Adigas Yatra: ಅಡಿಗಾಸ್ ಯಾತ್ರಾದಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಕುರಿತ ಮಾಹಿತಿ ಇಲ್ಲಿದೆ
Adigas Yatra recruitment: ಪ್ರವಾಸೋದ್ಯಮ ವಲಯದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್ ಯಾತ್ರಾ ಸಂಸ್ಥೆಯ ಬೆಂಗಳೂರಿನ ಬಸವನಗುಡಿ, ವಿಜಯನಗರ ಹಾಗೂ ರಾಜರಾಜೇಶ್ವರಿ ನಗರದಲ್ಲಿರುವ ಕಚೇರಿಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಸಾಂದರ್ಭಿಕ ಚಿತ್ರ -
Prabhakara R
Mar 13, 2026 6:39 PM
ಬೆಂಗಳೂರು: ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್ ಯಾತ್ರಾ (Adigas Yatra recruitment) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಇಂತಿದೆ.
ಟೆಲಿ ಸೇಲ್ಸ್ -ಎಕ್ಸಿಕ್ಯುಟಿವ್: ವೇತನ- ಅನುಭವವನ್ನು ಆಧರಿಸಿ ಮಾಸಿಕ 18,000 ರುಪಾಯಿಗಳಿಂದ 30,000 ರುಪಾಯಿ ತನಕ. ಜತೆಗೆ ಆಕರ್ಷಕ ಇನ್ಸೆಂಟಿವ್ ಲಭ್ಯವಿದೆ. 1-2 ವರ್ಷಗಳ ಅನುಭವ ಇರುವವರಿಗೆ ಆದ್ಯತೆ.
ಟೀಮ್ ಲೀಡರ್-ಸೇಲ್ಸ್ : 2ಕ್ಕೂ ಹೆಚ್ಚು ವರ್ಷ ಅನುಭವ ಅಗತ್ಯ. ಟೂರಿಸಂ ಇಂಡಸ್ಟ್ರಿಯ ಅನುಭವ ಇದ್ದವರಿಗೆ ಆದ್ಯತೆ.
ಸೀನಿಯರ್ ಸೇಲ್ಸ್ ಮ್ಯಾನೇಜರ್: 2ಕ್ಕೂ ಹೆಚ್ಚು ವರ್ಷಗಳ ಅನುಭವ ಅಗತ್ಯ. ಪ್ರವಾಸೋದ್ಯಮದ ಅನುಭವಿಗಳಿಗೆ ಆದ್ಯತೆ. ಬೆಂಗಳೂರು ಕೆಲಸದ ಸ್ಥಳವಾಗಿದೆ.
ಆಸಕ್ತರು adigasyatra@gmail.com ಗೆ ರೆಸ್ಯೂಮ್ ಸಲ್ಲಿಸಬಹುದು. ಅಥವಾ ಈ ವಾಟ್ಸ್ ಆಪ್ ನಂಬರಿಗೆ ಕಳಿಸಬಹುದು: 9611600810