ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಫಾಸ್ಟ್‌ಟ್ರ್ಯಾಕ್‌ ಹೊಸ ಕೈಗಡಿಯಾರಗಳ ಸಂಗ್ರಹ ʼಅನ್‌ಐಡೆಂಟಿಫೈಡ್‌ ಫ್ಯಾಷನ್‌ ಆಬ್ಜೆಕ್ಟ್‌ʼ ನ ಅಧಿಕೃತ ಅನಾವರಣ

ಗಗನಯಾನಿಗಳು, ವಿಜ್ಞಾನ ಆಧಾರಿತ ಕಾಲ್ಪನಿಕ ಕಥೆಗಳು, ಬಾಹ್ಯಾಕಾಶದ ನಿಗೂಢ ಕಥೆಗಳು ಸೇರಿದಂತೆ ಒಟ್ಟು ಬ್ರಹ್ಮಾಂಡದಿಂದ ಸ್ಫೂರ್ತಿ ಪಡೆದು ವಿನ್ಯಾಸಗೊಂಡಿರುವ ಈ ಕೈಗಡಿಯಾರಗಳ ಸಂಗ್ರಹವು ಮುಂದಿನ ಕಾಲಕ್ಕೂ ಸರಿಹೊಂದುವ, ಬಹಳ ಫ್ಯಾಷನೆಬಲ್‌ ಆಗಿರುವ ಹಾಗೂ ನಿರ್ಲಕ್ಷ್ಯ ಮಾಡಲು ಸಾಧ್ಯವೇ ಇಲ್ಲದಂತೆ ಇದೆ.

ಹೊಸ ಕೈಗಡಿಯಾರ ʼಅನ್‌ಐಡೆಂಟಿಫೈಡ್‌ ಫ್ಯಾಷನ್‌ ಆಬ್ಜೆಕ್ಟ್‌ʼ ನ ಅನಾವರಣ

-

Ashok Nayak Ashok Nayak Sep 29, 2025 6:00 PM

ಬೆಂಗಳೂರು: ಮೊದಲು ಒಂದು ಸಂದೇಶ ರವಾನೆ ಆಯಿತು. ನಂತರ ಅದು ಕಾಣಿಸಿಕೊಂಡಿತು. ಈಗ ಅದು ಭೂಮಿಯ ಮೇಲೆ ಇಳಿದಿದೆ. ಹೌದು, ಆಗಸದಲ್ಲಿ ಹಾರುವ ತಟ್ಟೆಗಳು ಅಥವಾ ʼಅನ್‌ಐಡೆಂಟಿಫೈಡ್‌ ಫ್ಯಾಷನ್‌ ಆಬ್ಜೆಕ್ಟ್‌ (ಯುಎಫ್‌ಒ) ಕಾಣಿಸಿಕೊಂಡಿದ್ದರ ಬಗ್ಗೆ ನೀವು ಕೇಳಿದ್ದೀರಿ. ಆದರೆ ಈ ಯುಎಫ್‌ಒ ಮಾತ್ರ ಕೈಯ ಮೇಲೆ ಬಂದಿಳಿದಿದೆ. ಫಾಸ್ಟ್‌ಟ್ರ್ಯಾಕ್‌ ಈಗ ತನ್ನ ಹೊಸ ಕೈಗಡಿಯಾರಗಳ ಸಂಗ್ರಹ ʼಅನ್‌ಐಡೆಂಟಿಫೈಡ್‌ ಫ್ಯಾಷನ್‌ ಆಬ್ಜೆಕ್ಟ್‌ʼ ಅನ್ನು ಅಧಿಕೃತವಾಗಿ ಅನಾವರಣ ಮಾಡಿದೆ. ಇವು ಬೇರೆಯದೇ ಆಯಾಮದಲ್ಲಿ ರೂಪುಗೊಂಡಿರುವಂತೆ ಕಾಣುತ್ತವೆ.

ಗಗನಯಾನಿಗಳು, ವಿಜ್ಞಾನ ಆಧಾರಿತ ಕಾಲ್ಪನಿಕ ಕಥೆಗಳು, ಬಾಹ್ಯಾಕಾಶದ ನಿಗೂಢ ಕಥೆಗಳು ಸೇರಿದಂತೆ ಒಟ್ಟು ಬ್ರಹ್ಮಾಂಡದಿಂದ ಸ್ಫೂರ್ತಿ ಪಡೆದು ವಿನ್ಯಾಸಗೊಂಡಿರುವ ಈ ಕೈಗಡಿಯಾರಗಳ ಸಂಗ್ರಹವು ಮುಂದಿನ ಕಾಲಕ್ಕೂ ಸರಿಹೊಂದುವ, ಬಹಳ ಫ್ಯಾಷನೆಬಲ್‌ ಆಗಿರುವ ಹಾಗೂ ನಿರ್ಲಕ್ಷ್ಯ ಮಾಡಲು ಸಾಧ್ಯವೇ ಇಲ್ಲದಂತೆ ಇದೆ.

ಈ ಸಂಗ್ರಹದ ಅನಾವರಣ ಅಭಿಯಾನಕ್ಕೆ ಯುಎಫ್‌ಒ – ಅನ್‌ಐಡೆಂಟಿಫೈಡ್‌ ಫ್ಯಾಷನ್‌ ಆಬ್ಜೆಕ್ಟ್‌ - ಎಂಬ ಹೆಸರನ್ನು ಬಹಳ ಸೂಕ್ತವಾಗಿ ಇರಿಸಲಾಗಿದೆ. ಫಾಸ್ಟ್‌ಟ್ರ್ಯಾಕ್‌ನ ಮೂಲ ಶೈಲಿಯಲ್ಲಿ ಇವು ಕ್ರೀಡೆ, ಪ್ರಯೋಗಶೀಲತೆಯನ್ನು ಇಷ್ಟಪಡುವವರಿಗೆ ಆಪ್ತವಾಗುತ್ತವೆ. ಹಾಗೆಯೇ, ಹೊಸತನದ ಜಗತ್ತಿಗೆ ಇವು ನೇರವಾಗಿ ಧುಮುಕುತ್ತವೆ. ಯುಎಫ್‌ಒ ಶ್ರೇಣಿಯ ಪ್ರತಿ ಕೈಗಡಿಯಾರ ಕೂಡ ಗಗನ ಯಾನಿಯ ಶಿರಸ್ತ್ರಾಣವನ್ನು ಹೋಲುವ ಆಕಾರದ ಪೆಟ್ಟಿಗೆಯಲ್ಲಿ ಬರುತ್ತದೆ. ಇವು ಕೇವಲ ಕೈಗಡಿ ಯಾರಗಳಲ್ಲ, ವಿನ್ಯಾಸದಲ್ಲಿ ಇವು ಸ್ಥಾಪಿತ ನಿಯಮಗಳನ್ನು ಮುರಿಯುವಂಥವು, ಇವು ಫಾಸ್ಟ್‌ ಟ್ರ್ಯಾಕ್‌ನ ಮೂಲ ಆಶಯಕ್ಕೆ ತುಸುವೂ ಚ್ಯುತಿ ಬಾರದಂತೆ ವಿನ್ಯಾಸಗೊಂಡಿರುವ ಸಂಪೂರ್ಣ ಭಿನ್ನವಾದ ಕೈಗಡಿಯಾರಗಳು.

ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್‌ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ

ಈ ಶ್ರೇಣಿಯ ಕೈಗಡಿಯಾರಗಳ ಅನಾವರಣವನ್ನು ಭಿನ್ನವಾಗಿ ನಡೆಸಿದ ಫಾಸ್ಟ್‌ಟ್ರ್ಯಾಕ್‌, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಪರಿಣಾಮ ಉಂಟುಮಾಡುವ ಜಾಹೀರಾತು ಫಲಕಗಳನ್ನು ಏಳು ನಗರಗಳಲ್ಲಿ ಅಳವಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಗಾತ್ರದ ಯುಎಫ್‌ಒ ಜಾಹೀರಾತು ಫಲಕಗಳನ್ನು, 3ಡಿ ರಚನೆಗಳನ್ನು ಇರಿಸಲಾಗಿದೆ, ಅವುಗಳಲ್ಲಿ ಬೆಳಕಿನ ವ್ಯವಸ್ಥೆ ಯನ್ನೂ ಮಾಡಲಾಗಿದೆ.

ಇದರ ಪರಿಣಾಮವಾಗಿ, ಜನರು ಈ ಶ್ರೇಣಿಯತ್ತ ಗಮನ ಹರಿಸಿದ್ದಾರೆ. ಸಿದ್ಧ ನಿಯಮಗಳ ಆಚೆಗೂ ಗಮನ ಹರಿಸುವ ಫ್ಯಾಷನ್‌ ವಿನ್ಯಾಸಕಾರರ ಜೊತೆ ಒಪ್ಪಂದ ಮಾಡಿಕೊಂಡಿರುವ ಫಾಸ್ಟ್‌ಟ್ರ್ಯಾಕ್‌, ಬಹಳ ಅಪರೂಪದ ವಿನ್ಯಾಸಗಳನ್ನು ಅವರು ನೀಡುವಂತೆ ಮಾಡಿದೆ. ಹೀಗಾಗಿ ಇವು ಕೈಗಡಿಯಾರ ಆಗಷ್ಟೇ ಉಳಿದಿಲ್ಲ, ಇವು ಫ್ಯಾಷನ್‌ ಪ್ರಯೋಗಗಳಾಗಿ ಮೂಡಿಬಂದಿವೆ.

ಫಾಸ್ಟ್‌ಟ್ರ್ಯಾಕ್‌ ವಾಚಸ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಡ್ಯಾನ್ನಿ ಜೇಕಬ್‌ ಅವರು “ಯುಎಫ್‌ಒ ಸಂಗ್ರಹದ ಮೂಲಕ ನಾವು ಬ್ರಹ್ಮಾಂಡದಲ್ಲಿ ಹುದುಗಿರುವ ರೋಚಕತೆಯನ್ನು ಮನೆ ಮನೆಗೆ ತಲುಪಿಸುವ ಬಯಕೆ ಹೊಂದಿದ್ದೆವು. ಪ್ರತಿ ಕೈಗಡಿಯಾರ ಕೂಡ ಗಗನಯಾನಿಗಳಿಂದ ಸ್ಫೂರ್ತಿ ಪಡೆದ ವಿನ್ಯಾಸವನ್ನು, ಅಂಶವನ್ನು ಹೊಂದಿದೆ. ಹೀಗಾಗಿ ಯುವಕರಿಗೆ ತಮ್ಮನ್ನು ಅಭಿವ್ಯಕ್ತಿಪಡಿಸಿಕೊಳ್ಳಲು ಬಹಳ ಭಿನ್ನವಾದ ಮತ್ತು ದಿಟ್ಟವಾದ ಮಾರ್ಗವನ್ನು ಇವು ನೀಡುತ್ತವೆ. ಶೈಲಿಯನ್ನು ಇನ್ನೊಂದು ಆಯಾಮಕ್ಕೆ ಕೊಂಡೊಯ್ಯುವ ಕೆಲಸವನ್ನು ಫಾಸ್ಟ್‌ಟ್ರ್ಯಾಕ್‌ ಈ ಮೂಲಕ ಮಾಡಿದೆ” ಎಂದು ಹೇಳಿದ್ದಾರೆ.

ಈ ಶ್ರೇಣಿಯ ಕೈಗಡಿಯಾರಗಳ ಬೆಲೆಯು ರೂ 5,995 ರಿಂದ ರೂ 6,895 ರವರೆಗೆ ಇದೆ. ಫಾಸ್ಟ್‌ ಟ್ರ್ಯಾಕ್‌ ಮಳಿಗೆಗಳು, ಟೈಟನ್‌ ವರ್ಲ್ಡ್‌ ಮಳಿಗೆಗಳು ಹಾಗೂ ರಾಷ್ಟ್ರದಾದ್ಯಂತ ಇರುವ ಅಧಿಕೃತ ಮಾರಾಟಗಾರರಲ್ಲಿ ಈ ಶ್ರೇಣಿಯ ಸಂಗ್ರಹವು ಲಭ್ಯವಿದೆ. www.fastrack.in ವೆಬ್‌ಸೈಟ್‌ ಮೂಲಕವೂ ಇವುಗಳನ್ನು ಖರೀದಿಸಬಹುದು.