ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಚೊಚ್ಚಲ ಅರ್ಧಶತಕ ಬಾರಿಸಿ ಬೆನ್‌ ಡಕೆಟ್‌ರನ್ನು ಅಪ್ಪಿಕೊಂಡ ಆಕಾಶ್‌ ದೀಪ್‌!

ಓವಲ್ ಟೆಸ್ಟ್ ಪಂದ್ಯದ ಎರಡನೇ ದಿನ ನೈಟ್ ವಾಚ್‌ಮ್ಯಾನ್ ಆಗಿ ಬಂದಿದ್ದ ವೇಗಿ ಆಕಾಶ್ ದೀಪ್ ಮೂರನೇ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಅರ್ಧಶತಕವನ್ನು ಗಳಿಸಿದ್ದಾರೆ. 70 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ ಅವರು ಈ ಸಾಧನೆ ಮಾಡಿದ್ದಾರೆ.

ನೈಟ್‌ ವಾಚ್‌ಮ್ಯಾನ್‌ ಆಕಾಶ್‌ ದೀಪ್‌ ಚೊಚ್ಚಲ ಅರ್ಧಶತಕ!

ಚೊಚ್ಚಲ ಟೆಸ್ಟ್‌ ಅರ್ಧಶತಕವನ್ನು ಬಾರಿಸಿದ ಆಕಾಶ್‌ ದೀಪ್‌.

Profile Ramesh Kote Aug 2, 2025 6:53 PM

ಲಂಡನ್: ಐದನೇ ಟೆಸ್ಟ್‌ನ (IND vs ENG) ಎರಡನೇ ದಿನ ಆಕಾಶ್ ದೀಪ್(Akash Deep) ನಾಲ್ಕನೇ ಸ್ಥಾನದಲ್ಲಿ ನೈಟ್ ವಾಚ್‌ಮ್ಯಾನ್ ಆಗಿ ಬ್ಯಾಟಿಂಗ್‌ಗೆ ಬಂದಿದ್ದರು. ಆದರೆ, ಮೂರನೇ ದಿನವಾದ ಶನಿವಾರ ಆಕಾಶ್ ದೀಪ್ ಆಂಗ್ಲರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದರು. ಮೂರನೇ ದಿನ ಬೆಳಿಗ್ಗೆ ಆಕಾಶ್ ದೀಪ್ ಬಂದು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ನಡೆಸಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯಧಿಕ ಸ್ಕೋರ್ ಗಳಿಸಿದರು. ಅವರು 70 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಪೂರ್ಣಗೊಳಿಸಿದ್ದಾರೆ. ಆದರೆ ಅವರು 66 ರನ್ ಗಳಿಸಿ ಔಟಾದರು. ಈ ಇನಿಂಗ್ಸ್‌ನಲ್ಲಿ ಅವರು 94 ಎಸೆತಗಳನ್ನು ಎದುರಿಸಿ 12 ಬೌಂಡರಿಗಳನ್ನು ಬಾರಿಸುವ ಮೂಲಕ ಬ್ರಿಟಿಷರ ಉತ್ಸಾಹವನ್ನು ಕುಗ್ಗಿಸಿದರು. ಅಲ್ಲದೆ ಯಶಸ್ವಿ ಜೈಸ್ವಾಲ್ (Yashasvi jaiswal) ಅವರ ಜೊತೆ 107 ರನ್‌ಗಳ ಜೊತೆಯಾಟವನ್ನು ಆಡಿದರು.

ಆಕಾಶ್‌ ದೀಪ್‌ ಅವರು ಎರಡನೇ ದಿನದಾಟದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಏಕೆಂದರೆ ಬೆನ್‌ ಡಕೆಟ್‌ ಅವರನ್ನು ಸಾಕಷ್ಟು ಬಾರಿ ಸ್ಲೆಡ್ಜ್‌ ಮಾಡಿದ್ದರು. ಅಲ್ಲದೆ ಇಂಗ್ಲೆಂಡ್‌ ತಂಡದ ಪ್ರಥಮ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಆಕಾಶ್‌ ದೀಪ್‌ ಎಸೆತದಲ್ಲಿ ಬೆನ್‌ ಡಕೆಟ್‌ ಔಟ್‌ ಆಗಿದ್ದರು. ಈ ವೇಳೆ ಆಕಾಶ್‌ ದೀಪ್‌ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು ಹಾಗೂ ಬೆನ್‌ ಡಕೆಟ್‌ ಅವರ ಭುಜದ ಮೇಲೆ ಕೈ ಹಾಕಿ ನಗು ಮುಖದಲ್ಲಿ ಏನೋ ಮಾತನಾಡಿದ್ದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆಕಾಶ್‌ ದೀಪ್‌ ಅವರ ನಡೆಯನ್ನು ರಿಕಿ ಪಾಂಟಿಂಗ್‌ ಖಂಡಿಸಿದ್ದರು.

IND vs ENG: ಜಸ್‌ಪ್ರೀತ್‌ ಬುಮ್ರಾ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ಮೊಹಮ್ಮದ್‌ ಸಿರಾಜ್‌!

ಆದರೆ, ಮೂರನೇ ದಿನದಲ್ಲಿ ಅರ್ಧಶತಕ ಬಾರಿಸಿ ಬ್ಯಾಟ್‌ ಮಾಡುತ್ತಿದ್ದ ಆಕಾಶ್‌ ದೀಪ್‌ ಅವರನ್ನು ಬೆನ್‌ ಡಕೆಟ್‌ ಭುಜದ ಮೇಲೆ ಕೈ ಹಾಕಿ ಮಾತನಾಡಿಸಿದ್ದರು. ಆ ಮೂಲಕ ಆಕಾಶ್‌ ದೀಪ್‌ ಅವರ ಬ್ಯಾಟಿಂಗ್‌ ಅನ್ನು ಬೆನ್‌ ಡಕೆಟ್‌ ಹೊಗಳಿಸಿದ್ದರು. ಆ ಮೂಲಕ ಬೆನ್‌ ಕ್ರೀಡಾ ಸ್ಪೂರ್ತಿಯನ್ನು ಮೆರೆದಿದ್ದರು. ಬೆನ್‌ ಡಕೆಟ್‌ ಅವರ ನಡೆಯನ್ನು ಕ್ರಿಕೆಟ್‌ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.



ಅಂದ ಹಾಗೆ ಆಕಾಶ್‌ ದೀಪ್‌ ಅವರ ಇನಿಂಗ್ಸ್‌ ಬಗ್ಗೆ ಹೇಳುವುದಾದರೆ, ವೇಗಿಯಿಂದ ಇಂಥಾ ಪ್ರದರ್ಶನವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆಕಾಶ್ ದೀಪ್ ಅವರ ಈ ರನ್‌ಗಳು ಈ ಟೆಸ್ಟ್‌ನಲ್ಲಿ ಭಾರತಕ್ಕೆ ಬಹಳ ಮುಖ್ಯವಾಗಲಿವೆ. ಇದಕ್ಕೂ ಮೊದಲು, ಟೆಸ್ಟ್‌ನಲ್ಲಿ ಆಕಾಶ್ ದೀಪ್ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ 31 ರನ್‌ಗಳು, ಇದನ್ನು ಅವರು ಆಸ್ಟ್ರೇಲಿಯಾ ವಿರುದ್ಧ ಗಳಿಸಿದ್ದರು.



ಲಾರ್ಡ್ಸ್ ಟೆಸ್ಟ್‌ ವೇಳೆ ಆಕಾಶ್ ದೀಪ್ ತೊಡೆಸಂದು ಗಾಯದಿಂದ ಬಳಲುತ್ತಿದ್ದರು, ನಂತರ ಅವರನ್ನು ಮ್ಯಾಂಚೆಸ್ಟರ್‌ ಟೆಸ್ಟ್‌ನಿಂದ ಕೈ ಬಿಡಲಾಗಿತ್ತು. ಆದಾಗ್ಯೂ, ಅವರು ಓವಲ್‌ನಲ್ಲಿ ನಡೆದ ಐದನೇ ಟೆಸ್ಟ್‌ಗೆ ಮರಳಿದರು. ಆಕಾಶ್ ದೀಪ್ ಬೌಲಿಂಗ್‌ನಲ್ಲಿಯೂ ಮಿಂಚಿದರು. ಅವರು ಒಂದೇ ಒಂದು ವಿಕೆಟ್ ಪಡೆದರೂ ಅದ್ಭುತವಾಗಿ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದರು.

2011ರ ಬಳಿಕ ನೈಟ್‌ ವಾಚ್‌ಮ್ಯಾನ್‌ ಅರ್ಧಶತಕ ಗಳಿಸಿದ್ದು ಇದೇ ಮೊದಲು

2011ರ ನಂತರ ಭಾರತ ತಂಡದ ನೈಟ್ ವಾಚ್‌ಮ್ಯಾನ್ 50ಕ್ಕೂ ಅಧಿಕ ರನ್‌ ಗಳಿಸಿದ್ದು ಇದೇ ಮೊದಲು. 14 ವರ್ಷಗಳ ಹಿಂದೆ ಅಮಿತ್ ಮಿಶ್ರಾ ಇಂಗ್ಲೆಂಡ್ ವಿರುದ್ಧ ದಿ ಓವಲ್‌ನಲ್ಲಿ ಈ ಸಾಧನೆ ಮಾಡಿದ್ದರು. ಅವರು 84 ರನ್‌ಗಳ ಅದ್ಭುತ ಇನಿಂಗ್ಸ್‌ ಆಡಿದ್ದರು.