ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishnuvardhan Samadhi: ವಿಷ್ಣುವರ್ಧನ್‌ ಸಮಾಧಿ ನೆಲಸಮಕ್ಕೆ ನನ್ನ ತಮ್ಮನ ಮಗನೇ ಕಾರಣ: ಗೀತಾ ಬಾಲಕೃಷ್ಣ

Geetha Balakrishna: ನನ್ನ ಇಬ್ಬರು ತಮ್ಮಂದಿರು ಈಗ ಇಲ್ಲ. ಕೊನೆಯ ತಮ್ಮನ ಮಗ ಕಾರ್ತಿಕ್​ನಿಂದಲೇ ಇದೆಲ್ಲ ಆಗುತ್ತಿದೆ. ಹೈಕೋರ್ಟ್ ಆದೇಶದ ಅನ್ವಯ ನೆಲಸಮ ಮಾಡಿದ್ದಾರೆ ಎಂದು ಗೊತ್ತಾಯ್ತು. ಆದರೆ ವಿಷ್ಣುವರ್ಧನ್ ಅವರ ಸಮಾಧಿಯನ್ನು ಯಾರಿಗೂ ತಿಳಿಸದೆ ಹೀಗೆ ಮಾಡಬಾರದಿತ್ತು ಎಂದು ನಟ ಬಾಲಣ್ಣ ಅವರ ಪುತ್ರಿ ಗೀತಾ ಬಾಲಕೃಷ್ಣ ತಿಳಿಸಿದ್ದಾರೆ.

ವಿಷ್ಣುವರ್ಧನ್‌ ಸಮಾಧಿ ನೆಲಸಮಕ್ಕೆ ನನ್ನ ತಮ್ಮನ ಮಗನೇ ಕಾರಣ

Prabhakara R Prabhakara R Aug 9, 2025 7:42 PM

ಬೆಂಗಳೂರು: ಅಭಿಮಾನ್ ಸ್ಟುಡಿಯೋನಲ್ಲಿದ್ದ ಖ್ಯಾತ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು (Vishnuvardhan Samadhi) ನೆಲಸಮ ಮಾಡಿರುವುದಕ್ಕೆ ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಈ ಘಟನೆ ಬಗ್ಗೆ ನಟ ಬಾಲಣ್ಣ ಅವರ ಪುತ್ರಿ ಗೀತಾ ಬಾಲಕೃಷ್ಣ ಅವರು ಮಾತನಾಡಿದ್ದು, ಇದಕ್ಕೆಲ್ಲ ನನ್ನ ಕೊನೆಯ ತಮ್ಮನ ಮಗ ಕಾರ್ತಿಕ್ ಕಾರಣ ಎಂದು ಆರೋಪಿಸಿದ್ದಾರೆ.

ಹೈಕೋರ್ಟ್ ಆದೇಶದ ಅನ್ವಯ ನೆಲಸಮ ಮಾಡಿದ್ದಾರೆ ಎಂದು ಗೊತ್ತಾಯ್ತು. ಆದರೆ ವಿಷ್ಣುವರ್ಧನ್ ಅವರ ಸಮಾಧಿಯನ್ನು ಯಾರಿಗೂ ತಿಳಿಸದೆ ಹೀಗೆ ಮಾಡಬಾರದಿತ್ತು. ನಾನು ಆ ಜಾಗಕ್ಕೆ ಸಂಬಂಧಿಸಿದಂತೆ 2004 ರಲ್ಲಿಯೇ ಕೇಸ್‌ ದಾಖಲಿಸಿದ್ದೆ. 2010ರಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ವಿವಾದ ಬಂತು. ವಿಷ್ಣು ಅವರ ಟ್ರಸ್ಟ್‌ಗೆ 2 ಎಕರೆ ಕೊಡುತ್ತೇನೆ ಎಂದು ಆಗಲೇ ಹೇಳಿದ್ದೆ. ಆದರೆ, ನನಗೂ ಗೊತ್ತಿಲ್ಲದೆ ಹಲವು ವಿಚಾರಗಳು ಆ ಜಾಗದಲ್ಲಿ ನಡೆಯುತ್ತಿವೆ, ಇದರಲ್ಲಿ ನನ್ನ ಪಾತ್ರ ಏನೂ ಇಲ್ಲಾ ಎಂದು ಹೇಳಿದ್ದಾರೆ.

‘ನನ್ನ ಇಬ್ಬರು ತಮ್ಮಂದಿರು ಈಗ ಇಲ್ಲ. ಕೊನೆಯ ತಮ್ಮನ ಮಗ ಕಾರ್ತಿಕ್​ನಿಂದಲೇ ಇದೆಲ್ಲ ಆಗುತ್ತಿದೆ. ನಮ್ಮ ತಂದೆ-ತಾಯಿ ನಿಧನರಾದ ಬಳಿಕ ನಮ್ಮ ನಡುವೆ ಒಡನಾಟ ಇರಲಿಲ್ಲ. ಇದೆಲ್ಲ ನನ್ನ ಗಮನಕ್ಕೆ ಬಂದಿರಲಿಲ್ಲ. ನನ್ನ ಜೀವಕ್ಕೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ನಾನು ದೂರು ಕೊಟ್ಟಿದ್ದೆ. ಕಾರ್ತಿಕ್‌ಗೆ ರಾಜಕಾರಣಿಗಳ ಪರಿಚಯ ಚೆನ್ನಾಗಿದೆ. ನನಗೆ ಎಲ್ಲದರ ಮಾಹಿತಿ ಇದೆ. ಆದರೆ ನನ್ನ ಜೀವಕ್ಕೂ ಅಪಾಯ ಇದೆ. ದೊಡ್ಡದಾಗಿ ಬ್ಯುಸಿನೆಸ್ ಮಾಡೋಕೆ ಹೀಗೆ ಮಾಡಿದ್ದಾರೆ ಎಂದಿದ್ದಾರೆ.

ನನ್ನ ಕುಟುಂಬದವರಿಗೂ ನನಗೂ ಸಂಪರ್ಕ ಇಲ್ಲ. ಈಗ ಏನೇ ಮಾಡಿದರೂ ಕಾನೂನು ಮುಖಾಂತರ ಮಾಡಬೇಕು. ಆ ಸ್ಥಳದಲ್ಲಿ ನಾಲ್ಕು ಜನಕ್ಕೆ ಹಕ್ಕಿದೆ. ಆದರೆ ಅಲ್ಲಿ ಮೋಸ ನಡೆದಿದೆ. ಸಾಕ್ಷಿ ಸಮೇತ ಕೋರ್ಟ್‌ಗೆ ಹೋಗುವೆ. ವಿಷ್ಣುವರ್ಧನ್ ನಮ್ಮ ತಂದೆಗೆ ಮಗನ ರೀತಿ ಇದ್ದರು. ಅವರನ್ನು ಈ ತರ ನೆಲಮಟ್ಟ ಮಾಡಿರುವುದು ಸರಿ ಅಲ್ಲ. ಕೋಟಿಗಟ್ಟಲೆ ಲಾಭ ಸಿಗುತ್ತದೆ, ಅದಕ್ಕೆ ಮಾಲ್ ಕಟ್ಟೋದಕ್ಕೆ ಯೋಜನೆ ಮಾಡಿದ್ದಾರೆ ಎಂದು ಗೀತಾ ಬಾಲಕೃಷ್ಣ ಆರೋಪಿಸಿದ್ದಾರೆ.

ನನಗಂತೂ ಆ ಜಾಗ ಕೊಡುವ ಮನಸಿದೆ. ಆದರೆ ಕೋರ್ಟ್‌ ಮುಖಾಂತರ ನಾನು ಈ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Actress Shruthi: ವಿಷ್ಣುವರ್ಧನ್ ಸಮಾಧಿಗೆ ನನ್ನ ಜಾಗವನ್ನೇ ಕೊಡುತ್ತಿದ್ದೆ: ನಟಿ ಶ್ರುತಿ