IND vs AUS: ಗಾಯಾಳು ಶ್ರೇಯಸ್ ಅಯ್ಯರ್ ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ಔಟ್! ವರದಿ
Shreyas Iyer Injury Updates: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಭಾರತ ತಂಡದ ಉಪ ನಾಯಕ ಶ್ರೇಯಸ್ ಅಯ್ಯರ್ ಅವರು ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆಂದು ವರದಿಯಾಗಿದೆ. ಅವರು ಫೀಲ್ಡಿಂಗ್ ವೇಳೆ ತಮ್ಮ ಅವರು ಪಕ್ಕೆಲಬಿನ ಗಾಯಕ್ಕೆ ತುತ್ತಾಗಿದ್ದಾರೆ.
ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ಶ್ರೇಯಸ್ ಅಯ್ಯರ್ ಔಟ್. -
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ (IND vs AUS) ವೇಳೆ ಭಾರತ ತಂಡದ ಉಪ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಗಾಯಗೊಂಡು ಮೈದಾನದಿಂದ ಹೊರನಡೆಯಬೇಕಾಯಿತು. ಹರ್ಷಿತ್ ರಾಣಾ ಅವರ ಬೌಲಿಂಗ್‌ನಲ್ಲಿ ಅಲೆಕ್ಸ್ ಕೇರಿ ಅವರ ಕ್ಯಾಚ್ ಪಡೆಯುವ ಮೇಲೆ ನೆಲಕ್ಕೆ ಬಿದ್ದು ಅಯ್ಯರ್ ತಮ್ಮ ಪಕ್ಕೆಲುಬಿಗೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕನಿಷ್ಠ ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕೆಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಂದ ಹಾಗೆ ಆಸೀಸ್ ಎದುರು ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಈ ಗೆಲುವಿನ ಶ್ರೇಯ 4 ವಿಕೆಟ್ ಕಿತ್ತಿದ್ದ ಹರ್ಷಿತ್ ರಾಣಾ, ಶತಕ ಸಿಡಿಸಿದ್ದ ರೋಹಿತ್ ಶರ್ಮಾ (Rohit sharma) ಹಾಗೂ ಅರ್ಧಶತಕ ಬಾರಿಸಿದ್ದ ವಿರಾಟ್ ಕೊಹ್ಲಿಗೆ ಸಲ್ಲಬೇಕಾಗುತ್ತದೆ.
ಶನಿವಾರ ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಇನಿಂಗ್ಸ್‌ನ 34ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತ್ತು. ಹರ್ಷಿತ್ ರಾಣಾ ಅವರ ಓವರ್‌ನ ನಾಲ್ಕನೇ ಎಸೆತದಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಕೇರಿ ಅವರ ಕ್ಯಾಚ್ ಪಡೆಯುವ ಸಲುವಾಗಿ ಶ್ರೇಯಸ್ ಅಯ್ಯರ್ ಅದ್ಭುತ ಪ್ರಯತ್ನವನ್ನು ನಡೆಸಿ ಯಶಸ್ವಿಯಾಗಿದ್ದರು. ಈ ವೇಳೆ ಅವರು ಗಾಯಕ್ಕೆ ತುತ್ತಾಗಿದ್ದರು. ನಂತರ ಅವರು ಮೈದಾನವನ್ನು ತೊರೆದಿದ್ದರು.
IND vs AUS: ಅರ್ಧಶತಕ ಸಿಡಿಸಿ ಸಚಿನ್ ತೆಂಡೂಲ್ಕರ್‌ರ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ!
"ಪಂದ್ಯದ ಸಮಯದಲ್ಲಿ ಶ್ರೇಯಸ್ ಅವರನ್ನು ಸ್ಕ್ಯಾನ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆರಂಭಿಕ ರೋಗನಿರ್ಣಯದ ಪ್ರಕಾರ, ಒಂದು ಸೆಳೆತ ಉಂಟಾಗಿದ್ದು, ಅವರು ಕನಿಷ್ಠ ಮೂರು ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾಗುತ್ತದೆ.
ಅವರು ವಾಪಸಾದ ನಂತರ ಬೆಂಗಳೂರಿನ ಎಕ್ಸ್‌ಲೆಂಟ್ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕಾಗುತ್ತದೆ. ಅವರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆಯೇ ಎಂದು ತೀರ್ಮಾನಿಸುವುದಕ್ಕೂ ಮುನ್ನ ಹೆಚ್ಚಿನ ವರದಿಗಳಿಗಾಗಿ ಕಾಯಲಾಗುತ್ತಿದೆ. ಇದು ಸ್ಟ್ರೆಸ್ ಫ್ರಾಕ್ಚರ್ ಆಗಿದ್ದರೆ, ಅದು ಹೆಚ್ಚು ಸಮಯ ತೆಗೆದುಕೊಳ್ಳಬಹುದು," ಎಂದು ಈ ಬೆಳವಣಿಗೆ ಬಗ್ಗೆ ತಿಳಿದಿರುವ ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.
IND vs AUS: ಜಸ್‌ಪ್ರೀತ್ ಬುಮ್ರಾ ಇನ್, ಮೊದಲ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಅವರ ಭಾಗವಹಿಸುವಿಕೆಯ ಬಗ್ಗೆ ಕೇಳಿದಾಗ, ಮೂಲಗಳು ಉತ್ತರಿಸಿದ್ದು: "ಇಷ್ಟು ಬೇಗ ಇದರ ಬಗ್ಗೆ ಹೇಳಲು ಸಾಧ್ಯವಿಲ್ಲ. ಅವರು ಮೂರು ವಾರಗಳಿಗೂ ಮುನ್ನ ಮರಳಿದರೆ, ತದ ನಂತರ ಈ ಬಗ್ಗೆ ಹೇಳಬಹುದು. ಒಂದು ವೇಳೆ ಬಂದರೆ, ಆಡಿಸಬಹುದು," ಎಂದು ಹೇಳಿವೆ.
ಭಾರತ ತಂಡಕ್ಕೆ 9 ವಿಕೆಟ್ ಜಯ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಕಂಡರೂ, ಹರ್ಷಿತ್ ರಾಣಾ ಅವರ ಮೋಡಿಗೆ ತತ್ತರಿಸಿ ಹೋಯಿತು. 46.4 ಓವರ್ ಗಳಿಗೆ 10 ವಿಕೆಟ್ ನಷ್ಟಕ್ಕೆ 236 ರನ್ ಕಲೆಹಾಕಲಷ್ಟೇ ಆಸೀಸ್ ತಂಡ ಶಕ್ತವಾಯಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ನಾಯಕ ಗಿಲ್ ಮತ್ತು ರೋಹಿತ್ ಶರ್ಮಾ ಅರ್ಧಶತಕದ ಉತ್ತಮ ಆರಂಭ ಒದಗಿಸಿದರು. ಗಿಲ್ ಔಟಾದ ಬಳಿಕ ಮೈದಾನಕ್ಕೆ ಬಂದ ಕೊಹ್ಲಿ, ರೋಹಿತ್ ಜೊತೆಗೂಡಿ 168 ರನ್‌ಗಳ ಅಮೋಘ ಜೊತೆಯಾಟ ನೀಡಿದರು. ಇದು ಈ ಸ್ಟಾರ್ ಜೋಡಿಯ 19ನೇ ಶತಕದ ಜೊತೆಯಾಟವಾಗಿದೆ. ಇನ್ನು ಆಸೀಸ್ ಬೌಲರ್‌ಗಳನ್ನು ಮೈದಾನದಲ್ಲಿ ನಿರಂತರವಾಗಿ ದಂಡಿಸಿದ ಈ ಜೋಡಿ 38.3 ಓವರ್‌ಗಳಲ್ಲಿ 237 ರನ್ ಪೇರಿಸಿ ಗೆಲುವನ್ನು ದಾಖಲಿಸಿತು.