ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ‘ವಾಂತಿ ಗ್ಯಾಂಗ್’ ಕೈಚಳಕ; ಬಸ್‌ಗಳಲ್ಲಿ ಪ್ರಯಾಣಿಕರನ್ನು ಯಾಮಾರಿಸಿ ಪಿಕ್‌ಪಾಕೆಟ್‌ ಮಾಡುತ್ತಿದ್ದ ಇಬ್ಬರು ಅರೆಸ್ಟ್‌

ಬಸ್‌ಗಳಲ್ಲಿ ಕಿಟಕಿ ಪಕ್ಕ ಕೂರುವ ಪ್ರಯಾಣಿಕರನ್ನು ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು. ಮೊದಲು ಪ್ರಯಾಣಿಕರ ಬಳಿ ತೆರಳಿ, ವಾಂತಿ ಬರುತ್ತಿದೆ, ಸೀಟ್ ಬಿಟ್ಟು ಕೊಡಿ ಎಂದು ನಂಬಿಸುತ್ತಿದ್ದರು. ಆಗ ಪ್ರಯಾಣಿಕರು ಸೀಟ್‌ನಿಂದ ಎದ್ದು ಹೋಗುವಾಗ ಕೈಚಳಕ ತೋರಿ, ಹಣ, ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದರು. ಇದಕ್ಕೆ ಸಂಬಂಧಿಸಿ ಸದ್ಯ ಇಬ್ಬರ ಬಂಧನವಾಗಿದೆ.

ಬೆಂಗಳೂರಿನಲ್ಲಿ ‘ವಾಂತಿ ಗ್ಯಾಂಗ್’ ಕೈಚಳಕ; ಇಬ್ಬರು ಅರೆಸ್ಟ್‌

-

Prabhakara R
Prabhakara R Jul 24, 2026 9:49 PM

ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ‘ವಾಂತಿ ಗ್ಯಾಂಗ್’ ಪೊಲೀಸರಿಗೆ ಸಿಕ್ಕಿಬಿದ್ದಿದೆ. ವಾಂತಿ ಮಾಡುವ ನೆಪದಲ್ಲಿ ಪ್ರಯಾಣಿಕರನ್ನು ಯಾಮಾರಿಸಿ ಅವರ ಜೇಬಿಗೆ ಕನ್ನ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ವಾಂತಿ ಗ್ಯಾಂಗ್‌ ವಿರುದ್ಧ ನಗರದ ಕೇಂದ್ರ ವಿಭಾಗ ಸೇರಿ ಎರಡು ವಿಭಾಗಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಬಂಧಿತರನ್ನು ಮುಬಾರಕ್ ಪಾಷ ಮತ್ತು ಅನ್ವರ್ ಪಾಷ ಎಂದು ಗುರುತಿಸಲಾಗಿದೆ.

ಆರೋಪಿಗಳು ಮುಖ್ಯವಾಗಿ ಬಿಎಂಟಿಸಿ ಬಸ್‌ಗಳ ವಿಂಡೋ ಸೀಟ್‌ನಲ್ಲಿ ಕುಳಿತಿದ್ದ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಮೊದಲು ಪ್ರಯಾಣಿಕರ ಬಳಿ ತೆರಳಿ, ವಾಂತಿ ಬರುತ್ತಿದೆ, ಸೀಟ್ ಬಿಟ್ಟು ಕೊಡಿ ಎಂದು ನಂಬಿಸುತ್ತಿದ್ದರು. ಪ್ರಯಾಣಿಕರು ಸೀಟ್‌ನಿಂದ ಎದ್ದು ನಿಲ್ಲುತ್ತಿದ್ದಂತೆ, ಗ್ಯಾಂಗ್‌ನ ಐವರು ಸದಸ್ಯರು ಬಸ್‌ನಲ್ಲಿ ರಷ್ ಇರುವಂತೆ ನಟಿಸಿ ಪ್ರಯಾಣಿಕರ ಮೈಮೇಲೆ ಬೀಳುತ್ತಿದ್ದರು.

ಈ ವೇಳೆ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಜೇಬಿನಲ್ಲಿದ್ದ ಪರ್ಸ್, ಮೊಬೈಲ್ ಸೇರಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು. ಬಳಿಕ ಏನೂ ಆಗಿಲ್ಲ ಎಂಬಂತೆ ಗ್ಯಾಂಗ್‌ನ ಸದಸ್ಯರು ಬಸ್‌ನಿಂದ ಇಳಿದು ಪರಾರಿಯಾಗುತ್ತಿದ್ದರು ಎನ್ನಲಾಗಿದೆ.

ಆರೋಪಿಗಳ ವಿರುದ್ಧ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ದೂರುಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣಗಳ ತನಿಖೆಯನ್ನು ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತನಿಖೆ ಮುಂದುವರಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗದಗದ ಗ್ರಾಮೀಣಾಭಿವೃದ್ಧಿ ವಿವಿ ಹಾಸ್ಟೆಲ್‌ನಲ್ಲಿ MPH ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಕೊಲೆ ಶಂಕೆ!

ಆದರೆ, ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಇನ್ನೂ ಮೂವರು ಆರೋಪಿಗಳು ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.