Brahman Mahasangh: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯ ಮಾಧ್ಯಮ ವಕ್ತಾರರಾಗಿ ಶಶಿಕಿರಣ್ ದೇಶಪಾಂಡೆ ನೇಮಕ
Shashikiran Deshpande: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಕರ್ನಾಟಕ ರಾಜ್ಯದ ಮಾಧ್ಯಮ ವಕ್ತಾರನ್ನಾಗಿ ಶಶಿಕಿರಣ್ ದೇಶಪಾಂಡೆ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್ ತಿಳಿಸಿದ್ದಾರೆ. ಇವರ ಸೇವಾವಧಿ 2028 ಮಾರ್ಚ್ 31 ರವೆರೆಗೆ ಇರಲಿದೆ.


ಬೆಂಗಳೂರು: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ (akhil bhartiya brahman mahasangh) ಕರ್ನಾಟಕ ಪ್ರಾಂತ್ಯಕ್ಕೆ ಹೊಸ ರಾಜ್ಯ ಮಾಧ್ಯಮ ವಕ್ತಾರರನ್ನು ನೇಮಕ ಮಾಡಲಾಗಿದೆ. 'ಗೋತ್ರದಿಂದಲ್ಲ ಗುಣದಿಂದ ಬ್ರಾಹ್ಮಣನಾಗುತ್ತಾನೆ' ಎನ್ನುವಂತೆ ಗುಣಗ್ರಾಹಿಗಳೇ ಸೇರಿ ಸಂಘಟಿಸಿರುವ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘಕ್ಕೆ ಶಶಿಕಿರಣ್ ದೇಶಪಾಂಡೆ (Shashikiran Deshpande) ಅವರನ್ನು ಕರ್ನಾಟಕ ರಾಜ್ಯದ ಮಾಧ್ಯಮ ವಕ್ತಾರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್ ಘೋಷಿಸಿದ್ದಾರೆ.
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ತಮ್ಮ ನಿಸ್ವಾರ್ಥ ಸೇವೆ ಹಾಗೂ ಸಮಾಜಮುಖಿ ಕಾರ್ಯ ಗುರುತಿಸಿ ಕರ್ನಾಟಕ ರಾಜ್ಯದ ಮಾಧ್ಯಮ ವಕ್ತಾರರನ್ನಾಗಿ ನೇಮಕ ಮಾಡಲು ಹರ್ಷವೆನಿಸುತ್ತದೆ. ತಮ್ಮ ಸೇವಾವಧಿಯು ಜುಲೈ 31ರಿಂದ 2028 ಮಾರ್ಚ್ 31 ರವೆರೆಗೆ ಇರುತ್ತದೆ.
ತಾವು ಬ್ರಾಹ್ಮಣ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುವದರ ಮೂಲಕ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವನ್ನು ತಮ್ಮ ಸಂಘಟನಾ ಶಕ್ತಿಯ ಮೂಲಕ ಬಲ ತುಂಬುತ್ತೀರಿ ಎಂದು ಆಶಾಭಾವನೆಯೊಂದಿಗೆ ತಮಗೆ ಸಂಘವು ಶುಭ ಹಾರೈಸುತ್ತದೆ ಎಂದು ಶಶಿಕಿರಣ್ ದೇಶಪಾಂಡೆ ಅವರಿಗೆ ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಪ್ರದೀಪ್ ಅವರು ಪತ್ರದ ಮೂಲಕ ತಿಳಿಸಿದ್ದಾರೆ.
ಇನ್ನು ಸಂಘದ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಜೋಶಿ ಮಾತನಾಡಿ, ದೇಶದ 22 ರಾಜ್ಯಗಳಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತನ್ನ ಕಾರ್ಯ ಚಟುವಟಿಕೆಯನ್ನು ಸಕ್ರಿಯಗೊಳಿಸಿದ್ದು, ಬ್ರಾಹ್ಮಣ ಸಮುದಾಯದ ಶ್ರಯೋಭಿವೃದ್ಧಿ ಮತ್ತು ಕ್ಷೇಮಕ್ಕಾಗಿ ಶ್ರಮಿಸುತ್ತಿರುವ ರಾಷ್ಟ್ರೀಯ ಸಂಘಟನೆ ಇದಾಗಿದೆ ಎಂದು ಹೇಳಿದ್ದಾರೆ.
Bengaluru News: ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಯಶಸ್ವಿಯಾದ ಶಾಸನತಂತ್ರ ಕಾರ್ಯಾಗಾರ