ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬ್ಲ್ಯೂ ಡಾರ್ಟ್‌ನಿಂದ 2026 ಜನವರಿ 1 ರಿಂದ ಜಾರಿಗೆ ಬರುವಂತೆ ಸಾಮಾನ್ಯ ಬೆಲೆ ಏರಿಕೆ ಘೋಷಣೆ

ಬ್ಲ್ಯೂಡಾರ್ಟ್‌ ಭವಿಷ್ಯಕ್ಕೆಸೂಕ್ತವಾದ ಸಾರಿಗೆ ಸೌಕರ್ಯವನ್ನು ಒದಗಿಸುವುದಕ್ಕೆ ಬದ್ಧವಾಗಿದೆ. ಸುಧಾ ರಿತ ತಂತ್ರಜ್ಞಾನ, ಪರಿಸರ ಸ್ನೇಹಿ ಸಾರಿಗೆ ಮತ್ತು ನೆಟ್‌ವರ್ಕ್ ವಿಸ್ತರಣೆಯವಿಭಾಗದಲ್ಲಿ ಹೂಡಿಕೆಯನ್ನು ಮುಂದುವರಿಸಲು ಜನರಲ್ ಪ್ರೈಸ್ ಇನ್‌ಕ್ರೀಸ್ಸಹಾಯ ಮಾಡುತ್ತದೆ. ಅಲ್ಲದೆ, ನಮ್ಮ ಗ್ರಾಹಕರು ಹೋಲಿಕೆ ಇಲ್ಲದವಿಶ್ವಾಸಾರ್ಹತೆ ಮತ್ತು ವೇಗದ ಅನುಭವ ಪಡೆಯುವುದನ್ನೂ ಇದು ಖಚಿತಪಡಿಸು ತ್ತದೆ.

ಬ್ಲ್ಯೂ ಡಾರ್ಟ್‌ನಿಂದ ಸಾಮಾನ್ಯ ಬೆಲೆ ಏರಿಕೆ ಘೋಷಣೆ

-

Ashok Nayak Ashok Nayak Oct 2, 2025 12:09 AM

ದಕ್ಷಿಣ ಏಷ್ಯಾದ ಪ್ರೀಮಿಯರ್ ಎಕ್ಸ್‌ಪ್ರೆಸ್ಏರ್ ಮತ್ತು ಕ್ರೋಢೀಕೃತ ಸಾರಿಗೆ ಹಾಗೂ ವಿತರಣೆ ಕಂಪನಿ ಬ್ಲ್ಯೂ ಡಾರ್ಟ್ಎಕ್ಸ್‌ಪ್ರೆಸ್ ಲಿಮಿಟೆಡ್‌ 2026 ಜನವರಿ 1 ರಿಂದ ಜಾರಿಗೆ ಬರುವಂತೆ ಸಾಮಾನ್ಯಬೆಲೆ ಏರಿಕೆ (ಜಿಪಿಐ) ಅನ್ನು ಘೋಷಿಸಿದೆ. ಉತ್ಪನ್ನದ ವ್ಯತ್ಯಾಸ ಮತ್ತುಗ್ರಾಹಕರ ಶಿಪ್ಪಿಂಗ್ ಪ್ರೊಫೈಲ್ ಅನ್ನು ಆಧರಿಸಿ 9% ರಿಂದ 12% ದರದಲ್ಲಿಸರಾಸರಿ ಶಿಪ್‌ಮೆಂಟ್ ದರವು ಏರಿಕೆ ಯಾಗಲಿದೆ.

ವಾರ್ಷಿಕವಾಗಿ ಬ್ಲ್ಯೂ ಡಾರ್ಟ್‌ ತನ್ನ ಬೆಲೆ ನಿರ್ಧಾರವನ್ನು ಸಮಗ್ರವಾಗಿ ಪರಿಶೀಲನೆ ನಡೆಸಿ, ನಿರಂತರವಾಗಿ ಸರ್ವೀಸ್ ಪರಿಣಿತಿ ಮತ್ತು ಸುಸ್ಥಿರ ಪರಿಸರವ್ಯವಸ್ಥೆಯ ಸಹಭಾಗಿತ್ವವನ್ನು ಪ್ರೋತ್ಸಾ ಹಿಸುತ್ತದೆ. ವೇಗ, ವಿಶ್ವಾಸಾರ್ಹತೆಮತ್ತು ಗ್ರಾಹಕ ಕೇಂದ್ರಿತ ಸೇವೆಗಳಲ್ಲಿ ಬ್ಲ್ಯೂ ಡಾರ್ಟ್‌ ಕಾಯ್ದು ಕೊಳ್ಳುತ್ತಿರುವ ಉನ್ನತ ಮಾನದಂಡಕ್ಕೆ ಈ ಬೆಲೆ ಹೊಂದಾಣಿಕೆ ಅಗತ್ಯವಾಗಿದ್ದು, ಹಣದುಬ್ಬರದ ಒತ್ತಡದಿಂದ ಉಂಟಾದ ಪ್ರಭಾವ, ವಿಮಾನ ಸಾರಿಗೆಯ ವೆಚ್ಚಮತ್ತು ಜಾಗತಿಕ ಪೂರೈಕೆ ಸರಣಿ ಯಲ್ಲಿರುವ ಸಂಕೀರ್ಣತೆಯನ್ನೂಸರಿದೂಗಿಸಲು ಇದು ಸಹಾಯ ಮಾಡುತ್ತದೆ.

ಹೊಸ ಗ್ರಾಹಕರಿಗೆ ಬೆಂಬಲ ನೀಡಲು ಮತ್ತು ಉದ್ಯಮದ ಬೆಳವಣಿಗೆಯನ್ನುಪ್ರೋತ್ಸಾಹಿಸಲು, 2025 ಅಕ್ಟೋಬರ್ 1 ರಿಂದ ಡಿಸೆಂಬರ್ 31 ರ ವರೆಗೆ ಸೈನ್ಅಪ್ ಮಾಡುವ ಗ್ರಾಹಕರ ಮೇಲೆ ಮುಂಬರುವ ಜಿಪಿಐ ಪರಿಣಾಮ ಬೀರುವುದಿಲ್ಲ.

ಇದನ್ನೂ ಓದಿ: Bangalore News: ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಈ ಘೋಷಣೆಯ ಬಗ್ಗೆ ಮಾತನಾಡಿದ ಬ್ಲ್ಯೂ ಡಾರ್ಟ್‌ ಎಕ್ಸ್‌ಪ್ರೆಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಬಾಲ್ಫರ್ ಮ್ಯಾನ್ಯುಅಲ್ “ಬ್ಲ್ಯೂಡಾರ್ಟ್‌ ಭವಿಷ್ಯಕ್ಕೆಸೂಕ್ತವಾದ ಸಾರಿಗೆ ಸೌಕರ್ಯವನ್ನು ಒದಗಿಸುವುದಕ್ಕೆ ಬದ್ಧವಾಗಿದೆ. ಸುಧಾರಿತ ತಂತ್ರಜ್ಞಾನ, ಪರಿಸರ ಸ್ನೇಹಿ ಸಾರಿಗೆ ಮತ್ತು ನೆಟ್‌ವರ್ಕ್ ವಿಸ್ತರಣೆಯವಿಭಾಗದಲ್ಲಿ ಹೂಡಿಕೆಯನ್ನು ಮುಂದುವರಿಸಲು ಜನರಲ್ ಪ್ರೈಸ್ ಇನ್‌ಕ್ರೀಸ್ಸಹಾಯ ಮಾಡುತ್ತದೆ. ಅಲ್ಲದೆ, ನಮ್ಮ ಗ್ರಾಹಕರು ಹೋಲಿಕೆ ಇಲ್ಲದವಿಶ್ವಾಸಾರ್ಹತೆ ಮತ್ತು ವೇಗದ ಅನುಭವ ಪಡೆಯುವುದನ್ನೂ ಇದು ಖಚಿತಪಡಿಸುತ್ತದೆ. 2025 ಅಕ್ಟೋಬರ್‌ನಿಂದ ಡಿಸೆಂಬರ್‌ ವರೆಗೆ ಆನ್‌ಬೋರ್ಡ್‌ ಆದ ಎಲ್ಲ ಗ್ರಾಹಕರನ್ನು ನಾವು ಈ ಬೆಲೆ ಏರಿಕೆಯಿಂದಹೊರಗಿಡುತ್ತೇವೆ. ನಮ್ಮ ಜೊತೆಗೆ ಸುಲಭವಾಗಿ ಉದ್ಯಮವು ವಿಸ್ತರಿಸಲುನಾವು ಈ ಮೂಲಕ ಸಹಾಯ ಮಾಡುತ್ತಿದ್ದೇವೆ” ಎಂದಿದ್ದಾರೆ.

ವಿಶ್ವಾಸ, ವೇಗ ಮತ್ತು ಕಾಳಜಿಯಿಂದ ಉದ್ಯಮಗಳು ಮತ್ತುಸಮುದಾಯಗಳು ಸಂಪರ್ಕಿಸಬೇಕು ಎಂಬ ನಮ್ಮ ಧ್ಯೇಯಕ್ಕೆ ಬ್ಲ್ಯೂಡಾರ್ಟ್ಬದ್ಧವಾಗಿದೆ. ಆರ್ಥಿಕ ವಾಸ್ತವಾಂಶಗಳು ಮತ್ತು ಅನ್ವೇಷಣೆ ಹಾಗೂಸುಸ್ಥಿರತೆಯಲ್ಲಿ ದೀರ್ಘಕಾಲೀನ ಹೂಡಿಕೆಗಳ ಮಧ್ಯೆ ಉತ್ತಮ ಸಮತೋಲನ ಸಾಧಿಸುವು ದಕ್ಕಾಗಿ,  ಸುಸ್ಥಿರ ಬೆಳವಣಿಗೆಗ ನಮ್ಮನ್ನು ಮತ್ತು  ನಮ್ಮಗ್ರಾಹಕರನ್ನು ನಾವು ಸಿದ್ಧವಾಗಿಸುತ್ತಿದ್ದೇವೆ. ಉತ್ತಮ ಅಡಿಪಾಯ ಮತ್ತುಗ್ರಾಹಕರೇ ಪ್ರಥಮ ಎಂಬ ಮನಸ್ಥಿತಿಯ ಮೂಲಕ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ಉದ್ಯಮದಲ್ಲಿ ಮಾನದಂಡಗಳನ್ನು ನಿಗದಿ ಪಡಿಸುವುದನ್ನು ಮುಂದುವರಿಸುತ್ತಿದ್ದೇವೆ.