Shakti Sangam 2026: ನವೆಂಬರ್ 27ಕ್ಕೆ ಬೆಂಗಳೂರಿನಲ್ಲಿ ʼಮಹಿಳಾ ಉದ್ಯಮಿಗಳ ಶಕ್ತಿ ಸಂಗಮʼ
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಆರ್ಟ್ ಆಫ್ ಲಿವಿಂಗ್ ಮತ್ತು ಸ್ವಕೃತ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಸಾವಿರಾರು ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ಮಹಿಳಾ ಉದ್ಯಮಿಗಳು ಬಂದು ತಮ್ಮ 100 ಮಳಿಗೆಗಳನ್ನು ತೆರೆಯಲಿದ್ದಾರೆ.
-
ಬೆಂಗಳೂರು: ಖ್ಯಾತ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿ ಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ (ಕನಕಪುರ ರಸ್ತೆ) ನವೆಂಬರ್ 27ರಂದು ಮಹಿಳಾ ಉದ್ಯಮಿಗಳ ಸಮಾವೇಶ ಶಕ್ತಿ ಸಂಗಮ ನಡೆಯಲಿದೆ. ಆರ್ಟ್ ಆಫ್ ಲಿವಿಂಗ್ ಮತ್ತು ಸ್ವಕೃತ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಸಾವಿರಾರು ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ. ತಮ್ಮ ಉತ್ಪನ್ನಗಳ ಪ್ರದರ್ಶನ ನಡೆಸಲಿದ್ದಾರೆ.
ಈ ಸಂದರ್ಭ ಯುವ ಮಹಿಳಾ ಉದ್ಯಮಿಗಳಿಗೆ ವಿಶೆಷ ಕಾರ್ಯಾಗಾರಗಳು ನಡೆಯಲಿವೆ. ರವಿಶಂಕರ್ ಗುರೂಜಿಯವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾರ್ವಜನಿಕರಿಗೆ ಈ ಮೇಳಕ್ಕೆ ಉಚಿತ ಪ್ರವೇಶ ಇದೆ ಎಂದು ಸ್ವಕೃತ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಿ ಮಾಣಿಕ್ ಪಟವರ್ಧನ್ ಅವರು ತಿಳಿಸಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ಮಹಿಳಾ ಉದ್ಯಮಿಗಳು ಬಂದು ತಮ್ಮ 100 ಮಳಿಗೆಗಳನ್ನು ತೆರೆಯಲಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಮಹಾರಾಷ್ಟ್ರದಿಂದಲೂ ಬರಲಿದ್ದಾರೆ ಎಂದು ಮಾಣಿಕ್ ಪಟವರ್ಧನ್ ವಿವರಿಸಿದ್ದಾರೆ.