ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bidar News: ಬೀದರ್‌ನಲ್ಲಿ ಕಾಲುವೆಗೆ ಹಾರಿ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಗೆ ಯತ್ನ, ನಾಲ್ವರ ಸಾವು, ಇಬ್ಬರು ಪಾರು

Self Harming: ಒಂದೇ ಕುಟುಂಬದ ಆರು ಮಂದಿ, ಕಾರಂಜಾ ಡ್ಯಾಮ್‌ನ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಇಬ್ಬರನ್ನು ರಕ್ಷಣೆ ಮಾಡಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸಚಿವ ಈಶ್ವರ್‌ ಖಂಡ್ರೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಬೀದರ್‌ನಲ್ಲಿ ಕಾಲುವೆಗೆ ಹಾರಿ ಒಂದೇ ಕುಟುಂಬದ 4 ಮಂದಿ ಆತ್ಮಹತ್ಯೆ

-

Prabhakara R Prabhakara R Sep 9, 2025 7:44 PM

ಬೀದರ್: ಕಾಲುವೆಗೆ ಜಿಗಿದು ಒಂದೇ ಕುಟುಂಬದ ಆರು ಜನರು ಆತ್ಮಹತ್ಯೆಗೆ ಯತ್ನಿಸಿರುವುದು ಜಿಲ್ಲೆಯ (Bidar News) ಭಾಲ್ಕಿ ತಾಲ್ಲೂಕಿನ ಮರೂರು ಬಳಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟು, ಇಬ್ಬರು ಪ್ರಣಾಪಾಯದಿಂದ ಪಾರಾಗಿದ್ದಾರೆ.

ಬೀದರ್‌ನ​ ​ಮೈಲೂರಿನ ಶಿವಮೂರ್ತಿ(45), ಶ್ರೀಕಾಂತ್(8), ಹೃತಿಕ್(4), 7 ತಿಂಗಳ ಮಗು ರಾಕೇಶ್ ಮೃತ ದುರ್ವೈವಿಗಳು. ಅದೃಷ್ಟವಶಾತ್ ತಾಯಿ ರಮಾಬಾಯಿ(42) ಹಾಗೂ ಪುತ್ರ ಶ್ರೀಕಾಂತ್(7) ಬದುಕಿಳಿದಿದ್ದಾರೆ.

ದಂಪತಿ ತಮ್ಮ ನಾಲ್ವರು ಮಕ್ಕಳೊಂದಿಗೆ ಒಂದೇ ಸಾರಿ ಕಾಲುವೆಗೆ ಹಾರಿದ್ದು, ತಂದೆ ಹಾಗೂ ಮೂರು ಮಕ್ಕಳು‌ ನಾಲೆಯಲ್ಲೇ ದಾರುಣವಾಗಿ ಸಾವುಕಂಡಿದ್ದಾರೆ. ಇನ್ನು ತಾಯಿ ಹಾಗೂ ಇನ್ನೊಬ್ಬ ಮಗನನ್ನು ಸ್ಥಳೀಯರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲಬಾಧೆಗೆ ಮನನೊಂದು ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಒಂದೇ ಕುಟುಂಬದ ಆರು ಮಂದಿ, ಕಾರಂಜಾ ಡ್ಯಾಮ್‌ನ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಇಬ್ಬರನ್ನು ರಕ್ಷಣೆ ಮಾಡಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸಚಿವ ಈಶ್ವರ್‌ ಖಂಡ್ರೆ ಹಾಗೂ ಧನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಶಾಲೆಯಲ್ಲಿ ಇಬ್ಬರು ಮಕ್ಕಳ ಮಧ್ಯೆ ಗಲಾಟೆ; ಕಟ್ಟಿಗೆ ಇರಿತದಿಂದ ಕಣ್ಣು ಕಳೆದುಕೊಂಡ ವಿದ್ಯಾರ್ಥಿ!

_Bagalkot News

ಬಾಗಲಕೋಟೆ: ಸರ್ಕಾರಿ ಶಾಲೆಯಲ್ಲಿ ಇಬ್ಬರು ಮಕ್ಕಳ ಮಧ್ಯೆ ಗಲಾಟೆ ವೇಳೆ ಕಟ್ಟಿಗೆ ಇರಿತದಿಂದ ವಿದ್ಯಾರ್ಥಿಯೊಬ್ಬ ಕಣ್ಣು ಕಳೆದುಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಢವಳೇಶ್ವರ ಗ್ರಾಮದ ಮೊರಬದ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

1ನೇ ತರಗತಿ ವಿದ್ಯಾರ್ಥಿಯಿಂದ 5ನೇ ತರಗತಿ ವಿದ್ಯಾರ್ಥಿ ಕಣ್ಣಿಗೆ ಕಟ್ಟಿಗೆ ಇರಿಯಲಾಗಿದೆ. 5ನೇ ತರಗತಿಯ ಸಮರ್ಥ ಎಂಬ ಬಾಲಕ ಬಲಗಣ್ಣು ಕಳೆದುಕೊಂಡಿದ್ದಾನೆ. ಭೀಮಪ್ಪ ಕಟ್ಟಿಗೆಯಿಂದ ಇರಿದಿರುವ ವಿದ್ಯಾರ್ಥಿಯಾಗಿದ್ದಾನೆ.

ತೀವ್ರ ಗಾಯದ ಹಿನ್ನೆಲೆಯಲ್ಲಿ ಕಣ್ಣಿನ ಗುಡ್ಡೆಯನ್ನೇ ವೈದ್ಯರು ತೆಗೆದಿದ್ದಾರೆ. ಪೆನ್ ವಾಪಸ್‌ ಕೇಳುವ ವಿಚಾರದಲ್ಲಿ ಮಕ್ಕಳಿಬ್ಬರ ನಡುವೆ ಗಲಾಟೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಸದ್ಯ ಬೆಳಗಾವಿ ಜಿಲ್ಲೆಯ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕಣ್ಣು ಕಳೆದುಕೊಂಡ ಮಗನ ಸ್ಥಿತಿ ಕಂಡು ಕಂಗಾಲಾಗಿರೋ ಸಮರ್ಥನ ಪೋಷಕರು, ಶಿಕ್ಷಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶಾಲೆಯಲ್ಲಿ ಮಕ್ಕಳ ನಡುವೆ ಆಗಾಗ ಜಗಳ ನಡೆಯುತ್ತಿದ್ದರೂ ಕ್ರಮ ವಹಿಸಿಲ್ಲ ಎಂದು ಶಿಕ್ಷಕರ ವಿರುದ್ಧ ದೂರು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Actor Darshan: ಬಳ್ಳಾರಿ ಜೈಲಿಗೆ ನಟ ದರ್ಶನ್‌ ಸ್ಥಳಾಂತರಕ್ಕೆ ಕೋರ್ಟ್‌ ನಕಾರ; ಹಾಸಿಗೆ, ದಿಂಬು ನೀಡಲು ಅನುಮತಿ

ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮತ್ತೊಂದೆಡೆ ಜಮಖಂಡಿ ಎಸಿ ಶ್ವೇತಾ ಬಿಡಿಕರ್‌ಗೂ ಪೋಷಕರು ದೂರು ಸಲ್ಲಿಸಿದ್ದಾರೆ. ಕರ್ತವ್ಯ ಲೋಪ ತೋರಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಎಸಿ ನೀಡಿದ್ದಾರೆ. ಮುಖ್ಯ ಶಿಕ್ಷಕಿ ಜಯಶ್ರೀ ಹಾಗೂ ಅತಿಥಿ ಶಿಕ್ಷಕಿ ಶಿಲ್ಪಾ ಎಂಬುವವರ ವಿರುದ್ಧ ಮಹಾಲಿಂಗಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.