Hotels bandh: ರಾಜಧಾನಿಯಲ್ಲಿ ಬೆಳಗ್ಗೆ ತೆರೆದ ಹೋಟೆಲ್‌ಗಳು, ಮಧ್ಯಾಹ್ನದ ಹೊತ್ತಿಗೆ ಗ್ಯಾಸ್ ಖಾಲಿ!
ವಾಣಿಜ್ಯ ಸಿಲಿಂಡರ್ ಸರಬರಾಜು ಏಕಾಏಕಿ ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೊಟೆಲ್ ಮಾಲೀಕರ ಸಂಘ ನಿನ್ನೆಯೇ ಎಚ್ಚರಿಸಿತ್ತು. ಇಂದು ಬೆಳಗ್ಗಿನಿಂದ ಹೋಟೆಲ್‌ಗಳು ತೆರೆದಿವೆ. ಆದರೆ ಯಾವುದೇ ಕ್ಷಣದಲ್ಲೂ ಗ್ಯಾಸ್ ಖಾಲಿಯಾಗುವ ಭಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಹುತೇಕ ಹೋಟೆಲ್‌ಗಳು ಮಧ್ಯಾಹ್ನದ ಬಳಿಕ ಮುಚ್ಚಲಿವೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಮಾರ್ಚ್ 09: ಗಲ್ಫ್ ರಾಷ್ಟ್ರಗಳ ಯುದ್ಧದ (gulf War) ಬಿಸಿ ಬೆಂಗಳೂರಿಗೆ ತಟ್ಟಿದೆ. ಬೆಲೆ ಏರಿಕೆ ನಡುವೆ ವಾಣಿಜ್ಯ ಗ್ಯಾಸ್ ಸಿಲಿಂಡರ್ (commercial LPG cylinder) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ, ಇಂದಿನಿಂದ ಹೋಟೆಲ್ ಬಂದ್ (Hotels bandh) ಆಗುವ ಆತಂಕ ಎದುರಾಗಿದೆ. ಮಧ್ಯಾಹ್ನದ ವರೆಗೆ ಮಾತ್ರ ಗ್ಯಾಸ್ ಸಿಲಿಂಡರ್ ಸ್ಟಾಕ್ ಇದೆ, ನಂತರ ಮುಚ್ಚುವುದು ಅನಿವಾರ್ಯ ಎಂದು ಹೋಟೆಲ್ ಮಾಲಿಕರು ಸ್ಪಷ್ಟಪಡಿಸಿದ್ದಾರೆ.
ವಾಣಿಜ್ಯ ಸಿಲಿಂಡರ್ ಸರಬರಾಜು ಏಕಾಏಕಿ ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೊಟೆಲ್ ಮಾಲೀಕರ ಸಂಘ ನಿನ್ನೆಯೇ ಎಚ್ಚರಿಸಿತ್ತು. ಇಂದು ಬೆಳಗ್ಗಿನಿಂದ ಹೋಟೆಲ್‌ಗಳು ತೆರೆದಿವೆ. ಆದರೆ ಯಾವುದೇ ಕ್ಷಣದಲ್ಲೂ ಗ್ಯಾಸ್ ಖಾಲಿಯಾಗುವ ಭಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಹುತೇಕ ಹೋಟೆಲ್‌ಗಳು ಮಧ್ಯಾಹ್ನದ ಬಳಿಕ ಮುಚ್ಚಲಿವೆ.
ನಿನ್ನೆ ಹೋಟೆಲ್ ಮಾಲಿಕರು ಬಂದ್ ಘೋಷಿಸಿದ ಪರಿಣಾಮ, ಇಂದು ಬೆಳಗ್ಗಿನಿಂದಲೇ ರಸ್ತೆ ಬದಿಯ ತಳ್ಳು ಗಾಡಿ ಅಂಗಡಿಗಳು, ತಿಂಡಿ ವ್ಯಾನ್‌ಗಳ ಮುಂದೆ ಹೆಚ್ಚಿನ ಜನ ಸೇರಿದ್ದರು. ತಿಂಡಿಗಾಗಿ ಹೋಟೆಲ್‌ಗಳನ್ನು ನೆಚ್ಚಿಕೊಂಡಿದ್ದ ಜನತೆ ತಳ್ಳುಗಾಡಿಗಳ ಮೊರೆ ಹೋಗಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ; ಬೆಂಗಳೂರಿನಲ್ಲಿ ನಾಳೆಯಿಂದ ಹೋಟೆಲ್ ಬಂದ್
ಮುಚ್ಚದೆ ಬೇರೆ ದಾರಿಯೇ ಇಲ್ಲ
ಹೋಟೆಲ್ ಅಸೋಸಿಯೇಷನ್ ನ ಜಂಟಿ ಕಾರ್ಯದರ್ಶಿ ಕೃಷ್ಣರಾಜ್, ಮೊದಲೇ ನಮಗೆ ಮುನ್ಸೂಚನೆ ನೀಡಿದ್ದರೆ ಈ ರೀತಿಯ ಪರಿಸ್ಥಿತಿ ಎದುರಿಸುವ ಪ್ರಮೇಯವೇ ಇರುತ್ತಿರಲಿಲ್ಲ ಎಂದಿದ್ದಾರೆ. ನಾವು ಬಂದ್ ಮಾಡೋದಕ್ಕೆ ನಿರ್ಧಾರ ತೆಗೆದುಕೊಂಡಿಲ್ಲ. ನಮಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಇಂದು ಮಧ್ಯಾಹ್ನಕ್ಕೆ ಆಗುವಷ್ಟು ಸಿಲಿಂಡರ್ ಮಾತ್ರ ನಮ್ಮ ಹತ್ರ ಇದೆ. ಅಷ್ಟರೊಳಗೆ ಸರ್ಕಾರ ಪೂರೈಕೆ ಮಾಡದಿದ್ರೆ ಎಲ್ಲಾ ಹೋಟೆಲ್‌ಗಳು ಬಂದ್ ಮಾಡಲಾಗುತ್ತೆ ಎಂದು ಹೇಳಿದ್ದಾರೆ. 15 ದಿನಗಳ ಮೊದಲೇ ಒಂದು ಸೂಚನೆ ನೀಡಬೇಕಿತ್ತು . ದಿಢೀರ್ ಪೂರೈಕೆ ಸ್ಥಗಿತಗೊಂಡರೆ ನಾವು ಬಂದ್ ಮಾಡದೇ ಬೇರೆ ದಾರಿ ಇಲ್ಲ ಎಂದಿದ್ದಾರೆ.
ಹೊಟೆಲ್ ಮಾಲೀಕರ ಸಂಘ ಯಾವುದೇ ಬಂದ್‌ಗೆ ಕರೆ ಕೊಟ್ಟಿಲ್ಲ. ಆದರೆ ಆಹಾರ, ತಿನಿಸುಗಳು ಇಲ್ಲದಿದ್ದರೆ ಬಂದ್ ಮಾಡಲೇಬೇಕು ಎಂದಿದ್ದಾರೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
Bengaluru Hotels: ಇನ್ಮುಂದೆ ಹೋಟೆಲಲ್ಲಿ ಗಂಟೆಗಟ್ಟಲೆ ಮಾತಾಡ್ತಾ ಕುಳಿತಿರುವಂತಿಲ್ಲ! ಅದಕ್ಕೂ ಟೇಬಲ್ ಚಾರ್ಜ್!