ಸದ್ದಿಲ್ಲದೆ ಹಸೆಮಣೆಗೇರಲು ಸಜ್ಜಾದ ರಶ್ಮಿಕಾ ಮಂದಣ್ಣ; ಹೈದರಾಬಾದ್‌ನಲ್ಲಿ ಗುಟ್ಟಾಗಿ ನಡೆದ ನಿಶ್ವಿತಾರ್ಥ?
Rashmika Mandanna: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ನಿಶ್ಚಿತಾರ್ಥ ಹೈದರಾಬಾದ್‌ನಲ್ಲಿ ಗುಟ್ಟಾಗಿ ನಡೆದಿದೆ ಎನ್ನುವ ವದಂತಿ ಹರದಿದೆ. ಕೆಲವೇ ಕೆಲವು ಆತ್ಮೀಯರ ಸಮ್ಮುಖದಲ್ಲಿ ವಿಜಯ್ ದೇವರಕೊಂಡ ನಿವಾಸದಲ್ಲಿ ಸಮಾರಂಭ ನಡೆದಿದೆ ಎನ್ನಲಾಗುತ್ತಿದೆ.

-

ಹೈದರಾಬಾದ್: ಸದ್ದಿಲ್ಲದೆ ಮತ್ತೊಂದು ಶುಭಕಾರ್ಯವೊಂದು ಚಿತ್ರರಂಗದಲ್ಲಿ ನಡೆದಿದೆ. ಹೌದು, ನ್ಯಾಶನಲ್ ಕ್ರಶ್, ಬಹುಭಾಷಾ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ (Vijay Devarakonda) ನಡುವಿನ ನಿಶ್ಚಿತಾರ್ಥ ಶುಕ್ರವಾರ (ಅಕ್ಟೋಬರ್ 3) ಗುಟ್ಟಾಗಿ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. 2026ರ ಫೆಬ್ರವರಿಯಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಎಂದು ವರದಿಯೊಂದು ತಿಳಿಸಿದೆ. ಅದಾಗ್ಯೂ ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಹೊರ ಬಂದಿಲ್ಲ.
ವಿಜಯ್ ದೇವರಕೊಂಡ-ರಶ್ಮಿಕಾ ತಮ್ಮ ನಿಶ್ವಿತಾರ್ಥದ ಸುದ್ದಿಯನ್ನು ಗುಟ್ಟಾಗಿ ಇರಿಸಲು ಬಯಸಿದ್ದು, ಎಲ್ಲೂ ಅಧಿಕೃತವಾಗಿ ಘೋಷಿಸಿಲ್ಲ ಎಂದು ಎಂ9 ನ್ಯೂಸ್ ತಿಳಿಸಿದೆ. ಕೆಲವು ವರ್ಷಗಳಿಂದ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಹರಡಿದೆ. ಇವರಿಬ್ಬರು ರಹಸ್ಯವಾಗಿ ಜತೆಗೆ ಓಡಾಡುತ್ತಿದ್ದರೂ ಇದುವರೆಗೆ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ ಮತ್ತು ಸ್ಪಷ್ಟವಾಗಿ ನಿರಾಕರಿಸಲೂ ಇಲ್ಲ. ಅದಾಗ್ಯೂ ಇಬ್ಬರ ಮಧ್ಯೆ ಗೆಳೆತನಕ್ಕಿಂತ ಹೆಚ್ಚಿನದ್ದೇನೋ ಇದೆ ಎನ್ನುವ ಅನುಮಾನವನ್ನು ಫ್ಯಾನ್ಸ್ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Rashmika Mandanna: ಓಮನ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ರಶ್ಮಿಕಾ ಮಂದಣ್ಣ; ಪಾರ್ಟಿಯಲ್ಲಿ ವಿಜಯ್ ದೇವರಕೊಂಡ ಭಾಗಿ?
ಹಾಗೆ ನೋಡಿದರೆ ವಿಜಯ್ ದೇವರಕೊಂಡ-ರಶ್ಮಿಕಾ ಮಧ್ಯೆ ನಿಶ್ಚಿತಾರ್ಥ ನಡೆದಿದೆ ಎನ್ನುವ ವದಂತಿ ಈ ಹಿಂದೆಯೂ ಹಬ್ಬಿತ್ತು. ಬಳಿಕ ಅವರ ಆಪ್ತ ಮೂಲಗಳು ಈ ಸುದ್ದಿಯನ್ನು ನಿರಾಕರಿಸುತ್ತಲೇ ಬಂದಿದ್ದವು. ಆದರೆ ಈ ಬಾರಿ ನಿಜವಾಗಿಯೂ ನಿಶ್ಚಿತಾರ್ಥ ನಡೆದಿದೆ ಎನ್ನುವ ಚರ್ಚೆ ನಡೆಯುತ್ತಿದೆ.
ಅದಕ್ಕೆ ತಕ್ಕಂತೆ ಕೆಲವು ದಿನಗಳ ಹಿಂದೆ ರಶ್ಮಿಕಾ ಸೀರೆ ಉಟ್ಟುಕೊಂಡಿರುವ ಫೋಟೊ ಶೇರ್ ಮಾಡಿದ್ದರು. ಹಣೆಗೆ ಕುಂಕುಮ ಇಟ್ಟು ಪೋಸ್ ನೀಡಿದ್ದ ಫೋಟೊ ಇದಾಗಿದ್ದು, ದಸರಾ ಶುಭಾಶಯ ತಿಳಿಸಿದ್ದರು. ಅದಾಗಲೇ ಕೆಲವರು ಅನುಮಾನದ ವ್ಯಕ್ತಪಡಿಸಿದ್ದರು. ಅದಕ್ಕೆ ತಕ್ಕಂತೆ ಈಗ ವಿಜಯ್ ದೇವರಕೊಂಡ ಅವರ ಹೈದರಾಬಾದ್ ನಿವಾಸದಲ್ಲಿ, ಕೆಲವೇ ಕೆಲವು, ತೀರ ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದೆ. ಕೆಲವೇ ದಿನಗಳಲ್ಲಿ ಅದಿಕೃತ ಪ್ರಕಟಣೆ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
2018ರಲ್ಲಿ ತೆರೆಕಂಡ ಟಾಲಿವುಡ್‌ನ ರೊಮ್ಯಾಂಟಿಕ್ ಚಿತ್ರ ʼಗೀತ ಗೋವಿಂದಂʼನಲ್ಲಿ ಮೊದಲ ಬಾರಿಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ತೆರೆ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿನ ಇವರಿಬ್ಬರ ಜೋಡಿ ಪ್ರೇಕ್ಷಕರ ಗಮನ ಸೆಳೆದಿತ್ತು. ಚಿತ್ರ ಸುಮಾರು 5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್ ಆಫೀಸ್‌ನಲ್ಲಿ 135 ಕೋಟಿ ರೂ. ದೋಚಿಕೊಂಡಿತ್ತು. ಆ ಮೂಲಕ ಇವರು ಯಶಸ್ವಿ ಜೋಡಿ ಎನಿಸಿಕೊಂಡಿದ್ದರು. ಈ ಚಿತ್ರದ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಯಿತು ಎನ್ನಲಾಗಿದೆ.
ಅದಾದ ಬಳಿಕ ಇಬ್ಬರು ಕದ್ದುಮುಚ್ಚಿಗೆ ಒಟ್ಟಿಗೆ ಓಡಾಡಲು ಆರಂಭಿಸಿದರು. 2019ರಲ್ಲಿ ಇಬ್ಬರು ʼಡಿಯರ್ ಕಾಮ್ರೇಡ್ʼ ತೆಲುಗು ಚಿತ್ರಕ್ಕಾಗಿ ಮತ್ತೆ ತೆರೆಮೇಲೆ ಒಂದಾದರು. ಈ ಚಿತ್ರ ಅಷ್ಟೇನೂ ಸದ್ದು ಮಾಡದಿದ್ದರೂ ಈ ಜೋಡಿಯನ್ನು ಮತ್ತೊಮ್ಮೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ಅದಾದ ಬಳಿಕ ಇದುವರೆಗೆ ಇವರು ಒಟ್ಟಾಗಿ ನಟಿಸದಿದ್ದರೂ ವಿವಿಧ ಕಡೆಗಳಿಗೆ ಗುಟ್ಟಾಗಿ ಪ್ರವಾಸ ಮಾಡಿ ಅದರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯೇಕವಾಗಿ ಶೇರ್ ಮಾಡಿ ಕೊನೆಗೆ ಫ್ಯಾನ್ಸ್ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇದರ ಜತೆಗೆ ರಶ್ಮಿಕಾ ದೇವರಕೊಂಡ ಕುಟುಂಬದವರ ಜತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಹೀಗಾಗಿ ಸದ್ಯದಲ್ಲೇ ಈ ಜೋಡಿ ಹಸೆಮಣೆಗೇರಲಿದೆ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಲೇ ಇತ್ತು. ಇದೀಗ ನಿಜವಾಗಿಯೂ ಇವರ ಎಂಗೇಜ್‌ಮೆಂಟ್ ನಡೆದಿದ್ಯಾ ಎನ್ನುವುದು ಸದ್ಯದಲ್ಲೇ ಗೋತ್ತಾಗಲಿದೆ