Bangalore News: ಹಬ್ಬಗಳ ಸಂದರ್ಭದ ಸೊನಾಟಾ ಸಂಗ್ರಹ ತಂದಿದೆ ಹೊಳಪು, ಸೂಕ್ತ ವಿನ್ಯಾಸ
ಪುರುಷರಿಗಾಗಿ ವಿನ್ಯಾಸಗೊಳಿಸಿರುವ ಕೈಗಡಿಯಾರಗಳು ಆಧುನಿಕತೆಯನ್ನು ಧ್ವನಿಸುತ್ತಿವೆ, ಇವುಗಳ ಡಯಲ್‌ಗಳು ಬಹಳ ಶ್ರೀಮಂತವಾದ ಶೈಲಿಯನ್ನು ಹೊಂದಿವೆ. ಸೊನಾಟಾದ ಹೆಗ್ಗುರುತಿನಂತೆ ಇರುವ ರೋಮನ್ ಅವರ್ ಮಾರ್ಕರ್‌ಗಳು ಇದರಲ್ಲಿ ಇವೆ. ಹಾಗೆಯೇ ಕ್ರೊಕೊ ಪ್ಯಾಟರ್ನ್‌ನ ಪಟ್ಟಿಗಳೂ ಇವೆ. ನೀಲಿ ಹಾಗೂ ಹಸಿರು ಬಣ್ಣದ ಡಯಲ್‌ಗಳು ನೋಟಕ್ಕೆ ಗಾಢತೆಯನ್ನು ತಂದು ಕೊಟ್ಟಿವೆ.

-

ಬೆಂಗಳೂರು, 29 ಸೆಪ್ಟೆಂಬರ್ 2025: ನಾಡಿನಲ್ಲಿ ಹಬ್ಬಗಳ ಋತು ಆರಂಭವಾಗಿದೆ. ಈ ಸಂದರ್ಭ ದಲ್ಲಿ ಸೊನಾಟಾ ʼಫೆಸ್ಟಿವ್ ಕಲೆಕ್ಷನ್ 2.0ʼ (ಹಬ್ಬಗಳ ಹೊತ್ತಿನ ಸಂಗ್ರಹ) ಅನಾವರಣ ಮಾಡಿದೆ. ಈ ಕೈಗಡಿಯಾರಗಳನ್ನು ಕಾಲವನ್ನು ಮತ್ತು ಸಂಪ್ರದಾಯವನ್ನು ಸಂಭ್ರಮದಿಂದ ಕಾಣುವ ಉದ್ದೇಶ ದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಉಡುಗೊರೆ ನೀಡುವುದರಲ್ಲಿ ಇರುವ ಖುಷಿಯನ್ನು ಮತ್ತೆ ಸೃಷ್ಟಿಸುವ ಈ ಕೈಗಡಿಯಾರಗಳ ಸಂಗ್ರಹವು, ಆಧುನಿಕ ವಿನ್ಯಾಸ ಹಾಗೂ ಹಬ್ಬಗಳ ಸೌಂದರ್ಯ ವನ್ನು ಒಂದೆಡೆ ತರುವ ಕೆಲಸ ಮಾಡಿದೆ. ಈ ಮೂಲಕ, ವಿಶೇಷವಾದ ಸಂದರ್ಭಗಳಿಗೆ ಇವು ಅತ್ಯಂತ ಸೂಕ್ತವಾದವುಗಳಾಗಿ, ಮರೆಯಲಾಗದ ನೆನಪುಗಳನ್ನು ಸೃಷ್ಟಿಸಿಕೊಡುವ ಆಯ್ಕೆಗಳಾಗಿವೆ.
ಪುರುಷರಿಗಾಗಿ ವಿನ್ಯಾಸಗೊಳಿಸಿರುವ ಕೈಗಡಿಯಾರಗಳು ಆಧುನಿಕತೆಯನ್ನು ಧ್ವನಿಸುತ್ತಿವೆ, ಇವುಗಳ ಡಯಲ್‌ಗಳು ಬಹಳ ಶ್ರೀಮಂತವಾದ ಶೈಲಿಯನ್ನು ಹೊಂದಿವೆ. ಸೊನಾಟಾದ ಹೆಗ್ಗುರುತಿನಂತೆ ಇರುವ ರೋಮನ್ ಅವರ್ ಮಾರ್ಕರ್‌ಗಳು ಇದರಲ್ಲಿ ಇವೆ. ಹಾಗೆಯೇ ಕ್ರೊಕೊ ಪ್ಯಾಟರ್ನ್‌ನ ಪಟ್ಟಿಗಳೂ ಇವೆ. ನೀಲಿ ಹಾಗೂ ಹಸಿರು ಬಣ್ಣದ ಡಯಲ್‌ಗಳು ನೋಟಕ್ಕೆ ಗಾಢತೆಯನ್ನು ತಂದು ಕೊಟ್ಟಿವೆ. ಡಯಲ್‌ನಲ್ಲಿ ಇರುವ ವಿವಿಧ ಬಗೆಯ ಮಾಹಿತಿ ಒದಗಿಸುವ ಅಂಶಗಳು (ಅಂದರೆ ದಿನಾಂಕ ತೋರಿಸುವುದು ಇತ್ಯಾದಿ) ಕೈಗಡಿಯಾರಗಳ ಸೌಂದರ್ಯ ಹೆಚ್ಚು ಮಾಡುವಂತಿವೆ.
ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ಮಹಿಳೆಯರಿಯಾಗಿ ರೂಪಿಸಿರುವ ಸಂಗ್ರಹವು ಬಹಳ ಸೂಕ್ಷ್ಮವಾಗಿ ರೂಪಿಸಿರುವ ಬ್ರೇಸ್‌ಲೆಟ್ ಗಳನ್ನು ಒಳಗೊಂಡಿವೆ. ರೋಸ್ ಗೋಲ್ಡ್ ಪಟ್ಟಿಗಳು ಸೌಂದರ್ಯಕ್ಕೆ ಮೆರುಗು ನೀಡುವಂತೆ ಇವೆ. ಸೂಕ್ಷ್ಮವಾದ ವಿನ್ಯಾಸ, ಪಾಲಿಶ್ ಮಾಡಲಾದ ಅಂಚುಗಳು, ಹಬ್ಬದ ಹೊಳಪು ಈ ಶ್ರೇಣಿಯ ಪ್ರತಿ ಕೈಗಡಿಯಾರ ಕೂಡ ಉಡುಗೊರೆ ನೀಡುವುದಕ್ಕೆ ಅತ್ಯಂತ ಸೂಕ್ತವಾದುದನ್ನಾಗಿ ಮಾಡಿವೆ. ಇವು ವಿಶೇಷ ಸಂದರ್ಭಗಳ ಧಿರಿಸುಗಳ ಸೌಂದರ್ಯವನ್ನು ಇನ್ನೊಂದು ಎತ್ತರಕ್ಕೆ ಒಯ್ಯುವಂತಿವೆ.
ಸೊನಾಟಾದ ಉತ್ಪನ್ನಗಳ ಮುಖ್ಯಸ್ಥ ನಿಶಾಂತ್ ಮಿತ್ತಲ್ ಅವರು “ಫೆಸ್ಟಿವ್ ಕಲೆಕ್ಷನ್ 2.0 ಎಂಬು ದು ಹಬ್ಬಗಳ ಈ ಋತುವನ್ನು ಬಹಳ ವಿಶಿಷ್ಟವಾಗಿ ಸಂಭ್ರಮಿಸುವುದಕ್ಕೆ ಸಂಬಂಧಿಸಿದೆ. ಪ್ರತಿ ಕೈಗಡಿಯಾರ ಕೂಡ ಈ ಸಂದರ್ಭದ ಖುಷಿ ಹಾಗೂ ಆಪ್ತತೆಯನ್ನು – ಅದು ಉಡುಗೊರೆ ನೀಡುವು ದಿರಲಿ, ಹೊಸ ಧಿರಿಸುಗಳನ್ನು ತೊಡುವುದಿರಲಿ ಅಥವಾ ಸುಮ್ಮನೆ ಹಬ್ಬವನ್ನು ಅನುಭವಿಸುವು ದಿರಲಿ – ಪ್ರತಿಬಿಂಬಿಸಬೇಕು ಎಂಬುದು ನಮ್ಮ ಬಯಕೆ. ಪ್ರತಿಯೊಂದು ಕೈಗಡಿಯಾರವನ್ನು ಕೂಡ ಖುಷಿಯ ಸಂದರ್ಭಕ್ಕೆ ಇನ್ನಷ್ಟು ಹೊಳಪು ನೀಡುವಂತೆ, ನೆನಪಿನಲ್ಲಿ ಇರುವ ಕ್ಷಣಗಳನ್ನು ಸೃಷ್ಟಿಸಿಕೊಡುವಂತೆ ವಿನ್ಯಾಸಗೊಳಿಸಲಾಗಿದೆ” ಎಂದು ಹೇಳಿದ್ದಾರೆ.
ಸೊನಾಟಾದ ಫೆಸ್ಟಿವ್ ಕಲೆಕ್ಷನ್ 2.0ಅನ್ನು ಸೊನಾಟಾ ಮಳಿಗೆಗಳಲ್ಲಿ ಅಥವಾ ಆನ್‌ಲೈನ್ ಮೂಲಕ (www.sonatawatches.in) ನೋಡಬಹುದು. ಹಬ್ಬದ ಆಚರಣೆಗೆ ನಿಮಗೆ ಅತ್ಯಂತ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು.