ಅಮಾವಾಸ್ಯೆಯ ಅಂಗವಾಗಿ ಓಂ ಶಕ್ತಿ ದೇವಾಲಯದಲ್ಲಿ ಚಂಡಿಕಾಯಾಗ ಸಮರ್ಪಣೆ
ಮಹಾ ಮಂಗಳಾರತಿ ನಂತರ ಓಂಶಕ್ತಿ ದೇವತೆಯ ಉತ್ಸವ ಮೂರ್ತಿಯನ್ನು ಹೂವುಗಳಿಂದ ಅಲಂಕೃತ ವಾದ ರಥದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರುವಣಿಗೆಯಲ್ಲಿ ನೂರಾರು ಮಂದಿ ಮಹಿಳೆಯರು ಅಂಬಲಿ ಕಲಶೋತ್ಸವದಲ್ಲಿ ಪಾಲ್ಗೊಂಡಿ ದ್ದರು. ದೇವಾಲಯದ ಆವರಣದಲ್ಲಿ ನಿರ್ಮಿಸಿದ್ದ ಅಗ್ನಿಕುಂಡವನ್ನು ಭಕ್ತಗಣ ತುಳಿದು ಭಕ್ತಿಯನ್ನು ಸಮರ್ಪಿಸಿತು.

ಆಷಾಢ ಮಾಸದ ಅಮಾವಾಸ್ಯೆ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ಓಂ ಶಕ್ತಿ ದೇವಾಲಯದಲ್ಲಿ ಚಂಡಿಕಾಯಾಗವನ್ನು ನೆರವೇರಿಸಲಾಯಿತು.

ಗೌರಿಬಿದನೂರು: ಆಷಾಢ ಮಾಸದ ಅಮಾವಾಸ್ಯೆ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ಓಂ ಶಕ್ತಿ ದೇವಾಲಯದಲ್ಲಿ ಚಂಡಿಕಾಯಾಗವನ್ನು ನೆರವೇರಿಸಲಾಯಿತು.
ಚಂಡಿಕಾಯಾಗದ ಅಂಗವಾಗಿ ಮುಂಜಾನೆಯಿAದಲೇ ವೇ,ಬ್ರ,ಸುಬ್ರಹ್ಮಣ್ಯ ಶಾಸ್ತ್ರೀಗಳ ನೇತೃತ್ವಲ್ಲಿ ಗಣಪತಿ ಹೋಮ,ನವಗ್ರಹ ಹೋಮ,ಮೃತ್ಯುಂಜಯ ಹೋಮ,ಮಹಾ ಚಂಡಿಕಾಯಾಗ,ಗೋಪೂಜೆ, ಬಲಿಹರಣ,ಪೂರ್ಣಾಹುತಿ ಮುಂತಾದ ದೇವತಾ ಕಾರ್ಯಗಳನ್ನು ಅತ್ಯಂತ ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು.
ಇದನ್ನೂ ಓದಿ: Chikkaballapur News: ಯುವಜನರ ಭವಿಷ್ಯಕ್ಕಾಗಿ ಯುವನಿಧಿ ಯೋಜನೆ ಜಾರಿ : ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್ ರಮೇಶ್
ಮಹಾ ಮಂಗಳಾರತಿ ನಂತರ ಓಂಶಕ್ತಿ ದೇವತೆಯ ಉತ್ಸವ ಮೂರ್ತಿಯನ್ನು ಹೂವುಗಳಿಂದ ಅಲಂಕೃತವಾದ ರಥದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರುವಣಿಗೆಯಲ್ಲಿ ನೂರಾರು ಮಂದಿ ಮಹಿಳೆಯರು ಅಂಬಲಿ ಕಲಶೋತ್ಸವದಲ್ಲಿ ಪಾಲ್ಗೊಂಡಿ ದ್ದರು. ದೇವಾಲಯದ ಆವರಣದಲ್ಲಿ ನಿರ್ಮಿಸಿದ್ದ ಅಗ್ನಿಕುಂಡವನ್ನು ಭಕ್ತಗಣ ತುಳಿದು ಭಕ್ತಿಯನ್ನು ಸಮರ್ಪಿಸಿತು.ಪೂಜೆಯಲ್ಲಿ ಭಾಗಿಯಾಗಿದ್ದ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ವೇಣುಸ್ವಾಮಿ, ವಿಜಯಮ್ಮ, ಸರೋಜಮ್ಮ, ರಾಧ, ನಾಗಮಣಿ, ನಿರ್ಮಲ, ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್, ಆದಿತ್ಯ ಮಂಜುನಾಥ್, ವೆಂಕಟಾದ್ರಿ, ರಮೇಶ್ ಬಾಬು, ದೇವು, ಅಂಬರೀಶ್, ಅಶೋಕ, ಅನಿಲ್, ನಗರಸಭಾ ಸದಸ್ಯ ಮರ್ಕೆಟ್ ಮೋಹನ್, ಪರಮೇಶಿ, ಅನಿಲ್, ರವಿಕುಮಾರ್, ಪ್ರದೀಪ್, ಪರಮೇಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು.