ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಾನು ಸತ್ತರೆ ಒಂಟಿಯಾಗ್ತಾಳೆ ಎಂದು ಪತ್ನಿಯನ್ನೇ ಕೊಲೆಗೈದ ಇಸ್ರೋ ನಿವೃತ್ತ ಉದ್ಯೋಗಿ!

Bengaluru Murder Case: ಬೆಂಗಳೂರು ಹೊರವಲಯದ ಆವಲಹಳ್ಳಿ ಅಪಾರ್ಟ್‌ನಲ್ಲಿ ಕೊಲೆ ನಡೆದಿದೆ. ಅನಾರೋಗ್ಯ ಸಮಸ್ಯೆಯಿಂದ ವೃದ್ಧ ವ್ಯಕ್ತಿಯೊಬ್ಬ, ತಾನು ಆತ್ಮಹತ್ಯೆ ಮಾಡಿಕೊಂಡರೆ ಪತ್ನಿ ಒಂಟಿಯಾಗುತ್ತಾಳೆ ಎಂಧು ಆಕೆಯನ್ನು ಕೊಲೆ ಮಾಡಿದ್ದು, ನಂತರ ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತಾನು ಸತ್ತರೆ ಒಂಟಿಯಾಗ್ತಾಳೆ ಎಂದು ಪತ್ನಿಯನ್ನೇ ಕೊಲೆಗೈದ!

ಕೊಲೆಯಾದ ಮಹಿಳೆ ಸಂಧ್ಯಾ, ಆಕೆಯ ಪತಿ ನಾಗೇಶ್ವರ್‌ ರಾವ್‌. -

Prabhakara R
Prabhakara R Feb 18, 2026 8:35 PM

ಬೆಂಗಳೂರು: ತಾನು ಸತ್ತರೆ ಪತ್ನಿ ಒಂಟಿಯಾಗುತ್ತಾಳೆ ಎಂದು ಚಿಂತಿಸಿದ ವೃದ್ಧ ಪತಿಯೊಬ್ಬ, ಆಕೆಯನ್ನು ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru Murder Case) ಆವಲಹಳ್ಳಿ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಸಂಧ್ಯಾ (65) ಕೊಲೆಯಾದ ಮಹಿಳ. ಇಸ್ರೋ ನಿವೃತ್ತ ಉದ್ಯೋಗಿ ನಾಗೇಶ್ವರ್‌ ರಾವ್‌ ಆರೋಪಿಯಾಗಿದ್ದಾರೆ.

ಇಂದು ಬೆಳಗ್ಗೆ ಟವಲ್‌ನಿಂದ ಪತ್ನಿಯ ಕತ್ತು ನಾಗೇಶ್ವರ್‌ ರಾವ್‌ ಕೊಲೆ ಮಾಡಿದ್ದಾರೆ. ಮೂರು ವರ್ಷಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ದಂಪತಿ ವಾಸವಿದ್ದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್‌ ರಾವ್‌ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದರು. ಆದರೆ, ತಾನು ಆತ್ಮಹತ್ಯೆ ಮಾಡಿಕೊಂಡರೆ ಪತ್ನಿ ಒಂಟಿಯಾಗುತ್ತಾಳೆ. ಆಕೆಯನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂದು ತೀರ್ಮಾನಿಸಿ ಪತ್ನಿಯನ್ನು ಹತ್ಯೆ ಮಾಡಲು ಪ್ಲ್ಯಾನ್‌ ಮಾಡಿದ್ದರು.

ಈ ಪ್ಲ್ಯಾನ್‌ನಂತೆ ಇಂದು ಬೆಳಗ್ಗೆ 11 ಗಂಟೆಗೆ ಟವಲ್‌ನಿಂದ ಕತ್ತು ಬಿಗಿದು ಪತ್ನಿಯನ್ನು ಹತ್ಯೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಧೈರ್ಯ ಸಾಲದೇ ಕಿರುಚಿಕೊಂಡು ಹೊರಗೆ ಬಂದಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಬಂದು ನೋಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಪ್ರೇಮಿಗಳ ದಿನವೇ ಪತ್ನಿಯ ಕೊಲೆ; ದರೋಡೆಯ ಕಥೆ ಕಟ್ಟಿದ ಆರೋಪಿ ಪತಿ ಸಿಕ್ಕಿ ಬಿದ್ದಿದ್ದು ಹೇಗೆ?

ಸಂಧ್ಯಾ ಮೃತದೇಹವನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪುತ್ರಿ ವಿದೇಶದಲ್ಲಿದ್ದು ಆಕೆಗೆ ಮಾಹಿತಿ ತಿಳಿಸಲಾಗಿದೆ. ಆವಲಹಳ್ಳಿ ಪೊಲೀಸ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ನಾಗೇಶ್ವರ್‌ ರಾವ್‌ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಾಡಿಗೆ ಮನೆಯಲ್ಲಿ ಮಂಗಳಮುಖಿ ಜತೆ ಯುವಕ ಅನುಮಾನಾಸ್ಪದ ಸಾವು

ಬಳ್ಳಾರಿ: ಪ್ರೇಮಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬಳ್ಳಾರಿ ನಗರದ ಕೆಎಂಎಫ್‌ ಡೈರಿ ಕ್ರಾಸ್ ಬಳಿ ನಡೆದಿದೆ. ಮಂಗಳಮುಖಿ ಸುಹಾಸಿನಿ ಹಾಗೂ ಯುವಕ ಶೇಖರ್ ಅಲಿಯಾಸ್ ಮಣಿ ಮೃತರು. ನೇಣು ಬೀಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದ ಶೇಖರ್ ಅಲಿಯಾಸ್ ಮಣಿ‌ (31) ಹಾಗೂ ಬಳ್ಳಾರಿ ತಾಲೂಕಿನ ಚಾಗನೂರ ಗ್ರಾಮದ ಮಂಗಳಮುಖಿ ಸುಹಾಸಿನಿ (29) ಹಲವು ವರ್ಷಗಳಿಂದ ಒಟ್ಟಿಗೆ ವಾಸವಾಗಿದ್ದರು. ಮಣಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಸುಹಾಸಿನಿ ಮಂಗಳಮುಖಿ ಎಂದು ತಿಳಿದರೂ ಆಕೆಯನ್ನು ಶೇಖರ್ ಪ್ರೀತಿಸುತ್ತಿದ್ದ. ಇಬ್ಬರೂ ಕಳೆದ 6 ವರ್ಷಗಳಿಂದ ಬಾಡಿಗೆ ಮನೆಯಲ್ಲಿವಾಸವಾಗಿದ್ದರು. ಆದರೆ, ಇಬ್ಬರೂ ಇದೀಗ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

Road Accident: ಚನ್ನರಾಯಪಟ್ಟಣದಲ್ಲಿ ಸ್ಕೂಟಿ- ಬೈಕ್‌ ಡಿಕ್ಕಿ, ಇಬ್ಬರು ಸವಾರರ ಸಾವು

ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸುಹಾಸಿನಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಹಣಕ್ಕಾಗಿ ಜತೆಗಿದ್ದ ಮಣಿಯೇ ಸುಹಾಸಿನಿಯನ್ನ ಕೊಂದಿದ್ದಾನೆ ಎಂದು ಆಕೆಯ ಪೋಷಕರು ಆರೋಪ ಮಾಡುತ್ತಿದ್ದಾರೆ.