ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

3 ವರ್ಷಗಳಲ್ಲಿ ತಮ್ಮ ಸಾಧನೆ ಇಂಥದ್ದೆಂದು ಕಾಂಗ್ರೆಸ್ ಮುಖಂಡರು ಹೇಳಲಿ: ಸಿ.ಟಿ. ರವಿ ಸವಾಲು

CT Ravi: ಕರ್ನಾಟಕ ರಾಜ್ಯದ ಸಮಗ್ರ ಸಾಲ 10 ಲಕ್ಷ ಕೋಟಿ ರೂಪಾಯಿ. ಸಾಲ ಮಾಡದೇ ಗ್ಯಾರಂಟಿ ಯೋಜನೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಸಾಧನೆ ಯಾವುದು? ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ ಎಂದು ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

3 ವರ್ಷಗಳಲ್ಲಿ ತಮ್ಮ ಸಾಧನೆ ಇಂಥದ್ದೆಂದು ಕಾಂಗ್ರೆಸ್ ಮುಖಂಡರು ಹೇಳಲಿ

ಎಂಎಲ್‌ಸಿ ಸಿ.ಟಿ. ರವಿ (ಸಂಗ್ರಹ ಚಿತ್ರ) -

Profile
Siddalinga Swamy May 19, 2026 9:25 PM

ಬೆಂಗಳೂರು, ಮೇ 19: ಮೂರು ವರ್ಷಗಳಲ್ಲಿ ತಮ್ಮ ಸಾಧನೆ ಇಂಥದ್ದೆಂದು ಕಾಂಗ್ರೆಸ್ ಮುಖಂಡರು ಹೇಳಲಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ಸವಾಲು ಹಾಕಿದ್ದಾರೆ. ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಹಗರಣಗಳೇ ನಿಮ್ಮ ಸಾಧನೆಯೇ? ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಲೂಟಿ ಹೊಡೆದು ನಿಮ್ಮ ಒಬ್ಬ ಸಚಿವ ಜೈಲಿಗೆ ಹೋದ ಎಂಬುದು ಸಾಧನೆಯೇ? ಎಸ್.ಇ.ಪಿ., ಟಿಎಸ್‍ಪಿ ಹಣ ದುರುಪಯೋಗ ಸಾಧನೆಯೇ ಎಂದು ಪ್ರಶ್ನಿಸಿದರು.

ಸಾಧನೆಯ ಕಾರಣಕ್ಕಾಗಿ ಕೆಎಸ್‍ಆರ್‌ಟಿಸಿ ನೌಕರರು ಚಳವಳಿಗೆ ಕರೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ ಅವರು, 3 ಗಂಟೆಯೂ ರೈತರ ಪಂಪ್‍ಸೆಟ್‍ಗಳಿಗೆ 3 ಫೇಸ್ ಕರೆಂಟ್ ಕೊಡುತ್ತಿಲ್ಲ. ಇದು ಸಾಧನೆಯೇ? 3 ವರ್ಷದಲ್ಲಿ ಕರ್ನಾಟಕದ ಜನರು ಹೆಮ್ಮೆ ಪಡುವಂತೆ, ತಲೆಯೆತ್ತಿ ನಿಲ್ಲುವಂತೆ, ಇಡೀ ದೇಶದಲ್ಲಿ ಹೇಳಿಕೊಂಡು ಓಡಾಡುವಂತೆ ಯಾವ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಶೇ.60 ಕಮಿಷನ್- ಅದು ಸಾಧನೆಯೇ? ಸರ್ಕಾರಿ ನೌಕರರ ಆತ್ಮಹತ್ಯೆ- ಅದು ಸಾಧನೆಯೇ? ಎಂದ ಅವರು, ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಎಷ್ಟು ದಿನ ಕುಳಿತಿರುತ್ತಾರೋ ಎಂಬ ಗ್ಯಾರಂಟಿ ಸಿದ್ದರಾಮಯ್ಯ ಅವರಿಗೇ ಇಲ್ಲ ಎಂದು ವ್ಯಂಗ್ಯವಾಡಿದರು. ಅವರ ಕುರ್ಚಿ ಬಗ್ಗೆ ಗ್ಯಾರಂಟಿ ಇಲ್ಲದ ಅವರು, ಇನ್ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ ಎಂದು ಕೇಳಿದರು.

ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ?

ಕರ್ನಾಟಕ ರಾಜ್ಯದ ಸಮಗ್ರ ಸಾಲ 10 ಲಕ್ಷ ಕೋಟಿ ರೂಪಾಯಿ. ಸಾಲ ಮಾಡದೇ ಗ್ಯಾರಂಟಿ ಯೋಜನೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಸಾಧನೆ ಯಾವುದು? ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ ಎಂದು ಕೇಳಿದರು.‌

ತುಮಕೂರಿನ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?: ಸಿಎಂಗೆ ವಿಜಯೇಂದ್ರ ಪ್ರಶ್ನೆ

ಪೆಟ್ರೋಲ್- ಡೀಸೆಲ್ ಮೇಲೆ ಕರ್ನಾಟಕ ಸರ್ಕಾರ ಹಾಕಿದ ಸೆಸ್ ಜಾಸ್ತಿಯೇ ಅಥವಾ ಕೇಂದ್ರ ಸರ್ಕಾರ ಹಾಕಿದ ಸೆಸ್ ಹೆಚ್ಚೇ? ಕರ್ನಾಟಕ ಸರ್ಕಾರ ಪೆಟ್ರೋಲ್- ಡೀಸೆಲ್ ಮೇಲೆ ಮೂರು ಬಾರಿ ಸೆಸ್ ಹಾಕಿದೆ ಎಂದು ಟೀಕಿಸಿದ ಅವರು, ಕೇಂದ್ರ ಸರ್ಕಾರ ಬೆಲೆ ಇಳಿಸಿದ ಮೇಲೂ ಸೆಸ್ ಹಾಕಿದ್ದು ಯಾಕೆ? ಸೆಸ್ ಇಳಿಸಿ; ನಿಮ್ಮ ತೆರಿಗೆ ಹೆಚ್ಚೇ ಕೇಂದ್ರ ಸರ್ಕಾರದ್ದು ಹೆಚ್ಚು ತೆರಿಗೆಯೇ ಎಂಬ ಚರ್ಚೆ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಒತ್ತಾಯಿಸಿದರು.