Lift accident: ಜಮ್ಮು- ಕಾಶ್ಮೀರದಲ್ಲಿ ಲಿಫ್ಟ್ ಕುಸಿತ, ಬೆಂಗಳೂರಿನ ಆರು ಮಂದಿಗೆ ಗಾಯ
ಪ್ರವಾಸಿಗರು ಲಿಫ್ಟ್ ಬಳಸುತ್ತಿದ್ದಾಗ ಅದು ಹಠಾತ್ ಆಗಿ ಕೆಳಕ್ಕೆ ಕುಸಿದಿದೆ. ಗಾಯಗೊಂಡವರನ್ನು ವೆಂಕಟೇಶ್ (65), ಮಂಗಳಾ (54), ಕುಶಾಲಾ (18), ಪಂಕಜಾ (16), ವೆಂಕಟಲಕ್ಷ್ಮಮ್ಮ (60) ಮತ್ತು ಸೌಭಾಗ್ಯ (60) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ.
ಕುಸಿದ ಲಿಫ್ಟ್ -
ಶ್ರೀನಗರ, ಏ.25: ಜಮ್ಮು ಮತ್ತು ಕಾಶ್ಮೀರದ (Jammu Kashmir) ಶ್ರೀನಗರದ ಹೈದರ್‌ಪೋರಾ ಪ್ರದೇಶದ ಖಾಸಗಿ ಹೋಟೆಲ್ ಒಂದರಲ್ಲಿ ಲಿಫ್ಟ್ ಕುಸಿದು (lift accident) ಬಿದ್ದ ಪರಿಣಾಮ, ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಆರು ಮಂದಿ (injury) ಗಾಯಗೊಂಡಿದ್ದಾರೆ. ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಶುಕ್ರವಾರ (ಏಪ್ರಿಲ್ 24) ಶ್ರೀನಗರದ ‘ಹೋಟೆಲ್ ಅರಿಸನ್ ಲಕ್ಸುರಿ’ಯಲ್ಲಿ (Hotel Arison Luxury) ಈ ಘಟನೆ ನಡೆದಿದೆ.
ಪ್ರವಾಸಿಗರು ಲಿಫ್ಟ್ ಬಳಸುತ್ತಿದ್ದಾಗ ಅದು ಹಠಾತ್ ಆಗಿ ಕೆಳಕ್ಕೆ ಕುಸಿದಿದೆ. ಗಾಯಗೊಂಡವರನ್ನು ವೆಂಕಟೇಶ್ (65), ಮಂಗಳಾ (54), ಕುಶಾಲಾ (18), ಪಂಕಜಾ (16), ವೆಂಕಟಲಕ್ಷ್ಮಮ್ಮ (60) ಮತ್ತು ಸೌಭಾಗ್ಯ (60) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ.
ಘಟನೆ ನಡೆದ ತಕ್ಷಣ ಹೋಟೆಲ್ ಸಿಬ್ಬಂದಿ ಮತ್ತು ಸ್ಥಳೀಯರು ಗಾಯಾಳುಗಳನ್ನು ಸಮೀಪದ ಬರ್ಜುಲ್ಲಾದಲ್ಲಿರುವ ಅಸ್ಥಿ ಮತ್ತು ಕೀಲು ಆಸ್ಪತ್ರೆಗೆ (Bone and Joint Hospital) ದಾಖಲಿಸಿದ್ದಾರೆ. ಗಾಯಾಳುಗಳ ಕಾಲು ಮತ್ತು ಬೆನ್ನಿನ ಭಾಗಕ್ಕೆ ಏಟುಗಳಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಯುವತಿಯೊಂದಿಗೆ ಅನುಚಿತ ವರ್ತನೆ, ಇಬ್ಬರು ಆರೆಸ್ಟ್
ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಯಲಹಂಕದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿಗೆ ಎದುರುಗಡೆಯಿಂದ ಬಂದ ಇಬ್ಬರು ಪುಂಡರು ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತನೆ ತೋರಿದ ಘಟನೆ ವರದಿಯಾಗಿತ್ತು. ಇದೀಗ ಆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಪುಂಡರನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಯಲಹಂಕ ಪೊಲೀಸರು ಫುಡ್ ಡೆಲಿವರಿ ಬಾಯ್ ಹರೀಶ್ ಮತ್ತು ಪ್ರಜ್ವಲ್ ಎಂಬವರನ್ನು ಆರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಕೋಗಿಲು ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಯುವಕರ ಪುಂಡಾಟ ಕಾರಿನ ಡ್ಯಾಶ್ ಕ್ಯಾಮರದಲ್ಲಿ ಸೆರೆಯಾಗಿದ್ದು, ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.