ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Raghavendra: ಮೇಘನಾ ಜೊತೆ ಎರಡನೇ ಮದುವೆ; ಈ ಬಗ್ಗೆ ವಿಜಯ್ ರಾಘವೇಂದ್ರ ಏನಂದ್ರು?

ವಿಜಯ ರಾಘವೇಂದ್ರ ಹಾಗೂ ಮೇಘನಾ ರಾಜ್ ಇಬ್ಬರಿಗೂ ಎರಡನೇ ಮದುವೆ ಅನ್ನುವ ಗಾಸಿಪ್ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಲವು ದಿನಗಳಿಂದ ಹರಡುತ್ತಲೆ ಇತ್ತು. ಆದರೆ, ಈ ಬಗ್ಗೆ ವಿಜಯ ರಾಘವೇಂದ್ರ ಆಗಲಿ, ಮೇಘನಾ ರಾಜ್ ಆಗಲಿ ಇಬ್ಬರೂ ಪ್ರತಿಕ್ರಿಯೆ ನೀಡಿರಲಿಲ್ಲ.‌. ಇದೀಗ ಸಂದರ್ಶನವೊಂದರಲ್ಲಿ ನಟ ವಿಜಯ್ ಸ್ಪಷ್ಟೀಕರಣ ನೀಡಿದ್ದು ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.

2ನೇ ಮದುವೆ ಬಗ್ಗೆ ವಿಜಯ ರಾಘವೇಂದ್ರ ಏನಂದ್ರು?

Profile Pushpa Kumari Aug 10, 2025 6:04 PM

ಬೆಂಗಳೂರು: ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ಕನ್ನಡದ ಪ್ರಮುಖ‌ ನಟರಲ್ಲಿ ಒಬ್ಬರಾಗಿದ್ದಾರೆ. ಇವರ ಪತ್ನಿ ಸ್ಪಂದನ ಕೊನೆಯುಸಿರೆಳೆದು ಒಂದೂವರೆ ವರ್ಷ ಆಗಿದೆ. ಪ್ರಸ್ತುತ, ವಿಜಯ್ ರಾಘವೇಂದ್ರ ತಮ್ಮ ಮಗನನ್ನು ಒಂಟಿಯಾಗಿ ಬೆಳೆಸುತ್ತಿದ್ದಾರೆ. ಈ ನಡುವೆ ವಿಜಯ ರಾಘವೇಂದ್ರ ಹಾಗೂ ಮೇಘನಾ ರಾಜ್ ಇಬ್ಬರಿಗೂ ಎರಡನೇ ಮದುವೆ ಅನ್ನುವ ಗಾಸಿಪ್ ಸುದ್ದಿ ಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಲವು ದಿನಗಳಿಂದ ಹರಡುತ್ತಲೆ ಇತ್ತು. ಆದರೆ, ಈ ಬಗ್ಗೆ ವಿಜಯ ರಾಘವೇಂದ್ರ ಆಗಲಿ, ಮೇಘನಾ ರಾಜ್ ಆಗಲಿ ಇಬ್ಬರೂ ಪ್ರತಿಕ್ರಿಯೆ ನೀಡಿರಲಿಲ್ಲ.‌. ಇದೀಗ ಸಂದರ್ಶನ ವೊಂದರಲ್ಲಿ ನಟ ವಿಜಯ್ ಸ್ಪಷ್ಟೀಕರಣ ನೀಡಿದ್ದು ಬೇಸರ ಕೂಡ ವ್ಯಕ್ತ ಪಡಿಸಿದ್ದಾರೆ.

ಸ್ಪಂದನಾ ಅವರು 2023ರ ಆಗಸ್ಟ್​ನಲ್ಲಿ ಥೈಲ್ಯಾಂಡ್​ನ ಬ್ಯಾಂಕಾಕ್​ನಲ್ಲಿ ನಿಧನ ಹೊಂದಿದರು. ಇದಾದ ಬಳಿಕ ವಿಜಯ್ ರಾಘವೇಂದ್ರ ಅವರ ಎರಡನೇ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಅದರಲ್ಲೂ ಮೇಘನಾ ರಾಜ್ ಜೊತೆ ಇಲ್ಲ ಸಲ್ಲದ ಗಾಸಿಪ್ ಸುದ್ದಿ ಹರಡಿಸಿ ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಈ ವಿಚಾರಗಳ ಬಗ್ಗೆ ವಿಜಯ್ ರಾಘ ವೇಂದ್ರ ಅವರು ಒಲ್ಲದ ಮನಸ್ಸಿನಿಂದ ಸ್ಪಷ್ಟೀಕರಣ ನೀಡಿದ್ದಾರೆ.ವಿಜಯ್ ರಾಘವೇಂದ್ರ ತಮ್ಮ ಹೊಸ ಸಿನಿಮಾ 'ರಿಪ್ಪನ್ ಸ್ವಾಮಿ'ಯ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈ ವೇಳೆ ಕೆಲವು ಯೂಟ್ಯೂಬ್ ಚಾನೆಲ್‌ಗಳು ವಿಜಯ್ ರಾಘವೇಂದ್ರ ಬಳಿ ಮೇಘನಾ ರಾಜ್ ಅವ ರೊಂದಿಗೆ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ಕೇಳಿವೆ. ಈ ವೇಳೆ ಸ್ಪಷ್ಟವಾಗಿ ಮೇಘನಾ ಅವರೊಂದಿಗೆ ಮದುವೆ ಆಗುತ್ತಾರಾ? ಇಲ್ವಾ? ಅನ್ನೋದನ್ನು ತಿಳಿಸಿದ್ದಾರೆ.

ಇದನ್ನು ಓದಿ:Coolie Movie: ರಿಲೀಸ್‌ಗೂ ಮುನ್ನ ರಜನಿಕಾಂತ್‌ ನಟನೆಯ ಕೂಲಿಗೆ ಭರ್ಜರಿ ಕಲೆಕ್ಷನ್‌!

ಈ ಬಗ್ಗೆ ಮಾತನಾಡಿರುವ ವಿಜಯ್ ಈ ವಿಚಾರಕ್ಕೆ ನಾನು ಯಾವತ್ತೂ ಪ್ರತಿಕ್ರಿಯೆ ನೀಡಲು ಮನಸ್ಸು ಒಪ್ಪಿರಲಿಲ್ಲ. ‌ಯಾಕಂದ್ರೆ ನನಗೆ ಅದು ಬೇಕಾಗಿರಲಿಲ್ಲ.‌ ನನ್ನನ್ನು ಇಷ್ಟಪಡುವ ಜನ ರಿಗೂ ಅದು ಬೇಕಾಗಿರಲಿಲ್ಲ. ನಾನು ಯಾರನ್ನೂ ಇಲ್ಲಿ ಯವರೆಗೆ ಬೈಯ್ಯುವುದಾಗಲಿ, ರೇಗುವುದಾಗಲಿ ಮಾಡಿಲ್ಲ.‌ ಆದರೆ, ನನಗೆ ಅದು ಬೇಡ. ನಾನು ಮೇಘನಾ ಇಬ್ಬರೂ ಫೋನ್ ಮಾಡಿ ಕೊಂಡು ತಮಾಷೆ ಮಾಡಿಕೊಳ್ಳುತ್ತೇವೆ. ಏನ್ರಿ ಇದೆಲ್ಲ‌ ಅಂತ ಮಾತಾಡಿಕೊಳ್ಳುತ್ತೇವೆ. ಅಂತಹ ಒಳ್ಳೆಯ ಸ್ನೇಹಿತರು ನಾವು. ನಮ್ಮಿಬ್ಬರ ಮದ್ಯೆ ಬೇರೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದಿದ್ದಾರೆ. ವಿಜಯ ರಾಘವೇಂದ್ರ ಅಭಿನಯದ ರಿಪ್ಪನ್ ಸ್ವಾಮಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಇದೇ ಆಗಸ್ಟ್-29 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನ ಕಿಶೋರ್ ಮೂಡುಬಿದಿರೆ ಡೈರೆಕ್ಷನ್ ಮಾಡಿದ್ದಾರೆ.