ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ, ಹಾಸ್ಟೆಲ್ ಬಲವರ್ಧನೆಗಾಗಿ; ಎಸ್‌ಎಫ್‌ಐ ಶೈಕ್ಷಣಿಕ ಜಾಥಾ

ಶಿಕ್ಷಣದ ವ್ಯಾಪಾರೀಕರಣ, ಕೇಂದ್ರಿ?ಕರಣ, ಭ್ರಷ್ಟಾಚಾರ ಹಾಗೂ ಪ್ರಜಾ ಸತ್ತಾತ್ಮಕ ಹಕ್ಕುಗಳ ದಮನದ ವಿರುದ್ಧ ನಿರಂತರವಾಗಿ ಎಸ್ ಎಫ್ ಐ ಹೋರಾಟ ರೂಪಿಸುತ್ತಾ ಬಲಿಷ್ಠ ವಿದ್ಯಾರ್ಥಿ ಚಳವಳಿಯನ್ನು ಎಸ್ ಎಫ್ ಐ ಮುನ್ನಡೆಸುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ದಿನದಿಂದ ದಿನಕ್ಕೆ ಕಡಿಮೆಯಾಗು ತ್ತಿದ್ದು ಖಾಸಗಿ ಶಾಲೆಗಳು ನಾಯಿಕೊಡೆಯಂತೆ ತಲೆ ಎತ್ತಿ ನಿಂತು ಶಿಕ್ಷಣವನ್ನು ದುಬಾರಿ ಮಾಡಿದೆ

ಎಸ್‌ಎಫ್‌ಐ ಶೈಕ್ಷಣಿಕ ಜಾಥಾ

-

Ashok Nayak Ashok Nayak Oct 25, 2025 12:27 AM

ಬಾಗೇಪಲ್ಲಿ: ರಾಜ್ಯ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳಕ್ಕಾಗಿ, ಖಾಲಿ ಇರುವ ಉದ್ಯೋ ಗದ ಭರ್ತಿಗಾಗಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯಬೇಕಾದ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಮಾವೇಶ ಅಕ್ಟೋಬರ್ ೨೯ ಹಾಗೂ ೩೦ ರಂದು ಹಾವೇರಿ ಗುರುಭವನದಲ್ಲಿ  ಎಸ್. ಎಫ್.ಐ ರಾಜ್ಯ ಸಮಿತಿ ವತಿಯಿಂದ "ಶಿಕ್ಷಣ ಉಳಿಸಿ ಹಾಸ್ಟೆಲ್ ಬಲಪಡಿಸಿ" ಘೋಷವಾಕ್ಯ ದಡಿಯಲ್ಲಿ  ಶೈಕ್ಷಣಿಕ ಜಾಥಾ ಯಶಸ್ವಿಯಾಗಿ ನೆರವೇರಿಸುವಂತೆ ಎಂದು ಬಾಗೇಪಲ್ಲಿ ತಾಲ್ಲೂಕು ಎಸ್. ಎಫ್.ಐ ಅದ್ಯಕ್ಷ ಸೋಮಶೇಖರ್ ತಿಳಿಸಿದರು.

ಬಾಗೇಪಲ್ಲಿ ಪಟ್ಟಣದಲ್ಲಿರುವ ಜಿ.ವಿ.ಶ್ರೀರಾಮರೆಡ್ಡಿ ಪುತ್ಥಳಿಗೆ ಹೂವಿನ ಹಾರ ಹಾಕುವ ಮೂಲಕ ಚಾಲನೆ ನೀಡಿದರು.

ತದನಂತರ ಮಾತನಾಡಿ ಶಿಕ್ಷಣದ ವ್ಯಾಪಾರೀಕರಣ, ಕೇಂದ್ರಿ?ಕರಣ, ಭ್ರಷ್ಟಾಚಾರ ಹಾಗೂ ಪ್ರಜಾ ಸತ್ತಾತ್ಮಕ ಹಕ್ಕುಗಳ ದಮನದ ವಿರುದ್ಧ ನಿರಂತರವಾಗಿ ಎಸ್ ಎಫ್ ಐ ಹೋರಾಟ ರೂಪಿಸುತ್ತಾ ಬಲಿಷ್ಠ ವಿದ್ಯಾರ್ಥಿ ಚಳವಳಿಯನ್ನು ಎಸ್ ಎಫ್ ಐ ಮುನ್ನಡೆಸುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಖಾಸಗಿ ಶಾಲೆಗಳು ನಾಯಿಕೊಡೆಯಂತೆ ತಲೆ ಎತ್ತಿ ನಿಂತು ಶಿಕ್ಷಣವನ್ನು ದುಬಾರಿ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಅ.26ಕ್ಕೆ ಸ್ಮೈಲ್ಸ್ ಆಸ್ಪತ್ರೆ ವತಿಯಿಂದ ಉಚಿತ ಫೈಲ್ಸ್ ತಪಾಸಣಾ ಶಿಬಿರ

ಹಲವಾರು ಸರ್ಕಾರಿ ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು ಸರ್ಕಾರಗಳು ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇದು ಖಂಡನೀಯ ಎಂದರು.

ಎಸ್. ಎಫ್.ಐ ಜಿಲ್ಲಾದ್ಯಕ್ಷ ಸೋಮಶೇಖರ್ ಮಾತನಾಡಿ “ರಾಜ್ಯ, ಕೇಂದ್ರ ಸರ್ಕಾರಗಳು ವಿದ್ಯಾರ್ಥಿ ಗಳಿಗೆ ವೈಜ್ಞಾನಿಕವಾಗಿ ಒಂದು ಶಿಕ್ಷಣ ನೀತಿಯನ್ನು ಸರ್ಕಾರ ವಿದ್ಯಾರ್ಥಿಗಳಿಗೆ ಜಾರಿ ಮಾಡುತ್ತಿಲ್ಲ ದಿನದಿಂದ ದಿನಕ್ಕೆ ಶಿಕ್ಷಣ ಕ್ಷೇತ್ರ ಸಂಪೂರ್ಣ ಖಾಸಗಿಕರಣವಾಗುತ್ತಿದೆ. ಖಾಸಗಿಕರಣದ ನೆಪದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನೆ ಕೇಸರಿಕರಣ ಮಾಡುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಇದು ಸಂವಿಧಾನದ ಆಶಯಗಳನ್ನು ಹೊಂದಿರುವ ದೇಶವಾಗಿದೆ ಎಲ್ಲರೂ ಸಂವಿಧಾನದ ಭಾಗವಾಗಿಯೇ ಇರಬೇಕು ವಿನಃ ಯಾವುದೋ ಕೋಮುವಾದಿ ಸಂಘಗಳು ಹೇಳುವ ಹಾಗೆ ವ್ಯವಸ್ಥೆ ಸೃಷ್ಟಿ ಮಾಡುವುದಲ್ಲ” ಎಂದು ಹೇಳಿ ಕಿಡಿಕಾರಿದರು.

“ರಾಜ್ಯದಲ್ಲಿ ಇರುವ ವಸತಿ ನಿಲಯಗಳಲ್ಲಿ ಸರಿಯಾದ ಮೂಲಸೌಕರ್ಯಗಳನ್ನು ಒದಗಿಸಲಾಗದೆ ಬಡ ರೈತ ಕಾರ್ಮಿಕ ಮಕ್ಕಳನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ವಸತಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ” ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಿಪಿಐಎಂ ತಾಲ್ಲೂಕು ಮುಖಂಡರಾದ ರಘುರಾಮ ರೆಡ್ಡಿ ಚನ್ನರಾಯಪ್ಪ, ಮುಸ್ತಫಾ ಸೇರಿ ವಿವಿಧ ಕಾಲೇಜು ಎಸ್. ಎಫ್.ಐ ವಿದ್ಯಾರ್ಥಿಗಳು ಹಾಜರಿದ್ದರು.