Rakshit Shetty: ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಕೊಟ್ರು ಬಿಗ್ ಅಪ್ಡೇಟ್!
Rakshit Shetty: ರಕ್ಷಿತ್ ಶೆಟ್ಟಿ ಈ ಹಿಂದೆ ರಿಚರ್ಡ್ ಆಂಟನಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಈ ಸಿನಿಮಾ ಘೋಷಣೆ ಮಾಡಿಯೇ ಈಗ 4ವರ್ಷ ಕಳೆದಿದೆ. ಆ ಲೆಕ್ಕದಲ್ಲಿ ಈಗಾಗಲೇ ಈ ಸಿನಿಮಾ ತೆರೆ ಮೇಲೆ ಬರಬೇಕಿತ್ತು. ಆದರೆ ರಿಷಬ್ ಹಾಗೂ ರಾಜ್ ಬಿ. ಶೆಟ್ಟಿ ಅವರ ಸಿನಿಮಾ ಯಶಸ್ವಿಯಾದರೂ ರಕ್ಷಿತ್ ಮಾತ್ರ ತಮ್ಮ ಸಿನಿಮಾ ಮುಂದುವರಿಸಲಿಲ್ಲ ಎಂಬ ಮಾತುಗಳು ಸೋಶಿಯಲ್ ಮಿಡಿಯಾದಲ್ಲಿ ಕೇಳಿ ಬರುತ್ತಿದೆ. ಈ ಮೂಲಕ ನಟ ರಕ್ಷಿತ್ ಅವರ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ.

-

ಬೆಂಗಳೂರು: ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಕರಾವಳಿಯ ಪ್ರತಿಭೆಗಳದ್ದೇ ಕಾರು ಬಾರು. ಇತ್ತೀಚೆಗಷ್ಟೇ ತೆರೆಕಂಡ ರಾಜ್ ಬಿ. ಶೆಟ್ಟಿ (Raj B. Shetty) ಅವರು ನಟಿಸಿ , ನಿರ್ಮಾಪಕ ರಾಗಿ ಬಂಡವಾಳ ಹಾಕಿದ್ದ ಸು ಫ್ರಂ ಸೋ (Su From So) ಸಿನಿಮಾ ಬಿಗ್ ಸಕ್ಸಸ್ ಪಡೆಯಿತು. ಇದರ ಬೆನ್ನಲ್ಲೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ನಟಿಸಿ , ನಿರ್ದೇಶನ ಮಾಡಿದ್ದ ಕಾಂತಾರ ಹೊಸ ದಾಖಲೆ ಮಾಡುತ್ತಿದೆ. ಈ ಮೂಲಕ ಕರಾವಳಿಯ ಇಬ್ಬರು ಕಲಾವಿದರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.
ಇವರಂತೆ ನಟ ರಕ್ಷಿತ್ ಶೆಟ್ಟಿ (Rakshit Shetty) ಅವರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಿರಿಕ್ ಪಾರ್ಟಿ, ಚಾರ್ಲಿ ಹಾಗೂ ಸಪ್ತಸಾಗರದಾಚೆ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದರು. ಆದರೆ ಬಳಿಕ ಅವರ ಅಭಿನಯದ ಯಾವ ಸಿನಿಮಾ ಕೂಡ ಬಂದಿಲ್ಲ. ಆದರೆ ರಕ್ಷಿತ್ ಶೆಟ್ಟಿ ಈ ಹಿಂದೆ ರಿಚರ್ಡ್ ಆಂಟನಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಈ ಸಿನಿಮಾ ಘೋಷಣೆ ಮಾಡಿಯೇ ಈಗ 4ವರ್ಷ ಕಳೆದಿದೆ. ಆ ಲೆಕ್ಕದಲ್ಲಿ ಈಗಾಗಲೇ ಈ ಸಿನಿಮಾ ತೆರೆ ಮೇಲೆ ಬರಬೇಕಿತ್ತು. ಆದರೆ ರಿಷಬ್ ಹಾಗೂ ರಾಜ್ ಬಿ. ಶೆಟ್ಟಿ ಅವರ ಸಿನಿಮಾ ಯಶಸ್ವಿ ಯಾದರೂ ರಕ್ಷಿತ್ ಮಾತ್ರ ತಮ್ಮ ಸಿನಿಮಾ ಮುಂದುವರಿಸಲಿಲ್ಲ ಎಂಬ ಮಾತುಗಳು ಸೋಶಿಯಲ್ ಮಿಡಿಯಾದಲ್ಲಿ ಕೇಳಿ ಬರುತ್ತಿದೆ. ಈ ಮೂಲಕ ನಟ ರಕ್ಷಿತ್ ಅವರ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಮಾಹಿತಿ ಸಿಕ್ಕಿದೆ.
ನಟ ರಕ್ಷಿತ್ ಶೆಟ್ಟಿ ಅವರು ನಟನೆ ಮಾತ್ರವಲ್ಲದೆ ನಿರ್ಮಾಣ ಹಾಗೂ ನಿರ್ದೇಶನದಲ್ಲಿಯೂ ಕೂಡ ಪ್ರಸಿದ್ಧರಾಗಿದ್ದಾರೆ. ಅಂತೆಯೇ ಅವರು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಎರಡು ಪಾರ್ಟ್ ರಿಲೀಸ್ ಆದ ಬಳಿಕ ರಿಚರ್ಡ್ ಆಂಟನಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. 'ಉಳಿದವರು ಕಂಡಂತೆ' ಚಿತ್ರದ ಸೀಕ್ವೆಲ್ ಭಾಗವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದ್ದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರಕ್ಕೆ ನಿರ್ಮಾಣ ಮಾಡುತ್ತಿದೆ. ಹೀಗಾಗಿ ಕಾಂತಾರ ಚಾಪ್ಟರ್ 1 ಬೆನ್ನಲ್ಲೆ ರಕ್ಷಿತ್ ಅಭಿನಯದ ರಿಚರ್ಡ್ ಆಂಟನಿ ಸಿನಿಮಾ ತೆರೆ ಮೇಲೆ ಅಬ್ಬರಿಸುತ್ತದೆ ಎಂದೇ ಹೇಳಲಾಗಿತ್ತು.
4 ವರ್ಷಗಳ ಹಿಂದೆ ಸಿನಿಮಾ ಘೋಷಣೆ ಮಾಡಿದ್ದರೂ ರಕ್ಷಿತ್ ಅವವೆ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಅಪ್‌ಡೇಟ್ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರು ರಿಚರ್ಡ್ ಆಂಟನಿ ಸಿನಿಮಾ ಬಗ್ಗೆ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ. ಕಾಂತಾರ ಸಿನಿಮಾದ ಯಶಸ್ಸಿನ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದ ವೇಳೆಯಲ್ಲಿ ಅವರು ರಕ್ಷಿತ್ ಮುಂದಿನ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ:Mahalaya Movie: ಮೋಹನ್ ಮಾಯಣ್ಣ ನಿರ್ದೇಶನದ ʼಮಹಾಲಯʼ ಚಿತ್ರಕ್ಕೆ ನಟ ಶ್ರೀಮುರಳಿ ಚಾಲನೆ
'ರಿಚರ್ಡ್ ಆಂಟನಿ' ಚಿತ್ರದ ಬಗ್ಗೆ ಸಂದರ್ಶಕ ಪ್ರಶ್ಬೆ ಕೇಳಿದ್ದಕ್ಕೆ ಉತ್ತರಿಸಿದ್ದ ರಿಷಭ್ ಶೆಟ್ಟಿ ಅವರು ಈ ಬಗ್ಗೆ ಮಾತನಾಡಿ ರಕ್ಷಿತ್ ಸಿನಿಮಾ ಕೂಡ ಇದೆ ಸಂದರ್ಭದಲ್ಲಿ ಬರಬೇಕಿತ್ತು. ಆದರೆ ಅದು ಸಾಧ್ಯ ವಾಗಿಲ್ಲ. ರಕ್ಷಿತ್ ಅವರು ಸದ್ಯ ಯುಎಸ್‌ನಲ್ಲಿ ಸ್ಕ್ರಿಪ್ಟ್ ಕೆಲಸದಲ್ಲಿ ರಕ್ಷಿತ್ ಬ್ಯುಸಿಯಾಗಿದ್ದಾನೆ. ಆದಷ್ಟು ಬೇಗ ಸಿನಿಮಾ ಶುರು ಮಾಡುತ್ತಾರೆ. 'ರಿಚರ್ಡ್ ಆಂಟನಿ ಸಿನಿಮಾದ ಜೊತೆಗೆ ಮತ್ತೊಂದು ಸ್ಕ್ರಿಪ್ಟ್ ಕೂಡ ಮಾಡುತ್ತಿದ್ದಾನೆ. ಅವನು ಬಹಳ ಒಳ್ಳೆಯ ನಟ ಹಾಗೂ ಟೆಕ್ನಿಷಿಯನ್. ಶೀಘ್ರವೇ ಹೊಸ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಭರವಸೆ ತರಲಿದ್ದಾನೆ ಎಂದು ಹೇಳಿದ್ದಾರೆ.
ನಟ ರಿಷಬ್ ಹಾಗೂ ರಕ್ಚಿತ್ ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಒಳ್ಳೆ ಸ್ನೇಹಿತ ರಾಗಿದ್ದು ಅವರಿಬ್ಬರು ಅನೇಕ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಂತೆಯೇ ಉಳಿದವರು ಕಂಡಂತೆ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ಒಂದು ಸಣ್ಣ ಪಾತ್ರ ಮಾಡಿದ್ದರು. ಅದರ ಸಿಕ್ವೇಲ್ ಕಥೆ ಯನ್ನು ರಿಚರ್ಡ್ ಆಂಟನಿಯಲ್ಲಿ ತೆರೆಗೆ ತರುವ ಕಾರಣ ಅದರಲ್ಲಿ ನಟ ರಿಷಭ್ ಇರ್ತಾರಾ ಎಂಬ ಚರ್ಚೆಗಳಾಗುತ್ತಿದೆ. ಸದ್ಯ 'ಕಾಂತಾರ- ಚಾಪ್ಟರ್1 ಸಕ್ಸಸ್ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ಇದ್ದಾರೆ.