ಕನ್ನಾಳೆ ಸಂಪತ್ತಿನ ಮೂಲ ಹುಡುಕಾಟ
ಆರೋಪಿ ಬಸವರಾಜ ಕನ್ನಾಳೆ ಸಂಪತ್ತಿನ ಮೂಲದ ಬಗ್ಗೆ ಸಿಐಡಿ ತಂಡ ಮಾಹಿತಿ ಕಲೆ ಹಾಕುತ್ತಿದೆ. ಬೀದರ್ ನಗರದ ನ್ಯೂ ಆದರ್ಶ ಕಾಲೋನಿಯಲ್ಲಿನ ಇನ್ಸೂರೆನ್ಸ್ ಸಂಸ್ಥೆ ಹಾಗೂ ಭಾಲ್ಕಿಯಲ್ಲಿನ ಓಂ ಲಕ್ಷ್ಮಿ ಸೌಹಾರ್ದ ಸಹಕಾರ ಸಂಘ, ಕನ್ನಾಳೆ ಟ್ರಾವೆಲ್‌ನಲ್ಲಿ ಕೋಟಿ ಕೋಟಿ ರುಪಾಯಿ ಹಣ ಹೂಡಿಕೆ ಮಾಡಿರುವ ಬಗ್ಗೆ ತನಿಖೆ ನಡೆದಿದೆ.