ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಮಳಿಗೆ ನಿರ್ಮಾಣ : ಉಪಾಧ್ಯಕ್ಷ ನಾಗರಾಜ್
ಎಂ.ಜಿ.ರಸ್ತೆಯ ವಿಸ್ತರಣೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಚನ್ನಯ್ಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ತಾತ್ಕಾಲಿಕ ತಳ್ಳು ಗಾಡಿಗಳು, ಪೆಟ್ಟಿಗೆ ಅಂಗಡಿಗಳನ್ನಿಟ್ಟುಕೊಂಡಿರುವ ಬೀದಿಬದಿಯ ವ್ಯಾಪಾರಸ್ಥರು ಹೂವು, ಹಣ್ಣು, ಎಲೆ ಅಡಕೆ, ಸಿಹಿ ತಿಂಡಿ ತಿನಿಸು ಸೇರಿದಂತೆ ಇತರ ಸಾಮಗ್ರಿಗಳ ವಹಿವಾಟಿನ ಆದಾಯವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.


ಚಿಕ್ಕಬಳ್ಳಾಪುರ: ನಗರದ ಹೃದಯ ಭಾಗದಲ್ಲಿರುವ ಚನ್ನಯ್ಯ ಉದ್ಯಾನ ಸುತ್ತಲು ವಹಿವಾಟು ನಡೆಸುವ ಹೂವು, ಹಣ್ಣು ಅಂಗಡಿ, ಚಿಲ್ಲರೆ ವ್ಯಾಪಾರಸ್ಥರಿಗೆ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ನಗರಸಭೆಯು ತೀರ್ಮಾನ ಕೈಗೊಂಡಿದೆ ಎಂದು ಉಪಾಧ್ಯಕ್ಷ ಜೆ.ನಾಗರಾಜ್ ತಿಳಿಸಿದರು.
ಎಂ.ಜಿ.ರಸ್ತೆಯ ವಿಸ್ತರಣೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಚನ್ನಯ್ಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ತಾತ್ಕಾಲಿಕ ತಳ್ಳು ಗಾಡಿಗಳು, ಪೆಟ್ಟಿಗೆ ಅಂಗಡಿಗಳನ್ನಿಟ್ಟುಕೊಂಡಿರುವ ಬೀದಿಬದಿಯ ವ್ಯಾಪಾರಸ್ಥರು ಹೂವು, ಹಣ್ಣು, ಎಲೆ ಅಡಕೆ, ಸಿಹಿ ತಿಂಡಿ ತಿನಿಸು ಸೇರಿದಂತೆ ಇತರ ಸಾಮಗ್ರಿಗಳ ವಹಿವಾಟಿನ ಆದಾಯವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಿಂದೆ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಉದ್ಯಾನದ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಇದೀಗ ಮತ್ತೊಮ್ಮೆ ಅಭಿವೃದ್ಧಿ ಕೆಲಸದ ಹಿನ್ನೆಲೆಯಲ್ಲಿ ನೆಲೆಯನ್ನು ಕಳೆದುಕೊಳ್ಳ ಲಾಗುತ್ತಿದೆ. ಇದರ ಆತಂಕದ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ್ದು ಬೀದಿ ಬದಿ ವ್ಯಾಪಾರಸ್ಥರಿಗೆ ೩೦ ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಡುವ ಮೂಲಕ ಶಾಶ್ವತ ನೆಲೆ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: Chikkaballapur News: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಮಂಜೂರಾದ ಕಾಮಗಾರಿಗಳಗಳ ಪರಿಶೀಲನೆ
ಮುಕ್ತಿಧಾಮ ವಾಹನ ಸೇವೆ
ಮುಕ್ತಿಧಾಮ ವಾಹನವನ್ನು ನಗರಸಭೆಯಿಂದ ಖರೀದಿಸಲು ೧೫ ಲಕ್ಷ ಅನುದಾನ ಮೀಸಲಿಡಲು ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಚಿಕ್ಕಬಳ್ಳಾಪುರವು ಜಿಲ್ಲಾ ಕೇಂದ್ರವಾಗಿ ೧೬ ವರ್ಷಗಳೇ ಪೂರೈಸಿದೆ. ಆದರೆ, ನಗರವಾಸಿಗಳು ಸಂಬAಧಿಕರ ಅಂತ್ಯಸAಸ್ಕಾರ ಕೈಗೊಳ್ಳಲು ಒಂದು ಶವಸಾಗಾಟದ ವಾಹನ ಸೇವೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ. ದೂರದ ಸ್ಮಶಾನಗಳಿಗೆ ಮೃತದೇಹಗಳನ್ನು ದುಬಾರಿ ಬಾಡಿಗೆ ನೀಡಿ ಖಾಸಗಿ ವಾಹನಗಳಲ್ಲಿ ತೆಗೆದುಕೊಂಡು ಹೋಗಲು ಆರ್ಥಿಕ ಸಮಸ್ಯೆಗೆ ಸಿಲುಕಿಕೊಳ್ಳು ತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ನಗರಸಭೆಯಿಂದಲೇ ಮುಕ್ತಿಧಾಮ ವಾಹನ ವೊಂದನ್ನು ಖರೀದಿಸಿ, ಸೇವೆ ಒದಗಿಸಲು ತೀರ್ಮಾನಿಸಲಾಗಿದೆ. ಇದರ ಅನುಷ್ಠಾನದಿಂದಾಗಿ ನಗರ ವ್ಯಾಪ್ತಿಯಲ್ಲಿ ಇನ್ಮುಂದೆ ಅನಾಥ ಶವ ಸಾಗಿಸಲು ಇಲ್ಲವೇ ಬಡ ಕುಟುಂಬದ ಸಂಬಂಧಿಕರ ಶವ ಸಂಸ್ಕಾರಕ್ಕೆ ಅನುಕೂಲವಾಗಲಿದೆ.
*
ಚೆನ್ನಯ್ಯ ಉದ್ಯಾನ ಸಮೀಪದ ಬೀದಿಬದಿ ವ್ಯಾಪಾರಸ್ಥರಿಗೆ ವಹಿವಾಟಿಗೆ ಶಾಶ್ವತ ನೆಲೆ ಕಲ್ಪಿಸಿ ಕೊಡಲು ೩೦ ಅಂಗಡಿಗಳ ನಿರ್ಮಾಣ, ೧೫ ಲಕ್ಷ ರೂ ಅನುದಾನವನ್ನು ಮುಕ್ತಿಧಾಮ ವಾಹನ ಖರೀದಿಗೆ ಮೀಸಲಿಡುವುದರ ಬಗ್ಗೆ ಮೊದಲಿನಿಂದಲೂ ಗಮನ ಸೆಳೆಯಲಾಗಿತ್ತು. ಇದಕ್ಕೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಸಿಕ್ಕಿರುವುದು ಖುಷಿಯ ವಿಚಾರ.
ಜೆ.ನಾಗರಾಜ್, ನಗರಸಭೆ ಉಪಾಧ್ಯಕ್ಷ, ಚಿಕ್ಕಬಳ್ಳಾಪುರ