PES University: ಎಲೆಕ್ಟ್ರಿಕ್ ಸೋಲಾರ್ ವೆಹಿಕಲ್ ಚಾಂಪಿಯನ್‌ಶಿಪ್ 2025- ಪಿಇಎಸ್ ವಿವಿಯ ತಂಡಕ್ಕೆ ಬಹುಮಾನ
PES University: ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಇಂಜಿನಿಯರ್ಸ್ (ISIE) ಇತ್ತೀಚೆಗೆ ಗ್ರೇಟರ್ ನೋಯ್ಡಾದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಎಲೆಕ್ಟ್ರಿಕ್ ಸೋಲಾರ್ ವೆಹಿಕಲ್ ಚಾಂಪಿಯನ್‌ಶಿಪ್ (ESVC) ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಉತ್ಸಾಹಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವಾದ ಟೀಮ್ ಹಯಾ ಆಫ್ ರೋಡಿಂಗ್ (THOR) ಭಾಗವಹಿಸಿ ಗೆಲುವು ಸಾಧಿಸಿದೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಇಂಜಿನಿಯರ್ಸ್ (ISIE) ಇತ್ತೀಚೆಗೆ ಗ್ರೇಟರ್ ನೋಯ್ಡಾದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಎಲೆಕ್ಟ್ರಿಕ್ ಸೋಲಾರ್ ವೆಹಿಕಲ್ ಚಾಂಪಿಯನ್‌ಶಿಪ್ (ESVC) ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ (PES University) ಉತ್ಸಾಹಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವಾದ ಟೀಮ್ ಹಯಾ ಆಫ್ ರೋಡಿಂಗ್ (THOR) ಭಾಗವಹಿಸಿ ಗೆಲುವು ಸಾಧಿಸಿದೆ. ದೇಶದ ವಿಶ್ವವಿದ್ಯಾಲಯಗಳ ಹತ್ತು ತಂಡಗಳೊಂದಿಗಿನ ಸ್ಪರ್ಧೆಯಲ್ಲಿ ಟೀಮ್ ಹಯಾ ಆಫ್ ರೋಡಿಂಗ್ ಗಮನಾರ್ಹ ಯಶಸ್ಸು ಸಾಧಿಸಿದೆ. ʼದಿ ಫ್ಯೂಚರ್ ಪ್ರಶಸ್ತಿʼ ಹಾಗೂ 25 ಸಾವಿರ ನಗದು ಬಹುಮಾನವನ್ನು ತಂಡವು ಪಡೆದಿದೆ.
ಪಿಇಎಸ್ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಅಧ್ಯಕ್ಷ, ಅಧ್ಯಾಪಕ ಸಲಹೆಗಾರ ಡಾ.ಎನ್.ರಾಜೇಶ್ ಮಥಿವನನ್ ಅವರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಉತ್ಸಾಹಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವಾದ ಟೀಮ್ ಹಯಾ ಆಫ್ ರೋಡಿಂಗ್ (THOR) ಆಟೋಮೋಟಿವ್ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಪರಿಣತಿ ಹೊಂದಿ, ಆಲ್ ಟೆರೈನ್ ವೆಹಿಕಲ್ಸ್ (ಎಟಿವಿಗಳು) ವಿನ್ಯಾಸಗೊಳಿಸುವುದು ಮತ್ತು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಪಿಇಎಸ್ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | AFMS Recruitment 2025: ಆರ್ಮಿ ಆಸ್ಪತ್ರೆಯಲ್ಲಿದೆ 400 ಮೆಡಿಕಲ್ ಆಫೀಸರ್ ಹುದ್ದೆ; ಇಂದೇ ಅರ್ಜಿ ಸಲ್ಲಿಸಿ
ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಜವಾಹರ್ ದೊರೆಸ್ವಾಮಿ ಮತ್ತು ಕುಲಪತಿ ಪ್ರೊ. ಜೆ.ಸೂರ್ಯಪ್ರಸಾದ್ ಅವರು ತಂಡವನ್ನು ಅಭಿನಂದಿಸಿದ್ದಾರೆ.