ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI 2nd Test: ಫಾಲೋ ಆನ್ ಒತ್ತಡದ ಮಧ್ಯೆ ವಿಂಡೀಸ್‌ ದಿಟ್ಟ ಹೋರಾಟ

India vs West Indies: ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಕುಲದೀಪ್ ಯಾದವ್ 82 ರನ್ನಿಗೆ ಐದು ವಿಕೆಟ್ ಕಿತ್ತು ಮಂಚಿದರು. ರವೀಂದ್ರ ಜಡೇಜ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಗಳಿಸಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ಸಿರಾಜ್‌ ಮತ್ತು ಸುಂದರ್‌ ತಲಾ ಒಂದು ವಿಕೆಟ್‌ ಪಡೆದರು.

ಫಾಲೋ ಆನ್ ಹೇರಿದ ಭಾರತ; ವಿಂಡೀಸ್‌ ದಿಟ್ಟ ಬ್ಯಾಟಿಂಗ್‌ ಹೋರಾಟ

-

Abhilash BC Abhilash BC Oct 12, 2025 5:32 PM

ನವದೆಹಲಿ: ವೆಸ್ಟ್‌ಇಂಡೀಸ್‌(IND vs WI 2nd Test) ತಂಡ ಮೊದಲ ಇನಿಂಗ್ಸ್‌ಗಿಂತಲೂ ದ್ವಿತೀಯ ಇನಿಂಗ್ಸ್‌ನಲ್ಲಿ ಸುಧಾರಿತ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ದಿಟ್ಟ ಹೋರಾಟವೊಂದನ್ನು ಜಾರಿಯಲ್ಲಿರಿಸಿದೆ. ಅದು ಕೂಡ ಫಾಲೋ ಆನ್ ಒತ್ತಡದ ಮಧ್ಯೆ. ಮೂರನೇ ದಿನದಾಟದ ಅಂತ್ಯಕ್ಕೆ ವಿಂಡೀಸ್‌ 2 ವಿಕೆಟ್‌ಗೆ 173 ರನ್‌ ಗಳಿಸಿದ್ದು, ಇನ್ನೂ 97 ರನ್‌ ಹಿನ್ನಡೆಯಲ್ಲಿದೆ.

2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 140 ರನ್‌ ಗಳಿಸಿದ್ದ ವಿಂಡೀಸ್‌, ಮೂರನೇ ದಿನದಾಟದಲ್ಲಿ ಕುಲ್‌ದೀಪ್‌ ಯಾದವ್‌ ಅವರ ಸ್ಪಿನ್‌ ಬಲೆಗೆ ಬಿದ್ದು ಭೋಜನ ವಿರಾಮಕ್ಕೂ ಮುನ್ನವೇ 248 ರನ್‌ಗೆ ಆಲೌಟ್‌ ಆಯಿತು. 270 ರನ್‌ ಮುನ್ನಡೆ ಪಡೆದ ಭಾರತ, ವಿಂಡೀಸ್ ತಂಡದ ಮೇಲೆ ಫಾಲೋ ಆನ್ ಹೇರಿತು.

ಫಾಲೋ ಆನ್ ಒತ್ತಡದೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ವಿಂಡೀಸ್‌, ಶೈ ಹೋಪ್ ಮತ್ತು ಜಾನ್ ಕ್ಯಾಂಪ್‌ಬೆಲ್ ದಿಟ್ಟ ಬ್ಯಾಟಿಂಗ್‌ ನೆರವಿನಿಂದ ಚೇತರಿಕೆ ಕಂಡಿತು. ಶೈ ಹೋಪ್ 66* ಮತ್ತು ಕ್ಯಾಂಪ್‌ಬೆಲ್ 87* ರನ್‌ ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಉಭಯ ಆಟಗಾರರು ಸೋಮವಾರ ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಿಕೊಂಡರೆ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಬಹುದು.

ಇದನ್ನೂ ಓದಿ Ind vs Wi 2nd test: 518 ರನ್‌ ಬಾರಿಸಿ ವಿಶ್ವ ದಾಖಲೆ ಬರೆದ ಭಾರತ

ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಕುಲದೀಪ್ ಯಾದವ್ 82 ರನ್ನಿಗೆ ಐದು ವಿಕೆಟ್ ಕಿತ್ತು ಮಂಚಿದರು. ರವೀಂದ್ರ ಜಡೇಜ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಗಳಿಸಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ಸಿರಾಜ್‌ ಮತ್ತು ಸುಂದರ್‌ ತಲಾ ಒಂದು ವಿಕೆಟ್‌ ಪಡೆದರು.

ದಾಖಲೆ ಸರಿಗಟ್ಟಿದ ಕುಲ್‌ದೀಪ್‌

ಎಡಗೈ ಮಣಿಕಟ್ಟಿನ ಸ್ಪಿನ್ನರ್ ಆಗಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಐದು ವಿಕೆಟ್‌ಗಳನ್ನು ಗಳಿಸಿದ ಇಂಗ್ಲೆಂಡ್‌ನ ಜಾನಿ ವಾರ್ಡ್ಲೆ ಅವರ ದಾಖಲೆಯನ್ನು ಕುಲ್‌ದೀಪ್‌ ಯಾದವ್‌ ಸರಿಗಟ್ಟಿದರು. ಉಭಯ ಆಟಗಾರರು ಒಟ್ಟು 5 ಬಾರಿ 5 ವಿಕೆಟ್‌ ಗೊಂಚಲು ಪಡೆದಿದ್ದಾರೆ.