M K Stalin: ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಕೃಷ್ಣಗಿರಿ ಉತ್ಪಾದನಾ ತಾಣಕ್ಕೆ ಎಂ.ಕೆ. ಸ್ಟಾಲಿನ್ ಭೂಮಿಪೂಜೆ
ತಮಿಳುನಾಡು ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಹಾಗೂ ರಫ್ತು ಕೇಂದ್ರವಾಗಿದೆ. ಜೊತೆಗೆ ಡೆಲ್ಟಾ ಎಲೆಕ್ಟ್ರಾನಿಕ್ಸ್ ಮತ್ತು ತಮಿಳುನಾಡು ಸರ್ಕಾರದ ನಡುವಿನ ಸಹಯೋಗವು ರಾಜ್ಯದ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಇದೇ ಸಂದರ್ಬದಲ್ಲಿ ಹೇಳಿದರು.

-

ಕೃಷ್ಣಗಿರಿ: ವಿದ್ಯುತ್ ನಿರ್ವಹಣೆ ಮತ್ತು ಸ್ಮಾರ್ಟ್ ಗ್ರೀನ್ ಸೊಲ್ಯೂಷನ್‌ಗಳ ಪ್ರಮುಖ ಪೂರೈಕೆದಾರ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ, ತಮಿಳುನಾಡಿನ ಕೃಷ್ಣಗಿರಿಯಲ್ಲಿ ತನ್ನ ಉತ್ಪಾದನಾ ತಾಣದ ಶಿಲಾನ್ಯಾಸ ಮಾಡಿತು. ಇದೇ ಸಂದರ್ಭದಲ್ಲಿ ಡೆಲ್ಟಾ ಹೊಸ ಅತ್ಯಾಧುನಿಕ ಸ್ಮಾರ್ಟ್ ಉತ್ಪಾದನಾ ಮಾರ್ಗವನ್ನು ಅನಾವರಣಗೊಳಿಸಲಾಯಿತು.
ತಮಿಳುನಾಡಿನ ಮುಖ್ಯಮಂತ್ರಿ ತಿರು ಎಂ.ಕೆ.ಸ್ಟಾಲಿನ್ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿದ್ದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಮಾತನಾಡಿ, "ಹೊಸೂರು ಪ್ರದೇಶದ ಕೈಗಾರಿಕಾ ಅಭಿವೃದ್ಧಿಗೆ ಡೆಲ್ಟಾ ಎಲೆಕ್ಟ್ರಾನಿಕ್ಸ್ ನೀಡಿದ ಕೊಡುಗೆಯನ್ನು ನಾನು ಪೂರ್ಣ ಹೃದಯದಿಂದ ಶ್ಲಾಘಿಸುತ್ತೇನೆ. ಕಾರ್ಖಾನೆಯ ಹೊಸ ಸ್ವಯಂಚಾಲಿತ ಉತ್ಪಾದನಾ ಮಾರ್ಗದ ಉದ್ಘಾಟನೆ ಮತ್ತು ಅದರ ಇತ್ತೀಚಿನ ವಿಸ್ತರಣೆಯ ಬಗ್ಗೆ ನನಗೆ ಸಂತಸ ತಂದಿದೆ.
ಇದನ್ನೂ ಓದಿ: MK Stalin: ಸಿಎಂ ಸಿದ್ದರಾಮಯ್ಯಗೆ ಕನ್ನಡದಲ್ಲೇ ಜನ್ಮದಿನದ ಶುಭಾಶಯ ಕೋರಿದ ತಮಿಳುನಾಡು ಸಿಎಂ ಸ್ಟಾಲಿನ್
ತಮಿಳುನಾಡು ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಹಾಗೂ ರಫ್ತು ಕೇಂದ್ರವಾಗಿದೆ. ಜೊತೆಗೆ ಡೆಲ್ಟಾ ಎಲೆಕ್ಟ್ರಾನಿಕ್ಸ್ ಮತ್ತು ತಮಿಳುನಾಡು ಸರ್ಕಾರದ ನಡುವಿನ ಸಹಯೋಗವು ರಾಜ್ಯದ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಇದೇ ಸಂದರ್ಬದಲ್ಲಿ ಹೇಳಿದರು.
"ಈ ಉತ್ಪಾದನಾ ತಾಣದ ವಿಸ್ತರಣೆಯು ಡೆಲ್ಟಾದ ರಾಷ್ಟ್ರೀಯ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ದೀರ್ಘಕಾಲೀನ ಬದ್ಧತೆ ತೋರಿಸಿದ್ದು, ಒಂದು ಮೈಲಿಗಲ್ಲು ಎನಿಸಿಕೊಂಡಿದೆ" ಎಂದು ಡೆಲ್ಟಾದ ಜಾಗತಿಕ ವ್ಯಾಪಾರ ಕಾರ್ಯಾಚರಣೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿಮ್ಮಿ ಯಿನ್ ಹೇಳಿದರು.
ಕಳೆದ 2020ರಿಂದ ಜಾಗತಿಕವಾಗಿರುವ ಭಾರತದ ಪಾತ್ರವನ್ನು ನಮ್ಮ ಉತ್ಪಾದನಾ ಸಾಮರ್ಥ್ಯಗಳು ಸದೃಢಗೊಳಿಸಿದ್ದು ಈ ನೂತನ ಉತ್ಪಾದನಾ ತಾಣವು ಇನ್ನಷ್ಟು ಬಲ ನೀಡಲಿದೆ ಮತ್ತು ನಮ್ಮ ಸ್ಥಳೀಯ ಪ್ರಯತ್ನಗಳಿಗೆ ಬೆಂಬಲಕ್ಕಾಗಿ ನಾವು ಭಾರತ ಸರ್ಕಾರಕ್ಕೆ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ತಿರು ಎಂ.ಕೆ. ಸ್ಟಾಲಿನ್ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇವೆ. ನಮ್ಮ ಜನರು ಅಷ್ಟೇ ಮುಖ್ಯ - ಸುರಕ್ಷಿತ ಮತ್ತು ವಸತಿ ಪರಿಸರ ವ್ಯವಸ್ಥೆ ರಚಿಸುವ ಮೂಲಕ, ನಮ್ಮ ಉದ್ಯೋಗಿಗಳು ನಮ್ಮ ವ್ಯವಹಾರ ದೊಂದಿಗೆ ಅಭಿವೃದ್ಧಿ ಹೊಂದುವುದನ್ನು ನಾವು ಖಚಿತ ಪಡಿಸಿಕೊಳ್ಳುತ್ತೇವೆ."
"ಡೆಲ್ಟಾದ ಈ ಕೃಷ್ಣಗಿರಿ ತಾಣವು ಉತ್ಪಾದನೆ, ನಾವೀನ್ಯತೆ, ಪ್ರತಿಭೆ ಮತ್ತು ಸುಸ್ಥಿರತೆಯಲ್ಲಿ ಭಾರತದ ಶ್ರೇಷ್ಠತೆಯ ಸಂಕೇತ. ಇದಲ್ಲದೇ, ಹೊಸದಾಗಿ ಸ್ಥಾಪಿಸಲಾದ ಉತ್ಪಾದನಾ ಮಾರ್ಗವು ಕೈಗಾರಿಕಾ ಯಾಂತ್ರೀಕೃತ ಹಾರ್ಡ್‌ವೇರ್-ಸಾಫ್ಟ್‌ವೇರ್ ಏಕೀಕರಣ ಮತ್ತು ಪರಿಸರ ಸ್ನೇಹಿ ಉತ್ಪಾದನೆಯಲ್ಲಿ ಡೆಲ್ಟಾದ ವಿಶಿಷ್ಟ ಪರಾಕ್ರಮಕ್ಕೆ ಹಿಡಿದ ಗನ್ನಡಿ. ಉತ್ಪಾದನೆ ಹೊರತಾಗಿ, ಇಲ್ಲಿ ನಮ್ಮ ಹೂಡಿಕೆಯು ಸ್ಥಳೀಯ ಕೌಶಲ್ಯಗಳನ್ನು ಮುಂದುವರೆಸಲು ಮತ್ತು ಉದ್ಯಮ ಮತ್ತು ಸಮಾಜ ಎರಡಕ್ಕೂ ಪ್ರಯೋಜನವಾಗುವ ಅವಕಾಶಗಳ ಸೃಷ್ಟಿಸಲು ಡೆಲ್ಟಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾದ ಅಧ್ಯಕ್ಷ ಬೆಂಜಮಿನ್ ಲಿನ್ ಹೇಳಿದರು.
ಸೆಪ್ಟೆಂಬರ್ 2025 ರ ಹೊತ್ತಿಗೆ 3,800 ಕ್ಕೂ ಹೆಚ್ಚು ಉದ್ಯೋಗಿಗಳ ಹೊಂದಿರುವ 95 ಎಕರೆ ಪ್ರದೇಶ ದಲ್ಲಿ ಹರಡಿರುವ ಕೃಷ್ಣಗಿರಿ ಕ್ಯಾಂಪಸ್, ನಾಲ್ಕು ದೊಡ್ಡ ಪ್ರಮಾಣದ ಕಾರ್ಖಾನೆ ಕಟ್ಟಡಗಳ ಒಳಗೊಂಡಿದೆ. ಇದು ಡೆಲ್ಟಾದ ಪ್ರಮುಖ ಉತ್ಪಾದನಾ ಕೇಂದ್ರ. ಮುಖ್ಯವಾಗಿ ವ್ಯಾಪಕ ಶ್ರೇಣಿಯ ಕೈಗಾರಿಕಾ ಮತ್ತು ವಾಣಿಜ್ಯ ಅನ್ವಯಿಕೆಗಳಿಗೆ ಹೆಚ್ಚಿನ ದಕ್ಷತೆಯ ವಿದ್ಯುತ್ ಸರಬರಾಜು ಮತ್ತು ಡಿಸಿ ಬ್ರಷ್‌ಲೆಸ್ ಫ್ಯಾನ್‌ಗಳ ಉತ್ಪಾದನೆಯ ಮೇಲೆ ಹಾಗೂ ಟೆಲಿಕಾಂ ವಿದ್ಯುತ್ ವ್ಯವಸ್ಥೆಗಳು, ಕೈಗಾರಿಕಾ ಯಾಂತ್ರೀಕೃತಗೊಂಡ ಪರಿಹಾರಗಳು, ಡೇಟಾ ಸೆಂಟರ್ ಮೂಲಸೌಕರ್ಯ ಮತ್ತು ವಿದ್ಯುತ್ ಚಲನಶೀಲತೆಗೆ ಪರಿಹಾರಗಳ ಮೇಲೆ ಈ ಸ್ಥಳವು ಕೇಂದ್ರೀಕೃತವಾಗಿದೆ. ಮುಂಬರುವ ಎರಡು ಕಾರ್ಖಾನೆ ಕಟ್ಟಡಗಳು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಆ ವಿಭಾಗಗಳಲ್ಲಿ ಉತ್ಪಾ ದನಾ ಸಾಮರ್ಥ್ಯವನ್ನು ವಿಸ್ತರಿಸುತ್ತವೆ.
ಹೊಸದಾಗಿ ಅನಾವರಣಗೊಂಡ ಸ್ಮಾರ್ಟ್ ಉತ್ಪಾದನಾ ಮಾರ್ಗವು ಡೆಲ್ಟಾದ "ಇನ್‌ಲೈನ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ ಲೈನ್ ಮ್ಯಾನೇಜರ್" ಅನ್ನು ಒಳಗೊಂಡಿದೆ. ಇದು ನೈಜ ಸಮಯದಲ್ಲಿ ಸ್ಮಾರ್ಟ್ ಲೈನ್ ಕಾನ್ಫಿಗರೇಶನ್, ಸಲಕರಣೆ ನಿರ್ವಹಣೆ ಮತ್ತು ಸಾಮಗ್ರಿಗಳ ಲಾಜಿಸ್ಟಿಕ್ಸ್ ಸಮನ್ವಯದ ಮೂಲಕ ಸ್ವಯಂಚಾಲಿತ ಉತ್ಪಾದನಾ ಮಾರ್ಗ ಬದಲಾವಣೆಗಳು ಮತ್ತು ಡೇಟಾ-ಚಾಲಿತ ನಿರ್ಧಾರ ತೆಗೆದು ಕೊಳ್ಳುವಿಕೆಯನ್ನು ಸುಗಮಗೊಳಿಸುತ್ತದೆ.
ಮುಂದುವರಿದ ಈ ಉತ್ಪಾದನಾ ಮಾರ್ಗವು 6-ಆಕ್ಸಿಸ್ ಆರ್ಟಿ ಕ್ಯುಲೇಟೆಡ್ ರೋಬೋಟ್‌ಗಳು, 4-ಆಕ್ಸಿಸ್ SCARA ರೋಬೋಟ್‌ಗಳು, ಸರ್ವೋ ಮೋಷನ್ ಸಿಸ್ಟಮ್‌ಗಳು, ಪ್ರೊಗ್ರಾಮೆಬಲ್ ಲಾಜಿಕ್ ಕಂಟ್ರೋಲರ್‌ಗಳು (PLC), ಕೈಗಾರಿಕಾ ನೆಟ್‌ವರ್ಕಿಂಗ್ ಸ್ವಿಚ್‌ಗಳಂತಹ ಡೆಲ್ಟಾದ ಸ್ವಂತ ಕೈಗಾರಿಕಾ ಯಾಂತ್ರೀಕೃತಗೊಂಡ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಂಡಿದೆ. ಈ ಸಂಪೂರ್ಣ ಸ್ಮಾರ್ಟ್ ಪರಿಸರ ವ್ಯವಸ್ಥೆಯು ಗೃಹೋ ಪಯೋಗಿ ಅನ್ವಯಿಕೆಗಳಿಗೆ ವಿದ್ಯುತ್ ಸರಬರಾಜುಗಳ ಉತ್ಪಾದನೆಯಲ್ಲಿ ಉತ್ಪಾದಕತೆಯಲ್ಲಿ (*) 95% ರಷ್ಟು ಹೆಚ್ಚಳ ನೀಡಿದೆ.
ಕೃಷ್ಣಗಿರಿ ಉತ್ಪಾದನಾ ತಾಣದ ಕಾರ್ಯಾಚರಣೆಗಳು ಡೆಲ್ಟಾದ ಜಾಗತಿಕ ಸುಸ್ಥಿರತೆಯ ಬದ್ಧತೆಗಳಿಗೆ ಅನುಗುಣವಾಗಿ ಪ್ರಸ್ತುತ 53% ವರೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಚಾಲಿತ ವಾಗಿವೆ, ಇದರಲ್ಲಿ 6.9MWp ಸೌರ ಮೇಲ್ಛಾವಣಿ ವ್ಯವಸ್ಥೆ ಮತ್ತು ಪವನ ವಿದ್ಯುತ್ ಸಂಗ್ರಹಣೆ ಸೇರಿವೆ. ಇದಲ್ಲದೆ, 1,800 KLD (ದಿನಕ್ಕೆ ಕಿಲೋಲೀಟರ್) ನೀರಿನ ಸಂಸ್ಕರಣಾ ಘಟಕ ವ್ಯವಸ್ಥೆ ಮತ್ತು ಮಳೆನೀರು ಕೊಯ್ಲು ಮೂಲಸೌಕರ್ಯವು ಸೈಟ್‌ನ ನೀರಿನ ಸಂರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಆದರೆ ತ್ಯಾಜ್ಯ ನಿರ್ವಹಣಾ ಕಾರ್ಯವಿಧಾನವು CPCB-ಪ್ರಮಾಣೀಕೃತ ಅಭ್ಯಾಸಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ.
ಕೃಷ್ಣಗಿರಿಯನ್ನು ಸ್ಮಾರ್ಟ್ ಉತ್ಪಾದನೆ, ಕೌಶಲ್ಯ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿ ಕಾರ್ಯಾ ಚರಣೆಗಳಿಗೆ ಜಾಗತಿಕ ಮಾನದಂಡವನ್ನಾಗಿ ಮಾಡುವ ದೀರ್ಘಾವಧಿಯ ದೃಷ್ಟಿಕೋನದೊಂದಿಗೆ, ಡೆಲ್ಟಾದ ಹೂಡಿಕೆ ಯು ಭಾರತದ ಉತ್ಪಾದನೆ, ನಾವೀನ್ಯತೆ ಮತ್ತು ಸುಸ್ಥಿರತೆಯ ದೃಷ್ಟಿಕೋನ ವನ್ನು ಬಲಪಡಿಸಲು ಸಜ್ಜಾಗಿದೆ.
ಹಕ್ಕು ನಿರಾಕರಣೆ
(*) ಈ ಅಂದಾಜು ಅಂಕಿ ಅಂಶವು ನಿರ್ದಿಷ್ಟ ಉತ್ಪಾದನಾ ಪ್ರಕ್ರಿಯೆಯ ಅಡಿಯಲ್ಲಿ ಮಾತ್ರ ಅನ್ವಯಿಸು ತ್ತದೆ. ಮುಖ್ಯವಾಗಿ ಮಾನವ ಶ್ರಮದಿಂದ ಬೆಂಬಲಿತ ಹಿಂದಿನ ಸಾಲಿಗೆ ಹೋಲಿಸಿದರೆ ಮತ್ತು ಅದರ ಫಲಿತಾಂಶಗಳು ವಿಭಿನ್ನ ಕೈಗಾರಿಕಾ ವಿಧಾನಗಳಲ್ಲಿ ಭಿನ್ನವಾಗಿರಬಹುದು.