KPCC: ಖುರ್ಚಿ ಉಳಿಸಿಕೊಳ್ಳಲು ಬಿಜೆಪಿ – ಜೆಡಿಎಸ್ ಸಮನ್ವಯ ಸಮಿತಿ ರಚನೆ: ಕೆಪಿಸಿಸಿ ವಕ್ತಾರ ಎಚ್. ಎ .ವೆಂಕಟೇಶ್
ಬಿ.ವೈ.ವಿಜಯೇಂದ್ರ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಮ್ಮ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹೇಗಾದರೂ ಮಾಡಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಮನ್ವಯ ಸಮಿತಿಯನ್ನು ರಚಿಸಿ ರಾಜಕೀಯವಾಗಿ ತಮ್ಮ ಅವಶ್ಯಕತೆಯನ್ನು ನಿರೂಪಿಸುವ ದುರುದ್ದೇಶವಿದೆಯೇ ಹೊರತು ಮತ್ತೇನು ಇಲ್ಲ. ಸಂಪೂರ್ಣ ಜನಗಳ ವಿಶ್ವಾಸಗಳಿಸಿ ಎಂದು ಅಧಿಕಾರ ಪಡೆಯದ ಈ ಎರಡು ಪಕ್ಷಗಳ ನಾಯಕರ ವರ್ತನೆಯನ್ನು ಜನ ಗಮನಿಸುತ್ತಿದ್ದಾರೆ.

-

ಬೆಂಗಳೂರು: ತಮ್ಮ ಖುರ್ಚಿ ಉಳಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚಿಸು ತ್ತಿದ್ದು, ಎರಡೂ ಪಕ್ಷಗಳು ರಾಜಕೀಯವಾಗಿ ದಿವಾಳಿಯಾಗಿವೆ ಎಂದು ಕೆಪಿಸಿಸಿ ವಕ್ತಾರ ( KPCC spokesperson) ಎಚ್. ಎ.ವೆಂಕಟೇಶ್ ಟೀಕಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ( BJP State President B.Y. Vijayendra) ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ( Union Minister HD Kumaraswamy) ರಾಜ್ಯ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆ ಕಳೆದು ಒಂದುವರೆ ವರ್ಷಗಳಾಗಿದ್ದು, ಇದೀಗ ಸಮನ್ವಯ ಸಮಿತಿ ರಚಿಸುವ ಔಚಿತ್ಯವೇನಿದೆ. ಎರಡು ಕುಟುಂಬಗಳ ಮಧ್ಯ ಅಧಿಕಾರ ಹಂಚಿಕೆಗಾಗಿ ಸಮನ್ವಯ ಸಮಿತಿ ರಚಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಹಾಗೂ ಎಚ್. ಡಿ. ಕುಮಾರಸ್ವಾಮಿ ಅವರಿಗೆ ತಮ್ಮ ಅಧಿಕಾರ ಕಳೆದು ಕೊಳ್ಳುವ ಆತಂಕ ಎದುರಾಗಿದೆ. ಹೇಗಾದರೂ ಮಾಡಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಮನ್ವಯ ಸಮಿತಿಯನ್ನು ರಚಿಸಿ ರಾಜಕೀಯವಾಗಿ ತಮ್ಮ ಅವಶ್ಯಕತೆಯನ್ನು ನಿರೂಪಿಸುವ ದುರುದ್ದೇಶ ವಿದೆಯೇ ಹೊರತು ಮತ್ತೇನು ಇಲ್ಲ. ಸಂಪೂರ್ಣ ಜನಗಳ ವಿಶ್ವಾಸಗಳಿಸಿ ಎಂದು ಅಧಿಕಾರ ಪಡೆಯದ ಈ ಎರಡು ಪಕ್ಷಗಳ ನಾಯಕರ ವರ್ತನೆಯನ್ನು ಜನ ಗಮನಿಸುತ್ತಿದ್ದಾರೆ.
ಇದನ್ನೂ ಓದಿ: Bangalore News: ಅ.19ರಂದು ಪರಮ್ ಫೌಂಡೇಶನ್‌ನ ಕಲಾ ಸಂವಾದದಲ್ಲಿ ʻಮಹಾಕ್ಷತ್ರಿಯʼ ನೃತ್ಯರೂಪಕ, ಸಂವಾದ!
ಪಕ್ಷ ಸಂಘಟಿಸುವ ಶಕ್ತಿ ವಿಜಯೇಂದ್ರಗೆ ಇಲ್ಲ. ಕೇಂದ್ರದಿಂದ ಯಾವುದೇ ಯೋಜನೆಯನ್ನು ತರಲು ವಿಫಲವಾಗಿರುವ ಕುಮಾರಸ್ವಾಮಿ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸು ತ್ತಿದ್ದಾರೆ.. ಜನ ಮನ್ನಣೆ ಸಾಧ್ಯವಾಗದ ಎರಡು ಪಕ್ಷದ ನಾಯಕರು ಅಧಿಕಾರಕ್ಕಾಗಿ ನಡೆಸುತ್ತಿರುವ ಕುತಂತ್ರ ಇದಾಗಿದೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ರಾಜಕೀಯ ಹೊಂದಾ ಣಿಕೆ ಯಾವ ರೀತಿ ಮುರಿದು ಬಿತ್ತು ಎಂಬುದು ರಾಜಕೀಯ ಇತಿಹಾಸದಲ್ಲಿ ದಾಖಲಾಗಿದೆ. ಪ್ರಸ್ತುತ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಜನಗಳ ಮುಂದೆ ಒಟ್ಟಿಗೆ ಕಾಣಿಸಿಕೊಳ್ಳುವುದು ನಿಜಕ್ಕೂ ವಿಪರ್ಯಾಸ ಎಂದಿದ್ದಾರೆ.
ರಾಜ್ಯ ಸರ್ಕಾರದ ಆಡಳಿತದ ವೈಫಲ್ಯತೆಯನ್ನು ಹೋರಾಟ ಮಾಡುವ ಯಾವುದೇ ನೈತಿಕತೆ ವಿರೋಧ ಪಕ್ಷಗಳಿಗೆ ಇಲ್ಲವಾಗಿದೆ. ಕಾಂಗ್ರೆಸ್ ಸರ್ಕಾರ ಜನಪರ ಆಡಳಿತದ ಮೂಲಕ ಕರ್ನಾಟಕ ದಲ್ಲಿ ಬಹಳ ಶಕ್ತಿಯುತವಾಗಿದೆ. ಸಮನ್ವಯ ಸಮಿತಿ ರಚಿಸುತ್ತೇವೆ ಎಂದು ಹೇಳುವುದರ ಮೂಲಕ ಎರಡು ಪಕ್ಷಗಳಲ್ಲಿ ವಿಶ್ವಾಸ ಮೂಡುತ್ತಿಲ್ಲ ಎಂಬುದೇ ಅರ್ಥ. ಸಮನ್ವಯ ಸಮಿತಿ ರಚನೆ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಕ್ಕಲ್ಲ ಎಂದಿದ್ದಾರೆ.