ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Goodachari 2 Movie: ಜಿ2‌ ‘ಗೂಢಚಾರಿ 2’ ಸಿನಿಮಾದಲ್ಲಿ ಅಡಿವಿ ಶೇಷ್‌ಗೆ ಜೋಡಿಯಾದ ವಮಿಕಾ ಗಬ್ಬಿ

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸ್ಪೈ ಥ್ರಿಲ್ಲರ್‌ G2 (ಗೂಢಚಾರಿ 2) ಸಿನಿಮಾ (Goodachari 2 Movie) ಈಗಾಗಲೇ ಹತ್ತು ಹಲವು ಕಾರಣಕ್ಕೆ ಕುತೂಹಲ ಕೆರಳಿಸುತ್ತಿದೆ. ಈಗಾಗಲೇ ಮೊದಲ ಭಾಗ ಯಶಸ್ವಿಯಾದ ಬಳಿಕ, ಈ ಸಿನಿಮಾ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ. ಈಗಾಗಲೇ ಇದೇ ಸಿನಿಮಾದಲ್ಲಿ ಇಮ್ರಾನ್‌ ಹಶ್ಮಿ ಪ್ರಮುಖ ಪಾತ್ರ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಈಗ ಇದೇ ಸಿನಿಮಾ ಬಳಗಕ್ಕೆ ಬ್ಯೂಟಿಯ ಆಗಮನವಾಗಿದೆ. ಅಂದರೆ, ವಮಿಕಾ ಗಬ್ಬಿ ಜಿ2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Goodachari 2 Movie: ಜಿ2‌ ‘ಗೂಢಚಾರಿ 2’ ಸಿನಿಮಾದಲ್ಲಿ ಅಡಿವಿ ಶೇಷ್‌ಗೆ ಜೋಡಿಯಾದ ವಮಿಕಾ ಗಬ್ಬಿ

-

Profile
Vishwavani News Jan 7, 2025 8:55 PM
ಬೆಂಗಳೂರು: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸ್ಪೈ ಥ್ರಿಲ್ಲರ್‌ G2 (ಗೂಢಚಾರಿ 2) ಸಿನಿಮಾ (Goodachari 2 Movie) ಈಗಾಗಲೇ ಹತ್ತು ಹಲವು ಕಾರಣಕ್ಕೆ ಕುತೂಹಲ ಕೆರಳಿಸುತ್ತಿದೆ. ಈಗಾಗಲೇ ಮೊದಲ ಭಾಗ ಯಶಸ್ವಿಯಾದ ಬಳಿಕ, ಈ ಸಿನಿಮಾ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ. ಈಗಾಗಲೇ ಇದೇ ಸಿನಿಮಾದಲ್ಲಿ ಇಮ್ರಾನ್‌ ಹಶ್ಮಿ ಪ್ರಮುಖ ಪಾತ್ರ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಈಗ ಇದೇ ಸಿನಿಮಾ ಬಳಗಕ್ಕೆ ಬ್ಯೂಟಿಯ ಆಗಮನವಾಗಿದೆ. ಅಂದರೆ, ವಮಿಕಾ ಗಬ್ಬಿ (Wamiqa Gabbi) ಜಿ2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
image-6078a7a2-3399-4b53-90ee-ea7c98396a1c.jpg
ಈಗಾಗಲೇ ಪಂಜಾಬಿ, ಬಾಲಿವುಡ್, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ವಮಿಕಾ ಗಬ್ಬಿ, ಈಗ ಪ್ಯಾನ್‌ ಇಂಡಿಯನ್‌ ಜಿ2 ಸಿನಿಮಾದ ಭಾಗವಾಗಿದ್ದಾರೆ. ಜಿ2 ಚಿತ್ರದಲ್ಲಿ ನಾಯಕ ಅಡಿವಿ ಶೇಷ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಭಾಗವಾಗುತ್ತಿರುವುದಕ್ಕೆ ಅಷ್ಟೇ ಖುಷಿಯಲ್ಲಿದ್ದಾರೆ ವಮಿಕಾ. ಇತ್ತೀಚೆಗಷ್ಟೇ ಅಡಿವಿ ಶೇಷ್‌ ಅವರೊಂದಿಗೆ ಯುರೋಪ್‌ ದೇಶದಲ್ಲಿನ ಶೂಟಿಂಗ್ ಮುಗಿಸಿದ ವಮಿಕಾ, ಸಿನಿಮಾ ಬಗ್ಗೆ ತುಂಬ ಎಗ್ಸೈಟ್‌ ಆಗಿದ್ದಾರೆ.
‘ನಾನು G2 ಸಿನಿಮಾದ ಭಾಗವಾಗಲು ತುಂಬ ಉತ್ಸುಕಳಾಗಿದ್ದೇನೆ. ಈಗಾಗಲೇ ಪಾರ್ಟ್‌ 1 ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ತನ್ನದೆ ಆದ ಬೆಂಚ್‌ಮಾರ್ಕ್‌ ಸೃಷ್ಟಿಸಿದೆ. ಈಗ ಇದೇ ಟೀಮ್‌ನ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಪಾರ್ಟ್‌ 2 ಮೂಲಕ ಪ್ರೇಕ್ಷಕನಿಗೆ ಮತ್ತಷ್ಟು ಹೊಸದನ್ನು ನೀಡಲಿದ್ದೇವೆ’ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Winter Makeup Kit: ಚಳಿಗಾಲದಲ್ಲಿ ನಿಮ್ಮ ಮೇಕಪ್ ಕಿಟ್‌‌ನಲ್ಲಿರಬೇಕಾದ ಸೌಂದರ್ಯ ವರ್ಧಕಗಳಿವು!
ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು ಎಕೆ ಎಂಟರ್ಟೈನ್ಮೆಂಟ್ಸ್ ಅಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ಮತ್ತು ಅಭಿಷೇಕ್ ಅಗರ್ವಾಲ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜಿ 2 ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಸ್ಪೈ ಥ್ರಿಲ್ಲರ್‌ ಗೂಢಚಾರಿ 2 ಚಿತ್ರದಲ್ಲಿ ಅಡಿವಿ ಶೇಷ್, ವಮಿಕಾ ಗಬ್ಬಿ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿದ್ದರೆ, ಮುರಳಿ ಶರ್ಮಾ, ಸುಪ್ರಿಯಾ ಯರ್ಲಗಡ್ಡ ಮತ್ತು ಮಧು ಶಾಲಿನಿ ಸೇರಿದಂತೆ ಇನ್ನೂ ಹಲವು ಕಲಾವಿದರಿದ್ದಾರೆ.