ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BMTC bus fire: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಸುಟ್ಟು ಕರಕಲು, 75 ಪ್ರಯಾಣಿಕರು ಪಾರು

Bengaluru: ಬಸ್‌ ಚಲಿಸುತ್ತಿದ್ದಂತೆ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತ ಚಾಲಕ, ನಿರ್ವಾಹಕರು ತಕ್ಷಣ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಕ್ರಮೇಣ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಬಸ್‌ ಧಗಧಗಿಸಿ ಉರಿದಿದೆ. ಚಾಲಕನ ಸಮಯಪ್ರಜ್ಞೆಯಿಂದ 75 ಪ್ರಯಾಣಿಕರು ಸೇಫ್‌ ಆಗಿದ್ದಾರೆ.

ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಸುಟ್ಟು ಕರಕಲು, 75 ಪ್ರಯಾಣಿಕರು ಪಾರು

-

ಹರೀಶ್‌ ಕೇರ ಹರೀಶ್‌ ಕೇರ Sep 15, 2025 9:28 AM

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಏಕಾಏಕಿ ಬೆಂಕಿ (BMTC Bus Fire) ಕಾಣಿಸಿಕೊಂಡಿದ್ದು, ಬಸ್‌ ಸುಟ್ಟು ಕರಕಲಾಗಿರುವ ಘಟನೆ ನಗರದ (Bengaluru) ಹೆಚ್ಎಎಲ್ (HAL) ಮುಖ್ಯದ್ವಾರದ ಬಳಿ ನಡೆದಿದೆ. ಬೆಳಗ್ಗಿನ ಜಾವ 5:10ಕ್ಕೆ ಅಗ್ನಿ ದುರಂತ ಸಂಭವಿಸಿದೆ. ದುರಂತಕ್ಕೀಡಾದ ಬಸ್‌ (ಸಂಖ್ಯೆ KA57 F 4568) ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ತೆರಳುತ್ತಿತ್ತು. ಈ ಬಸ್‌ನಲ್ಲಿ ಸುಮಾರು 75 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಬಸ್‌ ಚಲಿಸುತ್ತಿದ್ದಂತೆ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತ ಚಾಲಕ, ನಿರ್ವಾಹಕರು ತಕ್ಷಣ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಕ್ರಮೇಣ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಬಸ್‌ ಧಗಧಗಿಸಿ ಉರಿದಿದೆ. ಚಾಲಕನ ಸಮಯಪ್ರಜ್ಞೆಯಿಂದ 75 ಪ್ರಯಾಣಿಕರು ಸೇಫ್‌ ಆಗಿದ್ದಾರೆ.

ಬಳಿಕ ಹೆಚ್ಎಲ್ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಪತ್ತೆ ಹಚ್ಚಲು ಮುಂದಾಗಿದೆ.

ಇದನ್ನೂ ಓದಿ: Road Accident: ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಹರಿದು 10 ವರ್ಷದ ಬಾಲಕ ಸಾವು