Garbage Collection: ಗುಡ್ ನ್ಯೂಸ್; ಇನ್ನುಮುಂದೆ ಬೆಂಗಳೂರಿನಲ್ಲಿ ರಾತ್ರಿಯೂ ಬರಲಿವೆ ಕಸ ಸಂಗ್ರಹ ವಾಹನಗಳು
ಬೆಂಗಳೂರಿನ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಆಡುಗೋಡಿ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ರಾತ್ರಿ ವೇಳೆಯಲ್ಲಿಯೂ ಕಸ ಸಂಗ್ರಹಣಾ ಆಟೋಗಳು ಕಾರ್ಯನಿರ್ವಹಿಸಿ ಮನೆಮನೆಗೆ ಕಸ ಸಂಗ್ರಹಿಸುವ ಕಾರ್ಯ ನಡೆಸಿವೆ. ಈ ಪ್ರಯೋಗ ಯಶಸ್ವಿಯಾದರೇ ಮುಂದೆ ನಗರದಾದ್ಯಂತ ಜಾರಿಗೆ ತರಲು ಜಿಬಿಎ ಚಿಂತನೆ ನಡೆಸಿದೆ.
ಬೆಂಗಳೂರಿನ ಆಡುಗೋಡಿಯಲ್ಲಿ ರಾತ್ರಿ ವೇಳೆ ಕಸ ಸಂಗ್ರಹಣೆ. -
ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಹಾಕುವ ಸಮಸ್ಯೆಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇನ್ನುಮುಂದೆ ರಾತ್ರಿ ಸಮಯದಲ್ಲೂ ಕಸ ಸಂಗ್ರಹಿಸಲು (Garbage Collection) ಜಿಬಿಎ ನಿರ್ಧರಿಸಿದೆ.
ಕೆಲಸಕ್ಕೆ ಹೋಗುವವರು ಮುಂಜಾನೆ ವೇಳೆ ಕಸದ ಗಾಡಿಗೆ ಕಸ ಹಾಕಲು ಆಗದೆ, ರಸ್ತೆ ಬದಿ ಎಸೆದು ಹೋಗುತ್ತಾರೆ. ಇದನ್ನು ತಡೆಗಟ್ಟುವ ದೃಷ್ಟಿಯಿಂದ ರಾತ್ರಿ ಟಿಪ್ಪರ್ ಲಾರಿಗಳ ಮೂಲಕ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಮೊದಲಿಗೆ ದಕ್ಷಿಣ ನಗರ ಪಾಲಿಕೆಯಿಂದ ಪ್ರಾಯೋಗಿಕವಾಗಿ ಸಂಗ್ರಹಿಸಲಾಗಿದ್ದು, ಇದು ಯಶಸ್ವಿಯಾದರೇ ಮುಂದೆ ನಗರದಾದ್ಯಂತ ಜಾರಿಗೆ ತರಲು ಜಿಬಿಎ ಚಿಂತನೆ ನಡೆಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಸೂಚನೆಯಂತೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಆಡುಗೋಡಿ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿಯೂ ಕಸ ಸಂಗ್ರಹಣಾ ಆಟೋಗಳು ಕಾರ್ಯನಿರ್ವಹಿಸಿ ಮನೆಮನೆಗೆ ಕಸ ಸಂಗ್ರಹಿಸುವ ಕಾರ್ಯ ನಡೆಸಿವೆ. ಈ ಕ್ರಮದ ಮೂಲಕ ಸ್ವಚ್ಛತೆ ಕಾಪಾಡುವುದು ಹಾಗೂ ಸಾರ್ವಜನಿಕರಿಗೆ ಉತ್ತಮ ಸ್ವಚ್ಛತಾ ಸೇವೆ ಒದಗಿಸುವುದನ್ನು ಪಾಲಿಕೆ ಖಚಿತಪಡಿಸಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
🚮 Night-Time Garbage Collection in Adugodi
— Greater Bengaluru Authority (@GBA_office) March 8, 2026
As per the directions of the Chief Commissioner of the Greater Bengaluru Authority, garbage collection autos operated even during night hours in Adugodi under the Bengaluru South City Corporation.
This initiative ensures timely waste… pic.twitter.com/Eq7SETTpcV
ಜಿಬಿಎ 5 ಪಾಲಿಕೆಗಳ ಚುನಾವಣೆ: ವಾರ್ಡ್‌ವಾರು ಅಂತಿಮ ಮೀಸಲಾತಿ ಪ್ರಕಟ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ನಗರಾಭಿವೃದ್ಧಿ ಇಲಾಖೆಯು ಐದು ನಗರ ಪಾಲಿಕೆಗಳ (Greater Bengaluru elections) ವ್ಯಾಪ್ತಿಯ ವಾರ್ಡ್‌ಗಳ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಒಟ್ಟು 369 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಇದರಲ್ಲಿ ಮಹಿಳೆಯರಿಗೆ ಬರೋಬ್ಬರಿ 176 ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಮೀಸಲಾತಿ ವಿವರ
ಬೆಂಗಳೂರು ಕೇಂದ್ರ ನಗರ ಪಾಲಿಕೆ
ಒಟ್ಟು ವಾರ್ಡ್‌ಗಳ ಸಂಖ್ಯೆ – 63
ಎಸ್‌ಸಿ – 11 (5 ಮಹಿಳೆ)
ಎಸ್‌ಟಿ – 1
ಹಿಂದುಳಿದ ವರ್ಗ(ಎ) – 15 (ಮಹಿಳೆ 7)
ಹಿಂದುಳಿದ ವರ್ಗ(ಬಿ) – 4 (ಮಹಿಳೆ 2)
ಸಾಮಾನ್ಯ – 32 (ಮಹಿಳೆ 16)
ಮಹಿಳೆಯರಿಗೆ ಒಟ್ಟು 30 ವಾರ್ಡ್ಗಳು ಮೀಸಲು
ಬೆಂಗಳೂರು ಪೂರ್ವ ನಗರ ಪಾಲಿಕೆ
ಒಟ್ಟು ವಾರ್ಡ್ ಗಳ ಸಂಖ್ಯೆ – 50
ಎಸ್‌ಸಿ – 7 (ಮಹಿಳೆ 3)
ಎಸ್‌ಟಿ – 1
ಹಿಂದುಳಿದ ವರ್ಗ (ಎ) – 14 (ಮಹಿಳೆ 7)
ಹಿಂದುಳಿದ ವರ್ಗ (ಬಿ) – 3 (ಮಹಿಳೆ 1)
ಸಾಮಾನ್ಯ – 25 (ಮಹಿಳೆ 12)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್ಗಳು – 23
ಬೆಂಗಳೂರು ಪಶ್ಚಿಮ ನಗರ ಪಾಲಿಕೆ
ಒಟ್ಟು ವಾರ್ಡ್ ಗಳ ಸಂಖ್ಯೆ – 112
ಎಸ್‌ಸಿ – 9 (ಮಹಿಳೆ 4)
ಎಸ್‌ಟಿ – 2 (ಮಹಿಳೆ 1)
ಹಿಂದುಳಿದ ವರ್ಗ (ಎ) – 30 (ಮಹಿಳೆ 15)
ಹಿಂದುಳಿದ ವರ್ಗ (ಬಿ) – 7 (ಮಹಿಳೆ 3)
ಸಾಮಾನ್ಯ – 64 (ಮಹಿಳೆ 32)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್ಗಳು – 55
ಬೆಂಗಳೂರು ಉತ್ತರ ನಗರ ಪಾಲಿಕೆ
ಒಟ್ಟು ವಾರ್ಡ್ ಗಳ ಸಂಖ್ಯೆ – 72
ಎಸ್‌ಸಿ – 9 (ಮಹಿಳೆ 4)
ಎಸ್‌ಟಿ – 2 (ಮಹಿಳೆ 1)
ಹಿಂದುಳಿದ ವರ್ಗ (ಎ) – 19(ಮಹಿಳೆ 9)
ಹಿಂದುಳಿದ ವರ್ಗ (ಬಿ) – 5(ಮಹಿಳೆ 2)
ಸಾಮಾನ್ಯ – 37 (ಮಹಿಳೆ 18)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್ಗಳು – 34
ಬೆಂಗಳೂರು ದಕ್ಷಿಣ ನಗರ ಪಾಲಿಕೆ
ಒಟ್ಟು ವಾರ್ಡ್ ಗಳ ಸಂಖ್ಯೆ – 72
SC – 7 (ಮಹಿಳೆ 3)
ST – 1
ಹಿಂದುಳಿದ ವರ್ಗ (ಎ) – 19 ( =ಮಹಿಳೆ 9)
ಹಿಂದುಳಿದ ವರ್ಗ (ಬಿ) – 5 (ಮಹಿಳೆ 2)
ಸಾಮಾನ್ಯ – 40 (ಮಹಿಳೆ 20)
ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್ಗಳು- 34
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ ವಾರ್ಡುಗಳ ಕರಡು ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಸ್ವೀಕೃತವಾದ ಎಲ್ಲಾ ಸಲಹೆ/ ಆಕ್ಷೇಪಣೆಗಳನ್ನು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಲಾಗಿತ್ತು. ಇವುಗಳನ್ನು ಸಮಿತಿ ಕೂಲಂಕಷವಾಗಿ ಪರಿಶೀಲಿಸಿ, ಕೆಲ ಬದಲಾವಣೆಗಳನ್ನು ಮಾಡಿ ಅಂತಿಮ ಮೀಸಲಾತಿಯನ್ನು ಸಿದ್ಧಪಡಿಸಿತ್ತು. ಹೀಗೆ ಸಿದ್ದಪಡಿಸಲಾದ ಮೀಸಲಾತಿ ಪಟ್ಟಿಯು ಮಾರ್ಗಸೂಚಿಯ ಅನುಸಾರ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳಾ ಮೀಸಲಾತಿ ಹಾಗೂ ಸಾಮಾನ್ಯ (ಮೀಸಲೇತರ) ಸ್ಥಾನಗಳ ಪ್ರಮಾಣವನ್ನು ಕಾಯ್ದುಕೊಂಡಿರುವುದನ್ನು ಖಚಿತಪಡಿಸಿಕೊಂಡು ಸಮಿತಿಯು ಅಂತಿಮ ಮೀಸಲಾತಿ ಪಟ್ಟಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ನೇಪಾಳ ಚುನಾವಣೆ: ಭರ್ಜರಿ ಗೆಲುವಿನತ್ತ RPS, ಮಾಜಿ ಪ್ರಧಾನಿಗೆ ಭಾರೀ ಮುಖಭಂಗ
ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು ಒಪ್ಪಿದ್ದು, ದಿನಾಂಕ:19-12-2025 ರಲ್ಲಿನ ಮಾರ್ಗಸೂಚಿಗಳನ್ವಯ, 2011ರ ಜನಗಣತಿಯ ಆಧಾರದ ಮೇರೆಗೆ ಒಟ್ಟು 369 ವಾರ್ಡ್‌ಗಳ ಮೀಸಲಾತಿಯನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.