ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

1 ಮಿಲಿಯನ್ ಕಲಿಕಾರ್ಥಿಗಳಿಗೆ ಭವಿಷ್ಯದ ಎಐ ಕೌಶಲ್ಯಗಳನ್ನು ಕಲಿಸುವ ಉದ್ದೇಶದಿಂದ ಭಾರತದಲ್ಲಿ ಸರ್ವೀಸ್‌ನೌ ಯೂನಿವರ್ಸಿಟಿ ಕಾರ್ಯಾರಂಭ

ಶೃಂಗಸಭೆಯಲ್ಲಿ ಸರ್ವೀಸ್‌ನೌ ಸಂಸ್ಥೆಯು 2027ರ ವೇಳೆಗೆ ಭಾರತದಲ್ಲಿ 1 ಮಿಲಿಯನ್ ಕಲಿಕಾರ್ಥಿ ಗಳಿಗೆ ಭವಿಷ್ಯ ಸಿದ್ಧ ಎಐ ಕೌಶಲ್ಯವನ್ನು ಒದಗಿಸುವ ತನ್ನ ದೃಷ್ಟಿಕೋನವನ್ನು ತಿಳಿಸಿತು. ಸಂಸ್ಥೆಯು ಜಾಗತಿಕವಾಗಿ 1 ಮಿಲಿಯನ್ ಕಲಿಕಾರ್ಥಿಗಳನ್ನು ತಲುಪುವ ಗುರಿಯನ್ನು ಹೊಂದಿದ್ದು, ಅದಕ್ಕೆ ಈ ಯೋಜನೆಯು ಕೊಡುಗೆ ನೀಡಲಿದೆ. ಪ್ರಸ್ತುತ, ಈ ಕಲಿಕಾ ವೇದಿಕೆಯಲ್ಲಿ 3,18,000 ಸಕ್ರಿಯ ಕಲಿಕಾರ್ಥಿ ಗಳು, 1,16,000 ಪ್ರಮಾಣಿತ ವೃತ್ತಿಪರರು ಇದ್ದಾರೆ.

ಭಾರತದಲ್ಲಿ ಸರ್ವೀಸ್‌ನೌ ಯೂನಿವರ್ಸಿಟಿ ಕಾರ್ಯಾರಂಭ

-

Ashok Nayak Ashok Nayak Oct 3, 2025 11:58 PM

ಹೊಸ ಕಲಿಕಾ ವೇದಿಕೆಯು ಭಾರತದ ಎಐ ಪ್ರತಿಭಾ ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡಲಿದೆ

ಉದ್ಯಮ ರೂಪಾಂತರಕ್ಕಾಗಿ ಕೆಲಸ ಮಾಡುವ ಪ್ರತಿಷ್ಠಿತ ಎಐ ಕಂಪನಿ ಆಗಿರುವ ಸರ್ವೀಸ್‌ನೌ ಇಂದು ಈ ಎಐ ಆಧರಿತ ಜಗತ್ತಿನಲ್ಲಿ ಎಐ ಕೌಶಲಗಳುಳ್ಳ ಪ್ರತಿಭಾ ಸಂಪನ್ಮೂಲಗಳ ಕೊರತೆಯನ್ನು ನೀಗಿಸಲು ಭಾರತದಲ್ಲಿ ವಿಶಿಷ್ಟ ಎಐ ಕಲಿಕಾ ವೇದಿಕೆ ಆಗಿರುವ ಸರ್ವೀಸ್‌ನೌ ಯೂನಿವರ್ಸಿಟಿ ಆರಂಭಿಸಿರುವುದಾಗಿ ಘೋಷಿಸಿದೆ.

ಹೈದರಾಬಾದ್‌ನಲ್ಲಿ ನಡೆದ ಮೊದಲ ಸರ್ವೀಸ್‌ನೌ ಎಐ ಕೌಶಲ್ಯ ಶೃಂಗಸಭೆಯಲ್ಲಿ ಈ ಸರ್ವೀಸ್‌ ನೌ ಯೂನಿವರ್ಸಿಟಿ ಆರಂಭಿಸಿರುವುದಾಗಿ ಘೋಷಿಸಲಾಯಿತು. ಈ ಕಾರ್ಯಕ್ರಮದಲ್ಲಿ 1,200 ವಿದ್ಯಾರ್ಥಿಗಳು ಖುದ್ದಾಗಿ ಮತ್ತು 20,000ಕ್ಕೂ ಮಂದಿ ಆನ್‌ಲೈನ್‌ ಮೂಲಕ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ, ಎಐಸಿಟಿಇ, ಫ್ಯೂಚರ್ ಸ್ಕಿಲ್ಸ್ ಪ್ರೈಮ್, ನಾಸ್ ಕಾಮ್, ತಮಿಳುನಾಡು ಕೌಶಲ್ಯ ಅಭಿವೃದ್ಧಿ ನಿಗಮ, ಸರ್ವೀಸ್‌ನೌ ಯೂನಿ ವರ್ಸಿಟಿಯ ಶೈಕ್ಷಣಿಕ ಪಾಲುದಾರರು ಮತ್ತು ಸರ್ವೀಸ್‌ನೌ ಸಂಸ್ಥೆಯ ಪಾಲುದಾರರು ಭಾಗವಹಿಸಿ ದ್ದರು.

ಇದನ್ನೂ ಓದಿ: Bangalore News: ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಶೃಂಗಸಭೆಯಲ್ಲಿ ಸರ್ವೀಸ್‌ನೌ ಸಂಸ್ಥೆಯು 2027ರ ವೇಳೆಗೆ ಭಾರತದಲ್ಲಿ 1 ಮಿಲಿಯನ್ ಕಲಿಕಾರ್ಥಿ ಗಳಿಗೆ ಭವಿಷ್ಯ ಸಿದ್ಧ ಎಐ ಕೌಶಲ್ಯವನ್ನು ಒದಗಿಸುವ ತನ್ನ ದೃಷ್ಟಿಕೋನವನ್ನು ತಿಳಿಸಿತು. ಸಂಸ್ಥೆಯು ಜಾಗತಿಕವಾಗಿ 1 ಮಿಲಿಯನ್ ಕಲಿಕಾರ್ಥಿಗಳನ್ನು ತಲುಪುವ ಗುರಿಯನ್ನು ಹೊಂದಿದ್ದು, ಅದಕ್ಕೆ ಈ ಯೋಜನೆಯು ಕೊಡುಗೆ ನೀಡಲಿದೆ. ಪ್ರಸ್ತುತ, ಈ ಕಲಿಕಾ ವೇದಿಕೆಯಲ್ಲಿ 3,18,000 ಸಕ್ರಿಯ ಕಲಿಕಾರ್ಥಿಗಳು, 1,16,000 ಪ್ರಮಾಣಿತ ವೃತ್ತಿಪರರು ಇದ್ದಾರೆ.

ಜೊತೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಸಿದ್ಧರಾಗಲು ಮತ್ತು ಪಾಲುದಾರರು ಹಾಗೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ಆರಂಭಿಕ ಹಂತದಲ್ಲಿ ವೃತ್ತಿ ನೇಮಕಾತಿ ಒದಗಿಸುವ ಮೂಲಕ ಉದ್ಯೋಗ ಪಡೆಯಲು ಸಹಾಯ ಮಾಡುವ ಕೋರ್ಸ್ ಗಳು ಲಭ್ಯವಿವೆ. ಸರ್ವೀಸ್‌ನೌ ಭಾರತದಲ್ಲಿ ನೈಪುಣ್ಯಪೂರ್ಣ ತಜ್ಞರನ್ನು ರೂಪಿಸುವಲ್ಲಿ ಹೆಚ್ಚು ಹೂಡಿಕೆ ಮಾಡಿದೆ.

ಸರ್ವೀಸ್‌ನೌ ಇಂಡಿಯಾ ಟೆಕ್ನಾಲಜಿ ಆಂಡ್ ಬಿಸಿನೆಸ್ ಸೆಂಟರ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸುಮೀತ್ ಮಾಥುರ್ ಅವರು ಮಾತನಾಡಿ, “ಸಂಸ್ಥೆಗಳು ಎಐ ಮತ್ತು ಹೊಸ ತಂತ್ರಜ್ಞಾನಗಳನ್ನು ಭಾರಿ ವೇಗವಾಗಿ ಅಳವಡಿಸಿಕೊಳ್ಳುತ್ತಿವೆ. ಆದರೆ ಈ ಬದಲಾವಣೆಯನ್ನು ಆಗುಗೊಳಿಸಲು ಬೇಕಾದ ಸಾಕಷ್ಟು ಕೌಶಲ್ಯಪೂರ್ಣ ತಜ್ಞರ ಕೊರತೆ ಎದುರಾಗಿದೆ.

ಸರ್ವೀಸ್‌ನೌ ಮಾಡಿರುವ ಸಂಶೋಧನೆ ಪ್ರಕಾರ ಎಐ ಭಾರಿ ವೇಗವಾಗಿ ಕೆಲಸಗಳನ್ನು, ಕಚೇರಿ ಗಳನ್ನು ವೇಗವಾಗಿ ರೂಪಾಂತರಿಸುತ್ತಿರುವ ಈ ಸಂದರ್ಭದಲ್ಲಿಯೂ ಶೇ.26 ಭಾರತೀಯ ಸಂಸ್ಥೆಗಳಿಗೆ ತಮ್ಮ ಜನರಿಗೆ ಭವಿಷ್ಯದಲ್ಲಿ ಯಾವ ಕೌಶಲ್ಯಗಳು ಬೇಕಾಗುತ್ತವೆ ಎಂಬುದರ ಬಗ್ಗೆ ಖಚಿತತೆ ಇಲ್ಲ. ಈ ಕೊರತೆಯನ್ನು, ಸಮಸ್ಯೆಯನ್ನು ನೀಗಿಸಲೆಂದೇ ಸರ್ವೀಸ್ ನೌ ಯೂನಿವರ್ಸಿಟಿ ಯನ್ನು ರೂಪಿಸಲಾಗಿದೆ" ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, "ಎಲ್ಲಕ್ಕೂ ಉತ್ತರಗಳನ್ನು ನೀಡುವುದು ನಮ್ಮ ಉದ್ದೇಶವಲ್ಲ. ಸ್ಪಷ್ಟತೆಯನ್ನು ಒದಗಿಸಿ, ಕಲಿಯುವ ಆಸಕ್ತಿ ಇರುವವರಿಗೆ ಸೂಕ್ತ ನೆರವು ನೀಡುವುದು ಮತ್ತು ಹೊಶ ಕೌಶಲ ಅಳವಡಿಸಿಕೊಳ್ಳಲು ಆತ್ಮವಿಶ್ವಾಸವನ್ನು ತುಂಬುವುದು ನಮ್ಮ ಗುರಿಯಾಗಿದೆ. ಪ್ರಸ್ತುತ ಅತ್ಯಂತ ಅಗತ್ಯವಾಗಿರುವ ಎಐ ಪರಿಣತಿ, ಪ್ರಾಬ್ಲಮ್ ಸಾಲ್ವಿಂಗ್ ಕೆಪಾಸಿಟಿ ಮತ್ತು ನೂತನ ಆವಿಷ್ಕಾರಗಳ ಕಡೆಗೆ ಗಮನ ಕೇಂದ್ರೀಕರಿಸುವ ಮೂಲಕ ನಾವು ಕಲಿಕಾರ್ಥಿಗಳನ್ನು ಭವಿಷ್ಯದಲ್ಲಿ ಯಶಸ್ವಿಯಾಗಲು ಸಜ್ಜುಗೊಳಿಸುತ್ತಿದ್ದೇವೆ. ಈ ಮೂಲಕ ಎಐ ಸವಾಲನ್ನು ಹೊಸ ಅವಕಾಶವಾಗಿ ಪರಿವರ್ತಿಸುತ್ತಿದ್ದೇವೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ನಾವು ಮುಂದಿನ ದಿನಗಳಲ್ಲಿ ಭವಿಷ್ಯದ ಹುದ್ದೆಗಳನ್ನು ನಿಭಾಯಿಸಬಲ್ಲ 1 ಮಿಲಿಯನ್ ಎಐ ಪರಿಣತ ವೃತ್ತಿಪರರನ್ನು ಭಾರತದಲ್ಲಿ ಸಿದ್ಧಗೊಳಿಸಲಿದ್ದೇವೆ” ಎಂದು ಹೇಳಿದರು.

ಏಜೆಂಟಿಕ್ ಎಐ ಮತ್ತು ಕೌಶಲ್ಯ ಕೊರತೆ

2025ರ ಸರ್ವೀಸ್‌ನೌ ಎಐ ಕೌಶಲ್ಯ ಸಂಶೋಧನೆಯ ಪ್ರಕಾರ, ಏಜೆಂಟಿಕ್ ಎಐ 2030ರ ವೇಳೆಗೆ ಭಾರತದಲ್ಲಿ 10.35 ಮಿಲಿಯನ್ ಗಿಂತ ಹೆಚ್ಚು ಉದ್ಯೋಗಗಳನ್ನು ಪುನರ್‌ರೂಪಿಸಲಿದೆ. ಅದೇ ಸಮಯದಲ್ಲಿ, ಎಐ ಕಾರಣದಿಂದ ಮುಂದಿನ ಐದು ವರ್ಷಗಳಲ್ಲಿ ಭಾರತವು 3 ಮಿಲಿಯನ್ ಹೊಸ ಟೆಕ್ ಉದ್ಯೋಗಿಗಳನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ.

ಉತ್ಪಾದನೆ, ರಿಟೇಲ್ ಮತ್ತು ಶಿಕ್ಷಣದಂತಹ ಉದ್ಯಮ ಕ್ಷೇತ್ರಗಳು ಈಗಾಗಲೇ ಎಐ, ವಿನ್ಯಾಸ ಮತ್ತು ಡೇಟಾ ಅನಾಲಿಟಿಕ್ಸ್ ಅನ್ನು ಸಂಯೋಜಿಸಿರುವ ಭವಿಷ್ಯದ ಹುದ್ದೆಗಳಿಗೆ ಪ್ರತಿಭೆಗಳನ್ನು ಹೊಂದು ವ ಕಡೆಗೆ ಗಮನ ಹರಿಸುತ್ತಿವೆ. ಭಾರತ ಸರ್ಕಾರದ ನ್ಯಾಷನಲ್ ಸ್ಕಿಲ್ ಗ್ಯಾಪ್ ಸ್ಟಡಿ ಅಧ್ಯಯನ ವರದಿಯು, 2,00,000–2,25,000 ಡೇಟಾ ಎಂಜಿನಿಯರ್‌ಗಳು ಮತ್ತು 40,000–50,000 ಡೇಟಾ ಸೆಕ್ಯೂರಿಟಿ ಉದ್ಯೋಗಿಗಳಿಗೆ ಬೇಡಿಕೆ ಇದ್ದು, ಈ ಬೇಡಿಕೆ ಈಡೇರದೆ ಉಳಿದಿದೆ ಎಂದು ತಿಳಿಸಿದೆ.

ಸರ್ವೀಸ್‌ನೌ ಯೂನಿವರ್ಸಿಟಿಯು ಭವಿಷ್ಯ ಸಿದ್ಧ, ಎಐ ಕೇಂದ್ರಿತ ಕೌಶಲ್ಯಗಳನ್ನು ಕಲಿಸಲಿದೆ.

ಸರ್ವೀಸ್‌ನೌ ಯೂನಿವರ್ಸಿಟಿಯು ಕಲಿಕಾರ್ಥಿಗಳಿಗೆ ಬೆಳೆಯಲು, ಹೊಂದಿಕೊಳ್ಳಲು ಮತ್ತು ಯಶಸ್ವಿಯಾಗಲು ಅನುವು ಮಾಡಿಕೊಂಡುವ ಒಂದು ಆಕರ್ಷಕ ಕಲಿಕಾ ವೇದಿಕೆಯಾಗಿದೆ. ಈ ಯೂನಿವರ್ಸಿಟಿಯು ಕೆಲಸಗಳ ಭವಿಷ್ಯವು ತಾಂತ್ರಿಕ ಪ್ರಗತಿಯ ಜೊತೆಗೆ ಮಾನವನ ಬದಲಾವಣೆ ಯ ಮೇಲೆಯೂ ಆಧರಿತವಾಗಿದೆ ಎಂಬ ನಂಬಿಕೆಯಿಂದ ಕಾರ್ಯಾಚರಣೆ ಮಾಡಲಿದೆ. ಕಲಿಕೆಯಲ್ಲಿ ಆಟದ ವಿಜ್ಞಾನವನ್ನು ಒಳಗೊಂಡಿರುವ ಈ ವೇದಿಕೆಯು ಕಲಿಕಾರ್ಥಿಗಳಿಗೆ ತಮ್ಮ ಕಂಫರ್ಟ್ ಝೋನ್ ನಿಂದ ಹೊರಬಂದು ಅಗತ್ಯವಾದ ಹೊಸ ಕೌಶಲ್ಯಗಳನ್ನು ಕಲಿಯಲು ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತದೆ.

ಎಲ್ಲರಿಗೂ ಎಐ ಕಲಿಕೆಯನ್ನು ಸುಲಭವಾಗಿಸುವುದು

ಸರ್ವೀಸ್‌ನೌ ಯೂನಿವರ್ಸಿಟಿಯು ಕಲಿಕೆಯನ್ನು ಆಕರ್ಷಕವಾಗಿ, ಆಟದಂತೆ ಆನಂದದಾಯಕ ಗೊಳಿಸಿದ್ದು, ಈ ಮೂಲಕ ವಾಸ್ತವ ಪ್ರಪಂಚದ ಹೊಸ ಕೌಶಲ್ಯಗಳನ್ನು ಕಲಿಸಲಿದೆ.

ಮೌಲ್ಯಮಾಪನಗಳು ಮತ್ತು ಡಿಜಿಟಲ್ ಕ್ರೆಡೆನ್ಷಿಯಲ್ ಗಳೊಂದಿಗೆ ಉಚಿತ, ಬೇಡಿಕೆ ಆಧರಿತ ಕೋರ್ಸ್‌ಗಳು ಲಭ್ಯ, ಇಲ್ಲಿ ಅಭಿವೃದ್ಧಿಯನ್ನು ತೋರಿಸಲು ಅಂಕಗಳು, ಬ್ಯಾಡ್ಜ್‌ ಗಳು ಮತ್ತು ರಾಂಕ್ ಗಳನ್ನು ಗಳಿಸಬಹುದು.

  • “ದಿ ಯೂನಿವರ್ಸಿಟಿ ಆಫ್ ಯೂ” ಮೂಲಕ ಎಐ ಚಾಲಿತ ಪರ್ಸನಲೈಸೇಷನ್ ಕಟೆಂಟ್ ಅನ್ನು ಒದಗಿಸುವುದು ಮತ್ತು ಸಾಧನೆಗಳ ಮೇಲೆ ನಿಗಾ ಇಡುವುದು.
  • ತಾಂತ್ರಿಕ ಮತ್ತು ಮಾನವ ಕೌಶಲ್ಯಗಳನ್ನು ಒಳಗೊಂಡ ಅತ್ಯುತ್ತಮ ಪಠ್ಯಕ್ರಮ ಲಭ್ಯ. ಎಐ ಜೊತೆಗೆ ಕಲಿಯಲು, ಬಳಸಲು ಮತ್ತು ಮುಂಚೂಣಿಯಲ್ಲಿ ನಿಲ್ಲಲು ಸಹಾಯ ಮಾಡುವ ಎಐ ಕಲಿಕಾ ಸೌಲಭ್ಯ.
  • ಭಾರತ ಕೇಂದ್ರಿತ ಹುದ್ದೆಗಳು: ಆಡಳಿತಗಾರರು, ಡೆವಲಪರ್‌ ಗಳು, ಇಂಪ್ಲಿಮೆಂಟರ್‌ ಗಳು, ಪ್ಲಾಟ್‌ಫಾರ್ಮ್ ಓನರ್ ಗಳು ಮತ್ತು ಸೆಕ್ ಆಪ್ಸ್, ಸಾಫ್ಟ್‌ ವೇರ್ ಡೆವಲಪ್‌ ಮೆಂಟ್, ಡೇಟಾ ಎಂಜಿನಿಯರಿಂಗ್ ಮತ್ತು ವೆಬ್ ಡೆವಲಪ್‌ಮೆಂಟ್‌ ನಂತಹ ವೇಗವಾಗಿ ಬೆಳೆಯುತ್ತಿರುವ ಹುದ್ದೆಗಳಿಗೆ ಪೂರಕವಾಗಿ ಕೋರ್ಸ್ ರೂಪಿಸಲಿದೆ.

ಹೆಚ್ಚಿನ ಪ್ರಯೋಜನಕ್ಕಾಗಿ ಸಹಯೋಗ

ಭಾರತದಲ್ಲಿನ ಗ್ರಾಹಕರು, ಪಾಲುದಾರರು ಮತ್ತು ಶೈಕ್ಷಣಿಕ ವಲಯದೊಂದಿಗೆ ಕಂಪನಿಯು ಹೊಂದಿರುವ ಗಾಢವಾದ ಸಹಯೋಗವನ್ನು ಸರ್ವೀಸ್‌ನೌ ಯೂನಿವರ್ಸಿಟಿಯ ಆರಂಭವು ತೋರಿಕೊಟ್ಟಿದೆ. ಯೂನಿವರ್ಸಿಟಿ ಅಕಾಡೆಮಿಕ್ ಕರಿಕುಲಮ್ ಇಂಟಿಗ್ರೇಷನ್ ಪ್ರೋಗ್ರಾಮ್ ಯೋಜನೆಯ ಮೂಲಕ, ಎಐಸಿಟಿಇ, ರಾಜ್ಯ ಉನ್ನತ ಶಿಕ್ಷಣ ಇಲಾಖೆಗಳು ಮತ್ತು ಸರ್ಕಾರಿ ಕೌಶಲ್ಯ ಸಂಸ್ಥೆಗಳಂತಹ ಪ್ರಮುಖ ಸಂಸ್ಥೆಗಳೊಂದಿಗೆ ಸಹಯೋಗ ಮಾಡಿಕೊಳ್ಳುವ ಮೂಲಕ ಸರ್ವೀಸ್‌ನೌ ಎಐ ಚಾಲಿತ ಕಲಿಕೆಗೆ ಅನುವು ಮಾಡಿಕೊಟ್ಟಿದೆ ಮತ್ತು ದೇಶದಲ್ಲಿ ವೇಗವಾಗಿ ಬದಲಾಗುತ್ತಿರುವ ಉದ್ಯೋಗಗಳಿಗೆ ತಕ್ಕಂತೆ ಪಠ್ಯಕ್ರಮಗಳನ್ನು ಹೊಸತಾಗಿಸುತ್ತಿದೆ.

ಸರ್ವೀಸ್‌ನೌ ಯೂನಿವರ್ಸಿಟಿಯು ಕಂಪನಿಯ ಜಾಗತಿಕ ಕೌಶಲ್ಯಾಭಿವೃದ್ಧಿ ಯೋಜನೆಗಳ ಭಾಗವಾಗಿ ಮೂಡಿ ಬಂದಿದ್ದು, ಇದು ಭಾರತದ ಯುವಕರಿಗೆ ಹೊಸ ತಂತ್ರಜ್ಞಾನ ಮತ್ತು ಅವಕಾಶಗಳನ್ನು ಹೊಂದಲು ಅನುವು ಮಾಡಿಕೊಡಲಿದೆ. ಸರ್ವೀಸ್‌ನೌ ಸಂಸ್ಥೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಭಾರತವು ಕಂಪನಿಯ ಪ್ರತಿಭಾ ಸಂಪನ್ಮೂಲ ಬದಲಾವಣೆಯ ತಂತ್ರದ ಕೇಂದ್ರ ಭಾಗದಲ್ಲಿದೆ. ಸರ್ವೀಸ್‌ನೌ ಯೂನಿವರ್ಸಿಟಿಯ ಆರಂಭದೊಂದಿಗೆ, ಕಂಪನಿಯು ಭಾರತೀಯ ಕಲಿಕಾರ್ಥಿಗಳಿಗೆ ಭವಿಷ್ಯ ಸಿದ್ಧ ಎಐ ಕೌಶಲ್ಯಗಳು, ಅಭಿವೃದ್ಧಿ ಅಕಾಶ ಮತ್ತು ಡಿಜಿಟಲ್ ಆರ್ಥಿಕತೆಗೆ ಸೂಕ್ತವಾದ ವೃತ್ತಿಗಳನ್ನು ಹೊಂದಲು ಮಾರ್ಗಗಳನ್ನು ಹಾಕಿಕೊಡಲಿದೆ.

ಸರ್ವೀಸ್‌ನೌ ಯೂನಿವರ್ಸಿಟಿಯು ಈಗ ಉದ್ಯೋಗಿಗಳು, ಗ್ರಾಹಕರು, ಪಾಲುದಾರರು ಮತ್ತು ಖಾಸಗಿ ವ್ಯಕ್ತಿಗಳು ಸೇರಿದಂತೆ ಭಾರತದ ಎಲ್ಲಾ ಕಲಿಕಾರ್ಥಿಗಳಿಗೆ ಲಭ್ಯವಿದೆ.