ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಂಗೇರಿದ ವಿಧಾನ ಪರಿಷತ್ ಚುನಾವಣೆ; ಅಡ್ಡ ಮತದಾನದ ಭೀತಿ! 7ನೇ ಸ್ಥಾನಕ್ಕೆ ಭಾರೀ ಪೈಪೋಟಿ

ವಿಧಾನ ಪರಿಷತ್‌ನಲ್ಲಿ ಇದೇ 30ರಂದು ತೆರವಾಗಲಿರುವ 7 ಸ್ಥಾನಗಳಿಗೆ ಗುರುವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ. ಕಾಂಗ್ರೆಸ್‌ 4 ಹಾಗೂ ಬಿಜೆಪಿ 2 ಸ್ಥಾನ ಗೆಲ್ಲಲಿದ್ದು, ಬಾಕಿ 1 ಸ್ಥಾನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆಯಿದೆ.

ರಂಗೇರಿದ ವಿಧಾನ ಪರಿಷತ್ ಚುನಾವಣೆ; ಅಡ್ಡ ಮತದಾನದ ಭೀತಿ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 18, 2026 10:51 AM

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಇದೇ 30ರಂದು ತೆರವಾಗಲಿರುವ 7 ಸ್ಥಾನಗಳಿಗೆ ಗುರುವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ (Karnataka Legislative Council Election) ಕಾರ್ಯ ನಡೆಯಲಿದೆ. ಕಾಂಗ್ರೆಸ್‌ 4 ಹಾಗೂ ಬಿಜೆಪಿ 2 ಸ್ಥಾನ ಗೆಲ್ಲಲಿದ್ದು, ಬಾಕಿ 1 ಸ್ಥಾನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆಯಿದೆ. ಗುರುವಾರ ಬೆಳಗ್ಗೆ 9ರಿಂದ ಸಂಜೆ 4ವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಲಿದೆ.

ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ತಿಪ್ಪಣ್ಣಪ್ಪ ಕಮಕನೂರ, ಬಿ. ಎಸ್‌.ಶಿವಣ್ಣ, ಪಿ.ವಿ.ಮೋಹನ್ ಐದನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿಯಿಂದ ಲಿಂಗರಾಜ್‌ ಪಾಟೀಲ್‌ ಹಾಗೂ ಮೈಸೂರಿನ ರಘು ಕೌಟಿಲ್ಯ ಇವರ ಜೊತೆಗೆ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಗೋವಿಂದರಾಜು ಅವರು ಕಣದಲಿದಾರೆ.

ಬಿಜೆಪಿಯು ಎನ್‌ಡಿಎ ಮೈತ್ರಿಕೂಟದ ಜೆಡಿಎಸ್‌ ಅಭ್ಯರ್ಥಿಧಿಯನ್ನು ಬೆಂಬಲಿಸಿದ್ದು, ಗೆಲುವು ಸಾಧಿಸಲು 'ಆತ್ಮಸಾಕ್ಷಿ' ಹೆಸರಿನಲ್ಲಿ ಚಲಾವಣೆಯಾ ಗುವ ಅಡ್ಡ ಮತಗಳೇ ನಿರ್ಣಾಯಕವಾಗುವ ನಿರೀಕ್ಷೆಯಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಮೂರೂ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ನಡೆಸಿ ವಿಪ್‌ ನೀಡಿ ತಂತ್ರಗಳ ಬಗ್ಗೆ ಚರ್ಚಿಸಿವೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್‌ ಮೊರೆ ಹೋಗಿದ್ದರೆ, ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಅಭ್ಯರ್ಥಿಗಳ ಗೆಲುವಿನ ಕುರಿತಂತೆ ಚರ್ಚಿಸಿ ಅದಕ್ಕೆ ಪೂರಕ ವ್ಯವಸ್ಥೆ ಮಾಡಿಕೊಂಡಿದೆ.

ಆಡಳಿತಾರೂಢ ಕಾಂಗ್ರೆಸ್ ಐದೂ ಸ್ಥಾನಗಳನ್ನು ಗೆಲ್ಲಲು ರಣತಂತ್ರ ಹೂಡಿದ್ದು, ಅಡ್ಡ ಮತದಾನ ಭೀತಿ ಹಿನ್ನೆಲೆಯಲ್ಲಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ಗುರುವಾರ ನೇರವಾಗಿ ವಿಧಾನಸೌಧಕ್ಕೆ ಪಾಲ್ಗೊಳ್ಳಲಿದ್ದಾರೆ. ಬಂದು ಮತದಾನದಲ್ಲಿ ಮೇಲ್ಮನೆಗೆ ಸ್ಪರ್ಧಿಸಿರುವ ಐವರು ಅಭ್ಯರ್ಥಿ ಗಳಿಗೆ ಮತ ಹಾಕುವ ಶಾಸಕರಿಗಾಗಿ ಐದು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ. ಯಾರು, ಯಾವ ಅಭ್ಯರ್ಥಿ ಪರ ಮತ ಚಲಾವಣೆ ಮಾಡಬೇಕು ಎಂದು ಈಗಾಗಲೇ ನಿರ್ಧರಿಸಲಾಗಿದೆ. ಈ ತಂಡದ ಪ್ರಕಾರವೇ ವಿಧಾನಸೌಧಕ್ಕೆ ಪ್ರತ್ಯೇಕ ಬಸ್‌ನಲ್ಲಿ ತೆರಳಲಿದ್ದಾರೆ.

MLC Election: ನಾಳೆ ವಿಧಾನ ಪರಿಷತ್‌ ಚುನಾವಣೆ; ಕ್ರಾಸ್‌ ವೋಟಿಂಗ್‌ ಭೀತಿ ಹಿನ್ನೆಲೆ ಸಿಎಂ ಡಿಕೆಶಿ ನೇತೃತ್ವದಲ್ಲಿ ಅಣಕು ಮತದಾನ

ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರಿಗೆ ಯಾವ ಶಾಸಕರು ಮತ ಹಾಕಬೇಕು, ವಿನಯ್ ಕಾರ್ತಿಕ್‌ಗೆ ಯಾರು ಮತ ಚಲಾವಣೆ ಮಾಡಬೇಕು ಎಂದು ಹೀಗೆ ತಂಡ ತಂಡವಾಗಿಯೇ ಪ್ರತ್ಯೇಕ ಬಸ್‌ನಲ್ಲಿ ಪ್ರಯಾಣಿ ಸುವ ಕಾಂಗ್ರೆಸ್ ಶಾಸಕರು ಮತ ಚಲಾವಣೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಒಂದು ವೇಳೆ ಅಡ್ಡ ಮತದಾನವಾದರೆ ಯಾರು ಮಾಡಿದ್ದಾರೆ ಎಂದು ತಿಳಿಯಲು ಈ ವ್ಯವಸ್ಥೆ ಸಹಕಾರಿ ಆಗಲಿದ್ದು, ಹಾಗಾಗಿಯೇ ಪ್ರತ್ಯೇಕ ಬಸ್‌ಗಳಲ್ಲಿ ಶಾಸಕರನ್ನು ಕರೆದೊಯ್ಯಲು ಸಿಎಂ ಡಿಕೆ ಶಿವಕುಮಾರ್‌ ಯೋಜನೆ ರೂಪಿಸಿದ್ದು, ಗುರುವಾರ ಸಮಯಕ್ಕೆ ಸರಿಯಾಗಿ ಬಿಡದಿ ಬಳಿಯ ಖಾಸಗಿ ರೆಸಾರ್ಟ್‌ನಿಂದ ಶಾಸಕರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಬುಧವಾರ ರೆಸಾರ್ಟ್‌ನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಎದುರಿನಲ್ಲೇ ಅಣಕು ಮತದಾನ ನಡೆಸಿ, ಎಲ್ಲಾ ಶಾಸಕರಿಗೂ ಮತದಾನ ಹೇಗೆ ಮಾಡಬೇಕು ಎಂದು ತರಬೇತಿ ನೀಡಲಾಗಿದೆ.