ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಬಿಎಸ್ಎನ್ಎಲ್ʼ ಪ್ರಾರಂಭಿಸಿದ ʻಇಂಟೆಲಿಜೆಂಟ್ ಸ್ವದೇಶಿ 4ಜಿ ನೆಟ್‌ವರ್ಕ್‌ʼ ಇನ್ನೂ 26,700 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಿದೆ

ಸಮರೋಪಾದಿಯ ಕಾರ್ಯಕ್ರಮದ ಭಾಗವಾಗಿ ಟಿಸಿಎಸ್ ಡೇಟಾ ಕೇಂದ್ರ ಗಳನ್ನು ಸ್ಥಾಪಿಸುವ ಮೂಲಕ, ಸಿ-ಡಾಟ್‌ನ ಇಪಿಸಿ ಕೋರ್ ಅಪ್ಲಿಕೇಶನ್, ತೇಜಸ್‌ನ ಬೇಸ್ ಸ್ಟೇಷನ್‌ ಗಳು ಮತ್ತು ರೇಡಿಯೊ ಮೂಲಸೌಕರ್ಯವನ್ನು 100,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ಥಾಪಿಸುವ ಮೂಲಕ ಹಾಗೂ 24/7 ನೈಜ ಸಮಯದ ನೆಟ್‌ವರ್ಕ್ ನಿರ್ವಹಣೆಗಾಗಿ ಟಿಸಿಎಸ್‌ನ ಕಾಗ್ನಿಟಿವ್ ನೆಟ್ವರ್ಕ್ ಆಪರೇಷನ್ಸ್ (ಟಿಸಿಎಸ್‌ ಸಿಎನ್‌ಒಪಿಎಸ್‌) ವೇದಿಕೆಯನ್ನು ಬಳಸಿಕೊಳ್ಳುವ ಮೂಲಕ ತನ್ನ ಅನುಷ್ಠಾನವನ್ನು ಮುನ್ನಡೆಸಿತು.

ಇನ್ನೂ 26,700 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಿದೆ ಬಿಎಸ್ಎನ್ಎಲ್

-

Ashok Nayak Ashok Nayak Sep 29, 2025 6:06 PM

ಬೆಂಗಳೂರು: ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼ(ಬಿಎಸ್ಎನ್ಎಲ್) ಸಂಸ್ಥೆಯು ʻಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ʼ (ಟಿಸಿಎಸ್) (ಬಿಎಸ್ಇ: 532540, ಎನ್ಎಸ್ಇ: ಟಿಸಿಎಸ್), ʻಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ʼ (ಸಿ-ಡಾಟ್) ಮತ್ತು ʻತೇಜಸ್ ನೆಟ್‌ವರ್ಕ್ಸ್‌ ಲಿಮಿಟೆಡ್ʼ (ಬಿಎಸ್ಇ: 540595, ಎನ್ಎಸ್ಇ: ಟೆಜಾಸ್ನೆಟ್) ಸಹಭಾಗಿತ್ವದಲ್ಲಿ ಇಂದು ಭಾರತ್ ಟೆಲಿಕಾಂ ಸ್ಟಾಕ್ ಅನ್ನು ಅನಾವರಣಗೊಳಿಸಿದೆ. ಇದೊಂದು ಆಧುನಿಕ, ಸುರಕ್ಷಿತ ಪರಿಹಾರವಾಗಿದೆ. ಈ ಉಪಕ್ರಮವು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ʻಡಿಜಿಟಲ್ ಸಂಪರ್ಕʼ ಮತ್ತು ʻಸ್ವಾವಲಂಬಿ ಭಾರತʼ ದೃಷ್ಟಿಕೋನದಿಂದ ಸ್ಫೂರ್ತಿ ಪಡೆದಿದೆ.

ಈ ಅನಾವರಣದೊಂದಿಗೆ, ಭಾರತವು 4ಜಿ ಮತ್ತು ಅದರಾಚೆಗೆ ಬೆಂಬಲಿಸುವ ಸ್ವಾವಲಂಬಿ, ಸ್ಥಳೀಯ ಟೆಲಿಕಾಂ ತಂತ್ರಜ್ಞಾನ ಸ್ಟ್ಯಾಕ್ ಅನ್ನು ನಿರ್ಮಿಸಿದ ವಿಶ್ವದ ಐದನೇ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಸಮರೋಪಾದಿಯ ಕಾರ್ಯಕ್ರಮದ ಭಾಗವಾಗಿ ಟಿಸಿಎಸ್ ಡೇಟಾ ಕೇಂದ್ರ ಗಳನ್ನು ಸ್ಥಾಪಿಸುವ ಮೂಲಕ, ಸಿ-ಡಾಟ್‌ನ ಇಪಿಸಿ ಕೋರ್ ಅಪ್ಲಿಕೇಶನ್, ತೇಜಸ್‌ನ ಬೇಸ್ ಸ್ಟೇಷನ್‌ ಗಳು ಮತ್ತು ರೇಡಿಯೊ ಮೂಲಸೌಕರ್ಯವನ್ನು 100,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ಥಾಪಿಸುವ ಮೂಲಕ ಹಾಗೂ 24/7 ನೈಜ ಸಮಯದ ನೆಟ್‌ವರ್ಕ್ ನಿರ್ವಹಣೆಗಾಗಿ ಟಿಸಿಎಸ್‌ನ ಕಾಗ್ನಿಟಿವ್ ನೆಟ್ವರ್ಕ್ ಆಪರೇಷನ್ಸ್ (ಟಿಸಿಎಸ್‌ ಸಿಎನ್‌ಒಪಿಎಸ್‌) ವೇದಿಕೆಯನ್ನು ಬಳಸಿಕೊಳ್ಳುವ ಮೂಲಕ ತನ್ನ ಅನುಷ್ಠಾನವನ್ನು ಮುನ್ನಡೆಸಿತು.

ಇದನ್ನು ತಲುಪಿಸಲು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರಲ್ಲಿ ಆಳವಾದ ಎಂಜಿನಿಯರಿಂಗ್ ಪರಿಣತಿ ಮತ್ತು ತಡೆರಹಿತ ಸಹಯೋಗದ ಅಗತ್ಯವಿತ್ತು. ಈ ಯೋಜನೆಯನ್ನು ಟಿಸಿಎಸ್, ಬಿಎಸ್ಎ ನ್ಎಲ್, ದೂರಸಂಪರ್ಕ ಇಲಾಖೆ, `ಮೆಕಿನ್ಸೆ ಮತ್ತು ಕಂ’, ಸಿ-ಡಾಟ್, ತೇಜಸ್, ಐ&ಸಿ ಪಾಲುದಾರರು 'ಮಿಷನ್-ಮೋಡ್' ನಲ್ಲಿ ನಿಯಂತ್ರಿಸುತ್ತಾರೆ.

ಇದನ್ನೂ ಓದಿ: Prof Uma RamRao Column: ಅಮರ ಸಾಹಿತಿಯ ಒಡನಾಟದಲ್ಲಿ ನಾನು ವಿನಮ್ರಳಾದೆ

ಈ ಕಾರ್ಯವು ಎರಡು ವರ್ಷಗಳಲ್ಲಿ ಪೂರ್ಣಗೊಂಡಿತು. ಇದು ಬಿಎಸ್ಎನ್ಎಲ್‌ನಲ್ಲಿ ಅಸ್ತಿತ್ವದಲ್ಲಿರುವ 2ಜಿ/3ಜಿ ನೆಟ್‌ವರ್ಕ್‌ ಮೂಲಸೌಕರ್ಯಕ್ಕೆ ಸಂಪೂರ್ಣ ಏಕೀಕರಣದೊಂದಿಗೆ ವೇಗದ 4ಜಿ ನೆಟ್‌ವರ್ಕ್‌ ನಿಯೋಜನೆಗಳಲ್ಲಿ ಒಂದಾಗಿದೆ. ಇದು ಭಾರತದ ರಾಷ್ಟ್ರೀಯ ಭದ್ರತೆ ಯನ್ನು ಬಲಪಡಿಸುತ್ತದೆ ಜೊತೆಗೆ ನಗರ ಮತ್ತು ಗ್ರಾಮೀಣ ಭಾರತಕ್ಕೆ ಆನ್ಲೈನ್ ಶಿಕ್ಷಣ, ನಾಗರಿಕ ಸೇವೆಗಳು, ಟೆಲಿಮೆಡಿಸಿನ್, ಇ-ಆಡಳಿತ ಇತ್ಯಾದಿಗಳನ್ನು ಒಂದು ಗುಂಡಿಯನ್ನು ಒತ್ತುವ ಮೂಲಕ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಬಿಎಸ್ಎನ್ಎಲ್ ಸಿಎಂಡಿ ಶ್ರೀ ರಾಬರ್ಟ್ ಜೆ ರವಿ ಅವರು ಮಾತನಾಡಿ, "ಇಂದು, ನಾವು ರಾಷ್ಟ್ರೀಯ ಹೆಮ್ಮೆಗಾಗಿ ಒಂದು ಸ್ಮರಣೀಯ ಸಾಧನೆಯನ್ನು ಆಚರಿಸುತ್ತೇವೆ. ಟಿಸಿಎಸ್, ತೇಜಸ್ ನೆಟ್‌ವರ್ಕ್‌ ಮತ್ತು ಸಿ-ಡಾಟ್ ಸಹಯೋಗದ ಬಲದ ಮೇಲೆ ನಿರ್ಮಿಸಲಾದ ನಮ್ಮ ಸ್ಥಳೀಯ 4ಜಿ ನೆಟ್‌ವರ್ಕ್‌ನ ರಾಷ್ಟ್ರವ್ಯಾಪಿ ಚಾಲನೆಯು ಆತ್ಮನಿರ್ಭರ ಭಾರತದ ಘೋಷಣೆಯಾಗಿದೆ. ಬಿಎಸ್ಎನ್ಎಲ್ ತಂಡದ ಅವಿರತ ಸಮರ್ಪಣೆಯಿಂದ ಜೀವ ತುಂಬಿದ ಈ 'ಮೇಡ್ ಇನ್ ಭಾರತ್' ಸ್ಟ್ಯಾಕ್, ನಮ್ಮ ಡಿಜಿಟಲ್ ಭವಿಷ್ಯವನ್ನು ಭದ್ರಪಡಿಸುತ್ತದೆ ಮತ್ತು ಸಂಪರ್ಕದ ಫಲಗಳು ಪ್ರತಿಯೊಬ್ಬ ನಾಗರಿಕನನ್ನು ಸಬಲೀಕರಣಗೊಳಿಸುತ್ತವೆ ಎಂದು ಖಚಿತಪಡಿಸುತ್ತದೆ, ಹಿಂದೆಂದಿ ಗಿಂತಲೂ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುತ್ತದೆ,’’ ಎಂದು ಹೇಳಿದರು.

ಬಿಎಸ್ಎನ್ಎಲ್ ನಿರ್ದೇಶಕ (ಕನ್ಸ್ಯೂಮರ್ ಮೊಬಿಲಿಟಿ - ಸಿಎಂ) ಶ್ರೀ ಸಂದೀಪ್ ಗೋವಿಲ್ ಅವರು ಮಾತನಾಡಿ, "ನಮ್ಮ ಗ್ರಾಹಕರು ಈಗ ಹೊಸ ಗುಣಮಟ್ಟದ ಸಂಪರ್ಕವನ್ನು ಅನುಭವಿಸು ತ್ತಾರೆ, ಇದು ನಿಜವಾಗಿಯೂ ನಮ್ಮದೇ ಆದ ನೆಟ್‌ವರ್ಕ್‌ನಿಂದ ನಡೆಸಲ್ಪಡುತ್ತದೆ. ಈ ಸ್ವದೇಶಿ 4ಜಿ ತಂತ್ರಜ್ಞಾನವು ಸಿ-ಡಾಟ್, ತೇಜಸ್, ಟಿಸಿಎಸ್ ಮತ್ತು ಬಿಎಸ್ಎನ್ಎಲ್‌ನ ಉದ್ಯೋಗಿ ಗಳ ದಣಿವರಿಯದ ಪ್ರಯತ್ನಗಳ ಫಲವಾಗಿದೆ, ಇದನ್ನು ಉತ್ಕೃಷ್ಟತೆ ಮತ್ತು ಅಗಾಧತೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲರನ್ನೂ ಒಳಗೊಂಡ ಡಿಜಿಟಲ್ ಸಮಾಜವನ್ನು ನಿರ್ಮಿಸಲು ಮೂಲಾಧಾರವಾಗಿದೆ, 5ಜಿ ಮತ್ತು ಅದರಾಚೆಗೆ ವಿಕಸನಗೊಳ್ಳಲು ಸಿದ್ಧವಾಗಿದೆ, ಭಾರತದ ಬೆಳವಣಿಗೆಯ ಕಥೆಯು ಸಾರ್ವಭೌಮ, ದೇಶೀಯ ತಂತ್ರಜ್ಞಾನದಿಂದ ಚಾಲಿತವಾಗಿದೆ ಎಂದು ಖಚಿತಪಡಿಸುತ್ತದೆ,’’ ಎಂದು ಹೇಳಿದರು.

ಟಿಸಿಎಸ್ ನ ಟೆಲಿಕಾಂ ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್ ಸಲಹೆಗಾರ ಮತ್ತು ತೇಜಸ್ ನೆಟ್‌ವರ್ಕ್ಸ್‌‌ ಅಧ್ಯಕ್ಷ ಎನ್ ಗಣಪತಿ ಸುಬ್ರಮಣ್ಯಂ ಅವರು ಮಾತನಾಡಿ, "ಸಮಗ್ರ, ವಿಶ್ವಾಸಾರ್ಹ ಮತ್ತು ತಂತ್ರಾಂಶ ನವೀಕರಣಕ್ಕೆ ಅವಕಾಶವಿರುವ ಟೆಲಿಕಾಂ ತಂತ್ರಜ್ಞಾನ ಸ್ಟ್ಯಾಕ್ ಅನ್ನು ಅಭಿವೃದ್ಧಿಪಡಿಸಿದ ಬೆರಳೆಣಿಕೆಯಷ್ಟು ದೇಶಗಳ ನಕ್ಷೆಯಲ್ಲಿ ನಾವು ಭಾರತವನ್ನು ಇರಿಸಿದ್ದೇವೆ ಎಂದು ನಮಗೆ ಹೆಮ್ಮೆ ಇದೆ. ಬಿಎಸ್ಎನ್ಎಲ್‌ನಲ್ಲಿ ಯಶಸ್ವಿ ನಿಯೋಜನೆಯು ಐತಿಹಾಸಿಕ ಮತ್ತು ಪ್ರಬಲ ಡೇಟಾ ಮತ್ತು ಧ್ವನಿ ನೆಟ್‌ವರ್ಕ್‌ನ ಪ್ರಯೋಜನಗಳನ್ನು ದೇಶದ ಮೂಲೆ ಮೂಲೆಗಳಿಗೆ ತಲುಪಿಸುವಲ್ಲಿ ಮಹತ್ವದ್ದಾಗಿದೆ. ಇದು ಮತ್ತೊಮ್ಮೆ ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸುವ ಮತ್ತು ದೇಶದ ಡಿಜಿಟಲ್ ಆಕಾಂಕ್ಷೆಗಳನ್ನು ನಿರಂತರವಾಗಿ ಬೆಂಬಲಿಸುವ ಟಿಸಿಎಸ್‌ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 3ಜಿಪಿಪಿ ಮಾನದಂಡಗಳಿಗೆ ಅನುಸಾರವಾಗಿ ನಿರ್ಮಿಸಲಾದ ಈ ಸ್ಟ್ಯಾಕ್ ಮಾನದಂಡಗಳಿಗೆ ಭಾರತದ ಮತ್ತಷ್ಟು ಕೊಡುಗೆಗೆ ಅಡಿಪಾಯ ಹಾಕುತ್ತದೆ,’’ ಎಂದು ಹೇಳಿದರು.

ಸುಮಾರು ಆರು ದಶಕಗಳಿಂದ, ಭಾರತದ ತಂತ್ರಜ್ಞಾನ ಕ್ರಾಂತಿಗೆ ಚಾಲನೆ ನೀಡುವಲ್ಲಿ, ಹಲವಾರು ರಾಷ್ಟ್ರ ನಿರ್ಮಾಣ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರಚಿಸುವಲ್ಲಿ ಮತ್ತು ಲಕ್ಷಾಂತರ ಜನರನ್ನು ಸ್ಪರ್ಶಿಸುವಲ್ಲಿ ಟಿಸಿಎಸ್ ಪ್ರಮುಖ ಪಾತ್ರ ವಹಿಸಿದೆ. ಹಲವಾರು ಸರ್ಕಾರಿ ಸಂಸ್ಥೆಗಳಿಗೆ ವಿಶ್ವಾಸಾರ್ಹ ಪಾಲುದಾರನಾಗಿ, ಟಿಸಿಎಸ್ ದೊಡ್ಡ ಪ್ರಮಾಣದ ಪರಿವರ್ತನೆ ಕಾರ್ಯಕ್ರಮಗಳನ್ನು ತಲುಪಿಸಿದೆ, ಅದು ನಾಗರಿಕ ಸೇವೆಗಳನ್ನು ಹೆಚ್ಚು ಪ್ರವೇಶಸಾಧ್ಯ, ಪರಿಣಾಮಕಾರಿ ಮತ್ತು ಅಂತರ್ಗತವಾಗಿಸುತ್ತದೆ. ಭಾರತದ ಪ್ರಮುಖ ಸ್ಟಾಕ್ ಎಕ್ಸ್ ಚೇಂಜ್‌ಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಆಧುನೀಕರಿಸುವುದರಿಂದ ಹಿಡಿದು ಪಾಸ್‌ಪೋರ್ಟ್‌ ವಿತರಣೆ, ಆರೋಗ್ಯ ವಿಮೆ ಮತ್ತು