Rangapravesha: ಬೆಂಗಳೂರಿನಲ್ಲಿ ಅ.25ರಂದು ರಾಧಾ ಶ್ರೀವತ್ಸ ರಂಗಪ್ರವೇಶ
Bengaluru News: ಖ್ಯಾತ ಭರತನಾಟ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ರಾಧಾ ಶ್ರೀವತ್ಸ ಅವರ ರಂಗಪ್ರವೇಶ ಕಾರ್ಯಕ್ರಮವು ಅ. 25ರಂದು ಶನಿವಾರ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಜರುಗಲಿದೆ. ಈ ಕುರಿತ ವಿವರ ಇಲ್ಲಿದೆ.
-
ಬೆಂಗಳೂರು: ನಾಡಿನ ಪ್ರಖ್ಯಾತ ಭರತನಾಟ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ರಾಧಾ ಶ್ರೀವತ್ಸ ಅವರ ರಂಗಪ್ರವೇಶ (Rangapravesha) ಕಾರ್ಯಕ್ರಮವು ಅ. 25ರಂದು ಶನಿವಾರ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಜರುಗಲಿದೆ. ಹಿರಿಯ ಕಲಾವಿದೆ ಕಲಾಮಂಡಲಮ್ ಉಷಾ ದಾತಾರ್, ಚಿತ್ರನಟಿ ಮಾಳವಿಕಾ ಅವಿನಾಶ್, ನಟ ನೆ.ಲ . ನರೇಂದ್ರ ಬಾಬು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್, ಪಾಲಕರಾದ ಶ್ರೀವತ್ಸ ಮತ್ತು ಕವಿತಾ ಉಪಸ್ಥಿತರಿರಲಿದ್ದಾರೆ.
ನಟವಾಂಗದಲ್ಲಿ ಗುರು ಸುಪರ್ಣಾ, ಗಾಯನದಲ್ಲಿ ರೋಹಿತ್ ಭಟ್ , ಮೃದಂಗದಲ್ಲಿ ಗುರುಮೂರ್ತಿ, ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ, ವೀಣೆಯಲ್ಲಿ ಗೋಪಾಲ್ ಮತ್ತು ರಿದಂ ಪ್ಯಾಡ್‌ನಲ್ಲಿ ಪವನ್ ದತ್ತ ಹಿಮ್ಮೇಳ ಸಹಕಾರ ನೀಡಲಿದ್ದಾರೆ.
ದ್ವಿತೀಯ ಪಿಯು ಅಧ್ಯಯನ ಮಾಡುತ್ತಿರುವ ರಾಧಾ, ಈಗಾಗಲೇ ಸಾಯಿ ಆರ್ಟ್ಸ್ ಸಂಸ್ಥೆಯ ಹತ್ತು, ಹಲವು ಕಾರ್ಯಕ್ರಮದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿದ ಯುವ ಕಲಾವಿದೆ. ಶ್ರೀವತ್ಸ ಮತ್ತು ಕವಿತಾ ಅವರ ಪುತ್ರಿಯಾದ ಈಕೆ ನರ್ತನದಲ್ಲಿ ನವ ನವೀನ ತಂತ್ರಗಳನ್ನು ಕಲಿಯುವಲ್ಲಿ ಅದಮ್ಯ ಆಸಕ್ತಿ. ಹಾಗಾಗಿ ಮುದ್ರಾ, ತಾಳ, ಲಯ ಮತ್ತು ಅಭಿನಯಕ್ಕೆ ಈಕೆಯ ಪ್ರಧಾನ ಆದ್ಯತೆ ಇದೆ. ವಿದುಷಿ ಹರ್ಷಿತಾ ವಿದ್ಯಾ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿರುವುದು ಈಕೆಯ ಇನ್ನೊಂದು ಹೆಗ್ಗಳಿಕೆ.
ಈ ಸುದ್ದಿಯನ್ನೂ ಓದಿ | Beauty Trend 2025: ಕಂಗಳ ಕಾಂತಿ ಹೆಚ್ಚಿಸುವ ಮಸ್ಕರಾ ಸೀಕ್ರೇಟ್ಸ್
ವೇದಿಕೆ ಕಲಾವಿದೆಯಾಗಬೇಕು ಎಂಬ ಕನಸು
ನೃತ್ಯದಲ್ಲಿ ವಿದ್ವತ್ ಮಾಡುವುದರೊಂದಿಗೆ ಬಿಇ ವ್ಯಾಸಂಗ ಮಾಡಬೇಕು. ಜೀವನಕ್ಕೆ ಭದ್ರವಾದ ಒಂದು ವೃತ್ತಿ ಬೇಕು. ಡಾನ್ಸ್ ಹವ್ಯಾಸವಾಗಿ ಇಟ್ಟುಕೊಳ್ಳುತ್ತೇನೆ. ನಾನು ಉತ್ತಮವಾದ ʼವೇದಿಕೆ ಕಲಾವಿದೆʼ ಆಗಬೇಕು ಎಂಬ ಕನಸು ಇದೆ ಎನ್ನುವುದು ರಾಧಾ ಅವರ ಅಭಿಪ್ರಾಯವಾಗಿದೆ.