ಬೆಸ್ಕಾಂ ಪ್ರಕಟಣೆ ಹೊರಡಿಸಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಟಿಆರ್‌ಎಂ ಸಾಫ್ಟ್‌ವೇರ್ ಬದಲಿಗೆ ಐಪಿಡಿಎಸ್ ಐಟಿ ಅಪ್ಲಿಕೇಶನ್ ಅಳವಡಿಸಿಕೊಳ್ಳುವುದರಿಂದ ದತ್ತಾಂಶ ವರ್ಗಾವಣೆ ಮಾಡುವ ಸಲುವಾಗಿ 21 ದಿನಗಳ ಕಾಲ ಆನ್‌ಲೈನ್ ಸೇವೆಗಳಾದ ಹೊಸ ಸಂಪರ್ಕ, ಹೆಸರು ವರ್ಗಾವಣೆ, ಲೋಡ್ ಹೆಚ್ಚಳ, ಬಿಲ್ ಪಾವತಿ, ಸೇರಿದಂತೆ ಆನ್‌ಲೈನ್ ಸೇವೆಗಳು ಸ್ಥಗಿತಗೊಳ್ಳಲಿದೆ. ಗ್ರಾಹಕರು ಥರ್ಡ್ ಪಾರ್ಟಿ ಬಿಲ್ ಪಾವತಿ ವ್ಯವಸ್ಥೆಗಳಾದ ಗೂಗಲ್ ಪೇ, ಫೋನ್ ಪೇ ಮೂಲಕ ಬಿಲ್ ಪಾವತಿ ಮಾಡಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದೆ.
ಆನ್‌ಲೈನ್ ಸೇವೆ ಸ್ಥಗಿತಗೊಳ್ಳುವ ಪಟ್ಟಣಗಳು
ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆ.
ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'
ಐಪಿಡಿಎಸ್ ಪಟ್ಟಣ ಪ್ರದೇಶಗಳಿಗೆ ಹೊಸ ಐಟಿ ಅಪ್ಲಿಕೇಶನ್ಅನ್ನು ವಿಸ್ತರಿಸುವ ಸಲುವಾಗಿ ಈ ಪಟ್ಟಣ ಪ್ರದೇಶಗಳ ಉಪ ವಿಭಾಗಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ ಟಿಆರ್‌ಎಂ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಲಾಗಿದೆ. ಐಪಿಡಿಎಸ್ ಸಾಫ್ಟ್‌ವೇರ್ ಅಳವಡಿಕೆ ಹಿನ್ನೆಲೆಯಲ್ಲಿಆನ್‌ಲೈನ್ ಸೇವೆ ಅಲಭ್ಯವಿರುವುದರಿಂದ ಈ 20 ಪಟ್ಟಣ ಪ್ರದೇಶಗಳ ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ಕೋರಿದೆ.