Murder Case: ಫ್ರೀ ಫೈರ್ ಗೇಮ್ ಚಟಕ್ಕೆ ಬಿದ್ದಿದ್ದ ಅಕ್ಕನ ಮಗನನ್ನೇ ಕೊಂದ ಮಾವ!
Murder Case: ಫ್ರೀಫೈರ್ ಗೇಮ್ ಚಟಕ್ಕೆ ಬಿದ್ದಿದ್ದರಿಂದ ಬಾಲಕನನ್ನು ಮಾವ ಕೊಂದಿದ್ದಾನೆ. ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಘಟನೆ ನಡೆದಿದೆ. ಸದ್ಯ ಬಾಲಕನ ಮಾವನನ್ನು ಪೊಲೀಸರು ಬಂಧಿಸಿ, ಎಫ್ಐಆರ್ ದಾಖಲಿಸಿದ್ದಾರೆ.


ನೆಲಮಂಗಲ: ಫ್ರೀ ಫೈರ್ ಗೇಮ್ ಚಟಕ್ಕೆ ಬಿದ್ದಿದ್ದ ಅಕ್ಕನ ಮಗನನ್ನೇ ಮಾವ ಕೊಲೆ ಮಾಡಿರುವ ಘಟನೆ (Murder Case) ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ನಡೆದಿದೆ. 14 ವರ್ಷದ ಅಮೋಘ ಕೀರ್ತಿ ಕೊಲೆಯಾದ ಬಾಲಕ. ಸದ್ಯ ಪೊಲೀಸರು ಮಾವ ನಾಗಪ್ರಸಾದ್(50) ಎಂಬುವರನ್ನು ಬಂಧಿಸಿ, ಎಫ್ಐಆರ್ ದಾಖಲಿಸಿದ್ದಾರೆ.
ಮೃತ ಬಾಲಕ ನಾಗಪ್ರಸಾದ್ ಸಹೋದರಿ ಶಿಲ್ಪಾ ಮಗ. ಬಾಲಕ ಅಮೋಘ ಕೀರ್ತಿ ಕಳೆದ 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜತೆಗೆ ವಾಸವಿದ್ದ. ಈ ವೇಳೆ ಮೊಬೈಲ್ನಲ್ಲಿ ಫ್ರೀಫೈರ್ ಗೇಮ್ಗೆ ಅಡಿಕ್ಟ್ ಆಗಿದ್ದ. ಗೇಮ್ ಚಟಕ್ಕೆ ಬಿದ್ದು ಪದೇ ಪದೇ ಹಣ ಕೇಳುತ್ತಿದ್ದ. ವಾರದ ಹಿಂದೆ ಹಣ ಕೊಡುವಂತೆ ಮಾವನ ಮೇಲೆ ಹಲ್ಲೆ ಕೂಡ ಮಾಡಿದ್ದ. ಇದರಿಂದ ಬೇಸತ್ತ ನಾಗಪ್ರಸಾದ್ ಬಾಲಕನ ಕತ್ತು ಸೀಳಿ ಕೊಂದಿದ್ದಾನೆ.
ಸೋಮವಾರ ಬೆಳಗಿನ ಜಾವ 4.30ಕ್ಕೆ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ನಾಗಪ್ರಸಾದ್, ನಂತರ ಕೆರೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಆದರೆ ಎಲ್ಲಿಗೂ ಹೋಗಲು ಹಣವಿಲ್ಲದೆ ಮೆಜೆಸ್ಟಿಕ್ನಲ್ಲಿ 3 ದಿನ ಕಾಲಕಳೆದಿದ್ದಾನೆ. ನಂತರ ಸೋಲದೇವನಹಳ್ಳಿ ಠಾಣೆಗೆ ಹೋಗಿ ಶರಣಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Mumbai Murder Case: ತಂದೆಯ ಕೊಲೆಗೆ ತಾಯಿಯೇ ಕಾರಣ.. ಮಗಳಿಂದ ಹೊರ ಬಿತ್ತು ಮರ್ಡರ್ ಮಿಸ್ಟ್ರಿ!
ಚಾಲಕನ ಆತ್ಮಹತ್ಯೆ ಪ್ರಕರಣ, ಸಂಸದ ಕೆ ಸುಧಾಕರ್ ಮೇಲೆ ಅಟ್ರಾಸಿಟಿ ಕೇಸ್
ಚಿಕ್ಕಬಳ್ಳಾಪುರ: ಬಿಜೆಪಿ ಸಂಸದ ಕೆ.ಸುಧಾಕರ್ (Dr K Sudhakar) ಹೆಸರು ಬರೆದಿಟ್ಟು ಜಿಪಂ ಸಿಇಒ ಚಾಲಕ ಬಾಬು ಆತ್ಮಹತ್ಯೆ (Babu Self harming Case) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೃತ ಬಾಬು ಪತ್ನಿ ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ (Chikkaballapur) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಸುಧಾಕರ್ ವಿರುದ್ಧವೂ ಸಹ ಅಟ್ರಾಸಿಟಿ ಕೇಸ್ (atrocity case) ದಾಖಲಾಗಿದ್ದು, A1 ಆರೋಪಿಯಾಗಿದ್ದಾರೆ. ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದ ಮೂವರ ವಿರುದ್ಧವೂ ಎನ್ಎಸ್ ಸೆಕ್ಷನ್ 108, 352, 351ರ ಅಡಿ ಪ್ರಕರಣ ದಾಖಲಾಗಿದೆ.
FIRನಲ್ಲಿ ನಾಗೇಶ್, ಮಂಜುನಾಥ ಹೆಸರು ಸಹ ಉಲ್ಲೇಖಿಸಲಾಗಿದೆ. ಇದಕ್ಕೂ ಮೊದಲು ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆಯಿತು. ದೂರಿನಲ್ಲಿ ಡಾ.ಕೆ.ಸುಧಾಕರ್ ಹೆಸರು ಸೇರಿಸುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಎಫ್ ಐಆರ್‌ನ ಸುಧಾಕರ್ ಹೆಸರು ಸೇರಿಸದಂತೆ ಬಿಜೆಪಿ ಆಗ್ರಹಿಸಿತು. ಅಂತಿಮವಾಗಿ ಪೊಲೀಸರು, ಸಂಸದ ಡಾ.ಕೆ ಸುಧಾಕರ್ ಸೇರಿದಂತೆ ಮೂವರ ವಿರುದ್ಧವೂ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬಿಎನ್ಎಸ್ ಕಾಯ್ದೆ ಸೆಕ್ಷನ್ 108, 352 , 351 ಹಾಗೂ ಎಸ್‌ಸಿ ಎಸ್‌ಟಿ ಕಾಯಿದೆ ಅಡಿ ಕೇಸ್ ದಾಖಲಾಗಿದ್ದು, ಡೆತ್ ನೋಟ್‌ನಲ್ಲಿ ಹೆಸರು ಇರುವ ಸಂಸದ ಸುಧಾಕರ್, ನಾಗೇಶ್ ಮತ್ತು ಮಂಜುನಾಥ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಸಂಸದ ಸುಧಾಕರ್ ಎ1 ಆರೋಪಿಯಾಗಿದ್ದರೆ, ನಾಗೇಶ್ ಎ2, ಮಂಜುನಾಥ್ ಎ3 ಆರೋಪಿಯನ್ನಾಗಿ ಮಾಡಲಾಗಿದೆ.
ಜಿಲ್ಲಾ ಪಂಚಾಯ್ತಿಯಲ್ಲೇ ಚಾಲಕ ಅತ್ಮಹತ್ಯೆ:
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ನೌಕರ ಕಾರು ಚಾಲಕನಾಗಿದ್ದ ಬಾಬು, ಆಗಸ್ಟ್ 07ರಂದು ಜಿಲ್ಲಾ ಪಂಚಾಯತಿ ಸಭಾಂಗಣದ ಪಕ್ಕದ ಮರದಡಿಯಲ್ಲೇ ಸರ್ಕಾರಿ ಕಾರು ನಿಲ್ಲಿಸಿದ್ದಾನೆ. ಬಳಿಕ ಕಾರಿನ ಮೇಲೆ ಹತ್ತಿ ಹೊಂಗೆ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಮೃತನ ಕಾರಿನಲ್ಲಿ 4 ಪುಟಗಳ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ ನ ಮೊದಲ ಪುಟದಲ್ಲೇ, ಮೊದಲ ಸಾಲಿನಲ್ಲೇ ನನ್ನ ಸಾವಿಗೆ ಡಾ ಕೆ ಸುಧಾಕರ್ ಕಾರಣ ಹಾಗೂ ನಾಗೇಶ್ ಸೇರಿದಂತೆ ಜಿಲ್ಲಾ ಪಂಚಾಯತಿ ಲೆಕ್ಕ ಪರಿಶೋಧಕ ವಿಭಾಗದ ಎಸ್ ಡಿ ಎ ಮಂಜುನಾಥ್ ಹೆಸರನ್ನ ಉಲ್ಲೇಖಿಸಿದ್ದಾನೆ ಎಂದು ತಿಳಿದುಬಂದಿದೆ.
ಡಾ.ಕೆ ಸುಧಾಕರ್ ಎಂಪಿಯ ಮೇಲೂ ತನಿಖೆ ಮಾಡಿ. ನಾಗೇಶ್ ಹಾಗೂ ಮಂಜುನಾಥ್ ಮೇಲೆ ತನಿಖೆ ಮಾಡಿ. ನನ್ನ ಹೆಂಡತಿ ಶಿಲ್ಪಾಗೆ ನ್ಯಾಯ ಕೊಡಿಸಿ. ನಾಗೇಶ್ ಹಾಗೂ ಮಂಜುನಾಥ್ ಸುಧಾಕರ್ ಆತ್ಮೀಯರು. MLA ಪ್ರದೀಪ್ ಸರ್, ಡಿ ಸಿ ಸರ್, ಎಸ್ಪಿ ಸರ್, ಸಿಇಒ ಸರ್, ಎಡಿಸಿ ಭಾಸ್ಕರ್ ಸರ್ ನನ್ನ ಹೆಂಡತಿಗೆ ನ್ಯಾಯ ಕೊಡಿಸಿ. ನನ್ನ ಬಳಿ 35 ಲಕ್ಷ ರೂ. ಹಣ ತೆಗೆದುಕೊಂಡಿರುತ್ತಾರೆ. ಮೋಸ ಹೋದ ಕಾರಣ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: K Sudhakar: ತಮ್ಮ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆಗೆ ಶರಣಾದ ಪ್ರಕರಣ; ಸಂಸದ ಸುಧಾಕರ್ ಮೊದಲ ಪ್ರತಿಕ್ರಿಯೆ